ಬಂಟ್ವಾಳ, ಅಕ್ಟೋಬರ್ 25, 2026 (ಕರಾವಳಿ ಟೈಮ್ಸ್) : ಬಾಳ್ತಿಲ ಗ್ರಾಮದ ಕುದ್ರಬೆಟ್ಟು ಎಂಬಲ್ಲಿ ಕಾರು ಡಿಕ್ಕಿ ಹೊಡೆದು ಹೆದ್ದಾರಿ ದಾಟುತ್ತಿದ್ದ ಮಹಿಳೆಯೋರ್ವರು ಗಾಯಗೊಂಡ ಘಟನೆ ಅ 22 ರಂದು ಸಂಭವಿಸಿದೆ.
ಗಾಯಗೊಂಡ ಮಹಿಳೆಯನ್ನು ಕಾಸರಗೋಡು-ಉಪ್ಪಳ ನಿವಾಸಿ ಅಬ್ದುಲ್ ಲತೀಫ್ ಕೆ ಎಂಬವರ ಪತ್ನಿ ಜಮೀಲಾ ಎಂದು ಹೆಸರಿಸಲಾಗಿದೆ. ಇವರು ಇಲ್ಲಿನ ಸಮುದ್ರ ಹೋಟೆಲಿನಲ್ಲಿ ಚಾ ಕುಡಿದು ಹೆದ್ದಾರಿ ದಾಟುತ್ತಿದ್ದ ಸಂದರ್ಭ ಶ್ರೀನಿವಾಸ್ ಎಂಬವರು ಚಲಾಯಿಸಿಕೊಂಡು ಬಂದ ಕಾರು ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ರಸ್ತೆಗೆಸೆಯಲ್ಪಟ್ಟ ಜಮೀಲಾ ಅವರ ತಲೆ, ಸೊಂಟ, ಕಾಲಿಗೆ ಗಾಯಗಳಾಗಿದ್ದು, ತಕ್ಷಣ ಅವರನ್ನು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಲತೀಫ್ ಅವರು ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











0 comments:
Post a Comment