ಭಾರತ್ ಮಾತಾ ಕೀ ಜೈ ವಿಚಾರದಲ್ಲಿ ಪೊಲೀಸರ ಮೇಲೆ ಗೂಬೆ ಕೂರಿಸುವ ಯತ್ನಕ್ಕೆ ಪೊಲೀಸ್ ಕಮಿಷನರ್ ರೆಡ್ಡಿ ಗರಂ : ತೀಕ್ಷ್ಣ ಪ್ರತಿಕ್ರಿಯೆ - Karavali Times ಭಾರತ್ ಮಾತಾ ಕೀ ಜೈ ವಿಚಾರದಲ್ಲಿ ಪೊಲೀಸರ ಮೇಲೆ ಗೂಬೆ ಕೂರಿಸುವ ಯತ್ನಕ್ಕೆ ಪೊಲೀಸ್ ಕಮಿಷನರ್ ರೆಡ್ಡಿ ಗರಂ : ತೀಕ್ಷ್ಣ ಪ್ರತಿಕ್ರಿಯೆ - Karavali Times

728x90

15 October 2026

ಭಾರತ್ ಮಾತಾ ಕೀ ಜೈ ವಿಚಾರದಲ್ಲಿ ಪೊಲೀಸರ ಮೇಲೆ ಗೂಬೆ ಕೂರಿಸುವ ಯತ್ನಕ್ಕೆ ಪೊಲೀಸ್ ಕಮಿಷನರ್ ರೆಡ್ಡಿ ಗರಂ : ತೀಕ್ಷ್ಣ ಪ್ರತಿಕ್ರಿಯೆ

ಮಂಗಳೂರು, ಅಕ್ಟೋಬರ್ 15, 2026 (ಕರಾವಳಿ ಟೈಮ್ಸ್) : ಭಾರತ ಮಾತಾ ಕೀ ಜೈ ವಿಚಾರದಲ್ಲಿ ಎಬಿವಿಪಿ ಹಾಗೂ ಮಂಗಳೂರು ಶಾಸಕರ ಆರೋಪಕ್ಕೆ ಮಂಗಳೂರು ಪೊಲೀಸ್ ಕಮಿಷನರ್ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. 

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು, ನಾವು, ಪೆÇಲೀಸರು, ಭಾರತ ಮಾತೆಯ ಹೆಮ್ಮೆಯ ಪುತ್ರ-ಪುತ್ರಿಯರು. ನಮ್ಮ ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ಮತ್ತು ಅದನ್ನು ರಕ್ಷಿಸುವ ಬದ್ಧತೆಯೊಂದಿಗೆ ನಾವು ಪೆÇಲೀಸ್ ಪಡೆಯನ್ನು ಸೇರಿದ್ದೇವೆ. ಸಂವಿಧಾನವನ್ನು ಎತ್ತಿಹಿಡಿಯಲು ಹಾಗೂ ಭಾರತದ ಏಕತೆ ಮತ್ತು ಅಖಂಡತೆಯನ್ನು ರಕ್ಷಿಸಲು ನಾವು ಪ್ರಮಾಣ ವಚನ ಸ್ವೀಕರಿಸಿದ್ದೇವೆ. ನಾವು ಈ ಜವಾಬ್ದಾರಿಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಮತ್ತು ಹೆಮ್ಮೆಯಿಂದ ನಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತೇವೆ.

ದುರದೃಷ್ಟವಶಾತ್, ರಾಷ್ಟ್ರದ ಗಡಿಗಳ ಒಳಗೆ ದೇಶವನ್ನು ರಕ್ಷಿಸುವಾಗ, ಕೆಲವೊಮ್ಮೆ ಕಾನೂನು ಉಲ್ಲಂಘಿಸುವ ನಮ್ಮದೇ ಸಹ-ನಾಗರಿಕರನ್ನು ನಿಯಂತ್ರಿಸಬೇಕಾದ ಪರಿಸ್ಥಿತಿ ಎದುರಾಗುತ್ತದೆ. ದೇಶದ ಕಾನೂನುಗಳನ್ನು ಉಲ್ಲಂಘಿಸುವವರು ಮತ್ತು ಸಂವಿಧಾನದ ಆಶಯಗಳಿಗೆ ಅಗೌರವ ತೋರುವವರು, ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ‘ದೇಶಭಕ್ತಿ’ಯನ್ನು ಒಂದು ಗುರಾಣಿಯನ್ನಾಗಿ ಬಳಸಿಕೊಳ್ಳಲು ಸಾಧ್ಯವಿಲ್ಲ. ಯಾರಾದರೂ ಅಪರಾಧವೆಸಗಿದಾಗ ಅಥವಾ ಸಾರ್ವಜನಿಕ ಶಾಂತಿಗೆ ಭಂಗ ತಂದಾಗ, “ಭಾರತ ಮಾತಾ ಕೀ ಜೈ” ಎಂದು ಘೋಷಣೆ ಕೂಗಿದ ಮಾತ್ರಕ್ಕೆ ಅವರು ಕಾನೂನು ಕ್ರಮದಿಂದ ವಿನಾಯಿತಿ ಪಡೆಯಲು ಸಾಧ್ಯವಿಲ್ಲ.

ತಮ್ಮ ತಪ್ಪು ಕೃತ್ಯಗಳಿಂದ ಗಮನವನ್ನು ಬೇರೆಡೆಗೆ ಸೆಳೆಯಲು ದೇಶಭಕ್ತಿಯ ಘೋಷಣೆಗಳನ್ನು ಬಳಸುವುದು ರಾಷ್ಟ್ರಸೇವೆಯಾಗುವುದಿಲ್ಲ. ಬದಲಾಗಿ, ತಮ್ಮ ಕೃತ್ಯಗಳು ಭಾರತ ಮಾತೆಗೆ ಹೆಮ್ಮೆ ತರುವಂತಹ ಮೌಲ್ಯಗಳು ಮತ್ತು ತತ್ವಗಳನ್ನು ಎತ್ತಿಹಿಡಿಯುತ್ತವೆಯೇ ಎಂದು ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಭಾರತ ಮಾತಾ ಕೀ ಜೈ! ಎಂದು ಕಮಿಷನರ್ ಪ್ರತಿಕ್ರಿಯೆ ನೀಡಿದ್ದಾರೆ. 

ಇದೇ ವೇಳೆ ಮಂಗಳೂರಿನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಬಗ್ಗೆಯೂ ಕೆಲವೊಂದು ಸ್ಪಷ್ಟನೆಗಳನ್ನು ನೀಡಿದ್ದಾರೆ. 

ಪ್ರತಿಭಟಿಸಲು ಬಯಸುವ ಯಾರಿಗೂ ನಾವು ಎಂದಿಗೂ ಅನುಮತಿಯನ್ನು ನಿರಾಕರಿಸಿಲ್ಲ. ಶಾಂತಿಭಂಗವಾಗುವ ಸಾಧ್ಯತೆಯಿರುವ ಸಂದರ್ಭಗಳಲ್ಲಿ ನಾವು ಕೆಲವು ಷರತ್ತುಗಳನ್ನು ವಿಧಿಸುತ್ತೇವೆ; ಹೀಗೆ ಮಾಡುವುದು ಸಾಮಾನ್ಯವಾಗಿದೆ. ಆದರೆ, ಈ ಘಟನೆಯಲ್ಲಿ ಅವರು ಅನುಮತಿಯನ್ನೂ ಕೇಳಲಿಲ್ಲ ಅಥವಾ ಪೆÇಲೀಸರಿಗೆ ಯಾವುದೇ ಮಾಹಿತಿ ನೀಡಲಿಲ್ಲ. ಕಾಲೇಜಿನ ವಿದ್ಯಾರ್ಥಿಗಳ ವಿರುದ್ಧ ಪೆÇಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಅವರಿಗೆ ಪ್ರತಿಭಟಿಸಲು ಅವಕಾಶ ನೀಡಲಾಯಿತು ಮತ್ತು ಅದಕ್ಕೆ ಅಗತ್ಯವಾದ ವ್ಯವಸ್ಥೆಯನ್ನೂ ಮಾಡಿಕೊಡಲಾಯಿತು. ಹೊರಗಿನಿಂದ ಒಳಗೆ ಪ್ರವೇಶಿಸಲು ಪ್ರಯತ್ನಿಸಿದವರ ವಿಷಯದಲ್ಲಿ, ಕಾಲೇಜು ಆಡಳಿತ ಮಂಡಳಿಯು ದೂರು ನೀಡಿದರೆ ಅದು ‘ಅನಧಿಕೃತ ಪ್ರವೇಶ’ ಆಗುತ್ತದೆ; ಆದ್ದರಿಂದ ಅವರನ್ನು ಒಳಗೆ ಪ್ರವೇಶಿಸದಂತೆ ತಡೆಯಲಾಯಿತು. ಅವರನ್ನು ವಶಕ್ಕೆ ಪಡೆದ ನಂತರ, ಇಂತಹ ಘಟನೆ ಮರುಕಳಿಸದಂತೆ ಖಚಿತಪಡಿಸಿಕೊಳ್ಳಲು ನಾವು ಅವರಿಂದ ಮುಚ್ಚಳಿಕೆ ಬರೆಸಿಕೊಳ್ಳಲು ಉದ್ದೇಶಿಸಿದ್ದೆವು. ಆದರೆ, ಅವರು ವಿದ್ಯಾರ್ಥಿಗಳಾಗಿದ್ದರಿಂದ ಅವರ ಮನವಿಯನ್ನು ಪರಿಗಣಿಸಿ, ಉದಾರ ದೃಷ್ಟಿಕೋನದಿಂದ ಆ ಪ್ರಕ್ರಿಯೆಯನ್ನು ಕೈಬಿಡಲಾಯಿತು. ಹೀಗಿದ್ದರೂ, ಕಾಲೇಜು ಆಡಳಿತವು ಅವರ ಬೇಡಿಕೆಗಳನ್ನು ಒಪ್ಪಿಕೊಂಡ ನಂತರವೂ, ಅವರು ಮಧ್ಯಾಹ್ನ ಮತ್ತೆ ಅಲ್ಲಿಗೆ ಹೋಗಿ ವಿದ್ಯಾರ್ಥಿಗಳನ್ನು ಪ್ರಚೋದಿಸಲು ಪ್ರಯತ್ನಿಸಿದರು. ಈ ಕಾರಣದಿಂದ ಅವರನ್ನು ಮತ್ತೊಮ್ಮೆ ವಶಕ್ಕೆ ಪಡೆಯಲಾಯಿತು ಮತ್ತು ನಂತರ ಬಿಡುಗಡೆ ಮಾಡಲಾಯಿತು. ಪೆÇಲೀಸರು ಅವರನ್ನು ಒಮ್ಮೆ ಮಾತ್ರ ವಶಕ್ಕೆ ಪಡೆದಿದ್ದರು ಎಂದು ಅನೇಕರು ಭಾವಿಸಿದ್ದರು. ಇದಕ್ಕಾಗಿ ಈ ಸ್ಪಷ್ಟನೆಯನ್ನು ನೀಡುತ್ತಿದ್ದೇವೆ ಎಂದು ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಭಾರತ್ ಮಾತಾ ಕೀ ಜೈ ವಿಚಾರದಲ್ಲಿ ಪೊಲೀಸರ ಮೇಲೆ ಗೂಬೆ ಕೂರಿಸುವ ಯತ್ನಕ್ಕೆ ಪೊಲೀಸ್ ಕಮಿಷನರ್ ರೆಡ್ಡಿ ಗರಂ : ತೀಕ್ಷ್ಣ ಪ್ರತಿಕ್ರಿಯೆ Rating: 5 Reviewed By: karavali Times
Scroll to Top