ಮೋದಿ ಏಜೆಂಟರಂತೆ ಕಾರ್ಯನಿರ್ವಹಿಸುವ ಮುಖ್ಯ ಚುನಾವಣಾ ಆಯುಕ್ತರನ್ನು ತಕ್ಷಣ ವಜಾಗೊಳಿಸಿ : ರಾಮಣ್ಣ ವಿಟ್ಲ ಆಗ್ರಹ - Karavali Times ಮೋದಿ ಏಜೆಂಟರಂತೆ ಕಾರ್ಯನಿರ್ವಹಿಸುವ ಮುಖ್ಯ ಚುನಾವಣಾ ಆಯುಕ್ತರನ್ನು ತಕ್ಷಣ ವಜಾಗೊಳಿಸಿ : ರಾಮಣ್ಣ ವಿಟ್ಲ ಆಗ್ರಹ - Karavali Times

728x90

2 October 2026

ಮೋದಿ ಏಜೆಂಟರಂತೆ ಕಾರ್ಯನಿರ್ವಹಿಸುವ ಮುಖ್ಯ ಚುನಾವಣಾ ಆಯುಕ್ತರನ್ನು ತಕ್ಷಣ ವಜಾಗೊಳಿಸಿ : ರಾಮಣ್ಣ ವಿಟ್ಲ ಆಗ್ರಹ

ಸಿಪಿಐಎಂಎಲ್ ಲಿಬರೇಶನ್ ವತಿಯಿಂದ ಚುನಾವಣಾ ಆಯುಕ್ತರ ವಿರುದ್ದ ಬಿ.ಸಿ.ರೋಡಿನಲ್ಲಿ ಪ್ರತಿಭಟನೆ 


ಬಂಟ್ವಾಳ, ಅಕ್ಟೋಬರ್ 02, 2026 (ಕರಾವಳಿ ಟೈಮ್ಸ್) :ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜಿನಾಮೆ ನೀಡಬೇಕು, ಭಾರತ ಚುನಾವಣಾ ಆಯೋಗದ ಸ್ವಾಯತ್ತತೆ ರಕ್ಷಿಸಿ, ಎಸ್ ಐ ಆರ್ ನಿಲ್ಲಿಸಿ, ಕೈ ಬಿಟ್ಟ ಮತದಾರರನ್ನು ಪುನಃ ಸೇರಿಸಿ, ಮುಖ್ಯ ಚುನಾವಣಾ ಆಯುಕ್ತರ ನೇಮಕ ಪ್ರಕ್ರಿಯೆ ಬದಲಾಗಬೇಕೆಂದು ಒತ್ತಾಯಿಸಿ

ದೇಶದಾದ್ಯಂತ ಎಡ ಪಕ್ಷಗಳಿಂದ ಕರೆ ನೀಡಿರುವ ಪ್ರತಿಭಟನೆಯ ಭಾಗವಾಗಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ, ಲೆನಿನ್ ವಾದಿ) ಲಿಬರೇಶನ್ ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ಅ 2 ರಂದು ಸಂಜೆ ಬಿ ಸಿ ರೋಡು ಜಂಕ್ಷನ್ನಿನಲ್ಲಿ ಪ್ರತಿಭಟನೆ ನಡೆಯಿತು. 

ಪ್ರತಿಭಟನೆಯನ್ನುದ್ದೇಶಿಸಿ ಸಿಪಿಐಎಂಎಲ್ ಲಿಬರೇಶನ್ ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ ಮಾತನಾಡಿ ಎಸ್ ಐ ಆರ್ ಪ್ರಕ್ರಿಯೆಯು ಅವೈಜ್ಞಾನಿಕವಾಗಿದ್ದು ದಾಖಲಾತಿಯ ಹೆಸರಿನಲ್ಲಿ ಬಡವರನ್ನು, ದಲಿತ, ಆದಿವಾಸಿ ಅಲ್ಪಸಂಖ್ಯಾತರನ್ನು ಚುನಾವಣಾ ಪ್ರಕ್ರಿಯಿಂದಲೇ ದೂರ ಮಾಡುವ ಕೇಂದ್ರ ಸರಕಾರದ ಒಂದು ಷಡ್ಯಂತ್ರ ಎಂದು ಆರೋಪಿಸಿದರು. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಮೇಲೆ ಈಗಾಗಲೇ ಕೇರಳದಲ್ಲಿ ಪ್ರಕರಣವಿದ್ದು, ಈ ವ್ಯಕ್ತಿ ಕೇಂದ್ರದ ಮೋದಿ ಸರಕಾರದ ಏಜೆಂಟರಾಗಿ ವರ್ತಿಸಿದ್ದು ಆತನನ್ನು ಕೂಡಲೇ ವಜಾಗೊಳಿಸಬೇಕೆಂದು ಒತ್ತಾಯಿಸಿದರು.

ಸಿಪಿಐಎಂಎಲ್ ಲಿಬರೇಶನ್ ರಾಜ್ಯ ಸಮಿತಿ ಸದಸ್ಯ ಮೋಹನ್ ಕೆ ಇ ಮಾತನಾಡಿ, ಎಸ್ ಐ ಆರ್ ವಿರುದ್ಧ ಇಂದು ದೇಶದಾದ್ಯಂತ ದೊಡ್ಡ ಮಟ್ಟದ ಹೋರಾಟಗಳು ನಡೆಯುತ್ತಿದ್ದರೂ ಕೇಂದ್ರ ಸರಕಾರ ಮೌನವಾಗಿದ್ದು, ಬಿಜೆಪಿಯನ್ನು ಅಧಿಕಾರಕ್ಕೆ ತರಲು ಅವರಿಗೆ ಬೇಕಾದ ರೀತಿಯಲ್ಲಿ ಎಸ್ ಐ ಆರ್ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ಆರ್ ವೈ ಎ ರಾಜ್ಯ ಸಹ ಸಂಚಾಲಕ ಮಹಮ್ಮದ್ ಲುಕ್ಮಾನ್ ಕೆ ಎಂ ಮಾತನಾಡಿ, ಎಸ್ ಐ ಆರ್ ಪ್ರಕ್ರಿಯೆಯು ಸಂಪೂರ್ಣವಾಗಿ ಅಸಮರ್ಪಕವಾಗಿ ನಡೆದಿದ್ದು, ಸ್ವತಂತ್ರವಾಗಿ ಕಾರ್ಯಚರಿಸಬೇಕಿದ್ದ ಚುನಾವಣಾ ಆಯೋಗ ಕೇಂದ್ರ ಸರಕಾರದ ಕೈ ಗೊಂಬೆಯಾಗಿ ವರ್ತಿಸುತ್ತಿರುವಂತದ್ದು ಭಾರತದ ಪ್ರಜಾಪ್ರಭುತ್ವಕ್ಕೆ ಅವಮಾನಕರವಾದ ಸಂಗತಿಯಾಗಿದೆ. ಇಂದು ಎಸ್ ಐ ಆರ್ ವಿರುದ್ದ ದೆಹಲಿಯಲ್ಲಿ ವಿದ್ಯಾರ್ಥಿ ಯುವಜನ ಸಂಘಟನೆಗಳಿಂದ ದೊಡ್ಡ ಪ್ರತಿಭಟನೆ ನಡೆಯುತ್ತಿದ್ದು, ಇದನ್ನು ಪೆÇೀಲೀಸ್ ಬಲ ಪ್ರಯೋಗದ ಮೂಲಕ ಹತ್ತಿಕ್ಕಲು ಕೇಂದ್ರ ಸರಕಾರ ಪ್ರಯತ್ನಿಸುತ್ತಿದೆ. ಸರಕಾರದ ಈ ದೌರ್ಜನ್ಯ, ದಬ್ಬಾಳಿಕೆಯ ವಿರುದ್ಧ ದೇಶದಾದಾದ್ಯಂತ ಪ್ರಬಲ ಹೋರಾಟ ಮೂಡಿಬರಲಿದೆ, ಎಸ್ ಐ ಆರ್ ಪ್ರಕ್ರಿಯೆ ರದ್ದಾಗಿ ಗ್ಯಾನೇಶ್ ಕುಮಾರ್ ರಾಜಿನಾಮೆ ನೀಡುವವರೆಗೆ ಹೋರಾಟವನ್ನು ತೀವ್ರ ಗೊಳಿಸಬೇಕೆಂದು ಕರೆ ನೀಡಿದರು.

ಸಿಪಿಐಎಂಎಲ್ ಲಿಬರೇಶನ್ ಬಂಟ್ವಾಳ ತಾಲೂಕು ಕಾರ್ಯದರ್ಶಿ ತುಳಸೀದಾಸ್ ಆರ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಸಿಪಿಐಎಂಎಲ್ ಲಿಬರೇಶನ್ ಜಿಲ್ಲಾ ಸಮಿತಿ ಸದಸ್ಯರಾದ ಸಜೇಶ್ ವಿಟ್ಲ, ಮಹಮ್ಮದ್ ಮುಂಝಿರ್, ಸುಹೈಲ್, ತಾಲೂಕು ಸಮಿತಿ ಸದಸ್ಯರಾದ ಡೆನ್ನಿಸ್ ಡಿಸೋಜ, ವಸಂತ ಗಟ್ಟಿ, ಜಾನ್ ಡಿ ಸೋಜ, ಮಹಮ್ಮದ್ ಹಪೀಝ್ ಎ ಕೆ, ರಾಜೇಶ್ ಶೆಟ್ಟಿ, ಕುಂಞಪ್ಪ ಮೂಲ್ಯ, ಎಐಸಿಸಿಟಿಯು ಮುಖಂಡರಾದ ಶೌಕತ್ ಆಲಿ ಖಾನ್, ಅಚ್ಯುತ ಕಟ್ಟೆ, ಮಾರ್ಟಿನ್ ಬಂಟ್ವಾಳ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಮೋದಿ ಏಜೆಂಟರಂತೆ ಕಾರ್ಯನಿರ್ವಹಿಸುವ ಮುಖ್ಯ ಚುನಾವಣಾ ಆಯುಕ್ತರನ್ನು ತಕ್ಷಣ ವಜಾಗೊಳಿಸಿ : ರಾಮಣ್ಣ ವಿಟ್ಲ ಆಗ್ರಹ Rating: 5 Reviewed By: karavali Times
Scroll to Top