ಎಸ್.ಐ.ಆರ್. ಲೋಪದೋಷಗಳ ವಿರುದ್ದ ಸಮರ ನಿರಂತರ, ಜನರ ಮತ ಹಕ್ಕು ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ ಹೋರಾಟ ಮುಂದುವರಿಯಲಿದೆ : ಸಿಎಂ ಡಿಕೆಶಿ - Karavali Times ಎಸ್.ಐ.ಆರ್. ಲೋಪದೋಷಗಳ ವಿರುದ್ದ ಸಮರ ನಿರಂತರ, ಜನರ ಮತ ಹಕ್ಕು ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ ಹೋರಾಟ ಮುಂದುವರಿಯಲಿದೆ : ಸಿಎಂ ಡಿಕೆಶಿ - Karavali Times

728x90

15 October 2026

ಎಸ್.ಐ.ಆರ್. ಲೋಪದೋಷಗಳ ವಿರುದ್ದ ಸಮರ ನಿರಂತರ, ಜನರ ಮತ ಹಕ್ಕು ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ ಹೋರಾಟ ಮುಂದುವರಿಯಲಿದೆ : ಸಿಎಂ ಡಿಕೆಶಿ

ಮಂಗಳೂರು, ಅಕ್ಟೋಬರ್ 16, 2026 (ಕರಾವಳಿ ಟೈಮ್ಸ್) : ಎಸ್.ಐ.ಆರ್. ಅಕ್ರಮದ ವಿರುದ್ದ ಕಾಂಗ್ರೆಸ್ ಹೋರಾಟ ನಿರಂತವಾಗಿರಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟವಾಗಿ ಹೇಳಿದರು. 

ಮಂಗಳೂರು-ಕುದ್ರೋಳಿ ದಸರಾ ಉತ್ವವದಲ್ಲಿ ಭಾಗವಹಿಸಲು ಅಕ್ಟೋಬರ್ 15 ರಂದು ಮಂಗಳೂರಿಗೆ ಆಗಮಿಸಿದ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ದೇಶದ ನಾಗರಿಕರ ಬದುಕುವ ಹಕ್ಕಿನಷ್ಟೇ ಮಹತ್ವವನ್ನು ಹೊಂದಿರುವ ಮತದಾನದ ಹಕ್ಕು ಉಳಿಸಿಕೊಳ್ಳುವ ಮೂಲಕ ದೇಶದ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳುವುದೂ ಅಷ್ಟೇ ಮುಖ್ಯ ಎಂದರು. 

ಎಸ್‍ಐಆರ್ ಪ್ರಕ್ರಿಯೆಯಲ್ಲಿರುವ ಲೋಪದೋಷಗಳ ವಿರುದ್ಧ ಹಾಗೂ ದೇಶದ ಮತದಾರರ ಹಕ್ಕುಗಳ ರಕ್ಷಣೆಗಾಗಿ ಈಗಾಗಲೇ ನಾವು ಸುಪ್ರೀಂ ಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿದ್ದು, ನಮ್ಮ ಈ ಕಾನೂನು ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. 

ಎಸ್‍ಐಆರ್‍ನಲ್ಲಿ ಕಂಡುಬಂದಿರುವ ಹಲವು ಗಂಭೀರ ಅಕ್ರಮಗಳು ಮತ್ತು ಲೋಪದೋಷಗಳನ್ನು ಪ್ರಶ್ನಿಸಿ ನಾವು ಸುಪ್ರೀಂ ಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದೇವೆ. ‘ರೈಟ್ ಟು ವೋಟ್ ಈಸ್ ರೈಟ್ ಟು ಲೈವ್. ಈ ದೇಶದ ಪ್ರಜಾಪ್ರಭುತ್ವ ಮತ್ತು ರಾಜ್ಯದ ಮತದಾರರ ಹಿತಾಸಕ್ತಿಯನ್ನು ಕಾಪಾಡಲು ನಾವೆಲ್ಲರೂ ಒಗ್ಗಟ್ಟಾಗಿ ಣೀಂತು ಬೃಹತ್ ಪ್ರತಿಭಟನೆ ನಡೆಸಿದ್ದೇವೆ ಮತ್ತು ಮುಂದೆಯೂ ಈ ಹೋರಾಟ ಮುಂದುವರಿಸಲಿದ್ದೇವೆ ಎಂದವರು ಸ್ಪಷ್ಟಪಡಿಸಿದರು. 

ನಮ್ಮ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ಸಂಪೂರ್ಣ ಆಶೀರ್ವಾದದೊಂದಿಗೆ ನಾವು ರಾಜ್ಯದಲ್ಲಿ ಸರ್ಕಾರವನ್ನು ಮುನ್ನಡೆಸುತ್ತಿದ್ದೇವೆ. ನಮ್ಮ ನಾಯಕರ ನಡವಳಿಕೆಯಲ್ಲಿ ಅಪಾರ ಮಾನವೀಯತೆ ಮತ್ತು ಶಕ್ತಿ ಇದೆ. ಈ ಬಗ್ಗೆ ವಿರೋಧ ಪಕ್ಷಗಳಿಗೆ ಯಾವುದೇ ಸಂದೇಹ ಬೇಡ ಎಂದು ಸಿಎಂ ವಿರೋಧ ಪಕ್ಷಗಳ ನಡವಳಿಕೆ ವಿರುದ್ದ ಚಾಟಿ ಬೀಸಿದರು. 

ರಾಹುಲ್ ಗಾಂಧಿ ಅವರನ್ನು ಮಾನವೀಯತೆಯ ಬಲವಾದ ಪ್ರಜ್ಞೆಯನ್ನು ಹೊಂದಿರುವ ನಾಯಕ ಎಂದು ಬಣ್ಣಿಸಿದ ಡಿಕೆಶಿ, ರಾಜಕೀಯ ನಾಯಕರು ಸಣ್ಣಪುಟ್ಟ ಘಟನೆಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಬಾರದು ಎಂದರು. 

  • Blogger Comments
  • Facebook Comments

0 comments:

Post a Comment

Item Reviewed: ಎಸ್.ಐ.ಆರ್. ಲೋಪದೋಷಗಳ ವಿರುದ್ದ ಸಮರ ನಿರಂತರ, ಜನರ ಮತ ಹಕ್ಕು ಹಾಗೂ ಪ್ರಜಾಪ್ರಭುತ್ವದ ಉಳಿವಿಗಾಗಿ ಹೋರಾಟ ಮುಂದುವರಿಯಲಿದೆ : ಸಿಎಂ ಡಿಕೆಶಿ Rating: 5 Reviewed By: karavali Times
Scroll to Top