ಬಜಾಲ್ ಕಲ್ಲುರ್ಟಿ ದೇವಸ್ಥಾನ ಸಮೀಪದ ರಸ್ತೆ ಅಭಿವೃದ್ದಿಗೆ ಶಿಲಾನ್ಯಾಸ - Karavali Times ಬಜಾಲ್ ಕಲ್ಲುರ್ಟಿ ದೇವಸ್ಥಾನ ಸಮೀಪದ ರಸ್ತೆ ಅಭಿವೃದ್ದಿಗೆ ಶಿಲಾನ್ಯಾಸ - Karavali Times

728x90

25 October 2026

ಬಜಾಲ್ ಕಲ್ಲುರ್ಟಿ ದೇವಸ್ಥಾನ ಸಮೀಪದ ರಸ್ತೆ ಅಭಿವೃದ್ದಿಗೆ ಶಿಲಾನ್ಯಾಸ

ಮಂಗಳೂರು, ಅಕ್ಟೋಬರ್ 25, 2026 (ಕರಾವಳಿ ಟೈಮ್ಸ್) : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 53ನೇ ಬಜಾಲ್ ವಾರ್ಡಿನ ಕಲ್ಲುರ್ಟಿ ದೈವಸ್ಥಾನದ ಹತ್ತಿರದಿಂದ ಅಡಪ ಅವರ ಮನೆಯ ಬದಿಯಿಂದಾಗಿ ಬಜಾಲಿಗೆ ಜೋಡಣೆಯಾಗುವ ಮುಂದುವರೆದ ರಸ್ತೆ ಅಭಿವೃದ್ಧಿ ಕಾಮಗಾರಿಗಾಗಿಯು 50 ಲಕ್ಷ ರೂಪಾಯಿ ವೆಚ್ಚದಲ್ಲಿ ನಡೆಯಲಿದ್ದು ಶಾಸಕ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ಗುದ್ದಲಿ ಪೂಜೆ ನೆರವೇರಿತು.

ಈ ವೇಳೆ ಮಾತನಾಡಿದ ಶಾಸಕರು, ರಾಜ್ಯ ಸರ್ಕಾರವು ಪ್ರತೀ ಶಾಸಕರಿಗೆ ನೀಡಿರುವ ಅತ್ಯಲ್ಪ ಅನುದಾನದಲ್ಲೇ ಅಭಿವೃದ್ಧಿ ಕಾರ್ಯ ನಡೆಸುವ ಅನಿವಾರ್ಯತೆಯಿದೆ. ಆದರೂ ನಿಮ್ಮೆಲ್ಲರ ಬೇಡಿಕೆಯಂತೆ ಈ ರಸ್ತೆ ಅಭಿವೃದ್ಧಿ ಕಾರ್ಯವನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಳ್ಳಲಾಗಿದ್ದು ಕಾಮಗಾರಿ ವೇಳೆ ಸ್ಥಳೀಯರು ಸಹಕರಿಸುವಂತೆ ಮನವಿ ಮಾಡಿದರು. 

ಈ ಸಂದರ್ಭ ಪ್ರಮುಖರಾದ ಚಂದ್ರಶೇಖರ್ ಬಜಾಲ್, ಕಿರಣ್ ರೈ, ಸುಕೇಶ್ ಅಳಪೆ ಮೊದಲಾದವರು  ಉಪಸ್ಥಿತರಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಬಜಾಲ್ ಕಲ್ಲುರ್ಟಿ ದೇವಸ್ಥಾನ ಸಮೀಪದ ರಸ್ತೆ ಅಭಿವೃದ್ದಿಗೆ ಶಿಲಾನ್ಯಾಸ Rating: 5 Reviewed By: karavali Times
Scroll to Top