ಸಜಿಪ ದಸರಾ ಶೋಭಾಯಾತ್ರೆ ವೇಳೆ ಪಿಕಪ್ ಡಿಕ್ಕಿಯಾಗಿ ಮಹಿಳೆ ಆಸ್ಪತ್ರೆಗೆ - Karavali Times ಸಜಿಪ ದಸರಾ ಶೋಭಾಯಾತ್ರೆ ವೇಳೆ ಪಿಕಪ್ ಡಿಕ್ಕಿಯಾಗಿ ಮಹಿಳೆ ಆಸ್ಪತ್ರೆಗೆ - Karavali Times

728x90

25 October 2026

ಸಜಿಪ ದಸರಾ ಶೋಭಾಯಾತ್ರೆ ವೇಳೆ ಪಿಕಪ್ ಡಿಕ್ಕಿಯಾಗಿ ಮಹಿಳೆ ಆಸ್ಪತ್ರೆಗೆ

ಬಂಟ್ವಾಳ, ಅಕ್ಟೋಬರ್ 25, 2026 (ಕರಾವಳಿ ಟೈಮ್ಸ್) : ಸಜಿಪ ಶಾರದೋತ್ಸವದ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯೋರ್ವರಿಗೆ ಅದೇ ಮೆರವಣಿಗೆಯಲ್ಲಿದ್ದ ಪಿಕಪ್ ವಾಹನ ಡಿಕ್ಕಿ ಹೊಡೆದು ಗಾಯಗೊಂಡ ಘಟನೆ ಅ 22 ರಂದು ರಾತ್ರಿ ವೇಳೆ ಸಂಭವಿಸಿದೆ. 

ಗಾಯಗೊಂಡ ಮಹಿಳೆಯನ್ನು ಕೊಕ್ಕಡ ನಿವಾಸಿ ಗುಣವತಿ ಎಂದು ಹೆಸರಿಸಲಾಗಿದೆ. ಇವರು ಸಜಿಪಮುನ್ನೂರು ಗ್ರಾಮದ ನಿವಾಸಿ ಪ್ರವೀಣ್ ಕುಮಾರ್ ಶೆಟ್ಟಿ ಅವರ ಮನೆಗೆ ಅ 22 ರಂದು ಶಾರದೋತ್ಸವ ಕಾರ್ಯಕ್ರಮದ ನಿಮಿತ್ತ ಬಂದಿದ್ದು, ಕಾರ್ಯಕ್ರಮ ನೋಡುವರೇ ರಾತ್ರಿ ವೇಳೆ ಮೆರವಣಿಗೆ ಜೊತೆ ಸೇರಿಕೊಂಡು ಮೆರವಣಿಗೆಯಲ್ಲಿ ಸಾಗುತ್ತಿದ್ದ ವೇಳೆ ಮಾರ್ನಬೈಲು ಎಂಬಲ್ಲಿ ರಾತ್ರಿ ಸುಮಾರು 9.30ರ ವೇಳೆಗೆ ಮೆರವಣಿಗೆಯಲ್ಲಿದ್ದ ಪಿಕಪ್ ವಾಹನದ ಚಾಲಕ ದುಡುಕುತನದಿಂದ ಚಲಾಯಿಸಿದ ಪರಿಣಾಮ ಗುಣವತಿ ಅವರಿಗೆ ಡಿಕ್ಕಿ ಹೊಡೆದಿದೆ. 

ಅಪಘಾತದಿಂದ ರಸ್ತೆಗೆ ಬಿದ್ದ ಗುಣವತಿ ಅವರ ಎರಡೂ ಕಾಲುಗಳಿಗೆ ಗಾಯಗಳಾಗಿದ್ದು, ತಕ್ಷಣ ಅವರನ್ನು ಕಾರೊಂದರಲ್ಲಿ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎ ಜೆ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಗುಣವತಿ ಅವರ ತಮ್ಮ ಪ್ರವೀಣ್ ಕುಮಾರ್ ಶೆಟ್ಟಿ ಅವರು ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಸಜಿಪ ದಸರಾ ಶೋಭಾಯಾತ್ರೆ ವೇಳೆ ಪಿಕಪ್ ಡಿಕ್ಕಿಯಾಗಿ ಮಹಿಳೆ ಆಸ್ಪತ್ರೆಗೆ Rating: 5 Reviewed By: karavali Times
Scroll to Top