ಕೊಡಾಜೆ : ಹಿಂದಿನಿಂದ ಕಾರು ಡಿಕ್ಕಿ ಹೊಡೆದು ಬೈಕ್ ಸವಾರರಿಬ್ಬರಿಗೆ ಗಾಯ - Karavali Times ಕೊಡಾಜೆ : ಹಿಂದಿನಿಂದ ಕಾರು ಡಿಕ್ಕಿ ಹೊಡೆದು ಬೈಕ್ ಸವಾರರಿಬ್ಬರಿಗೆ ಗಾಯ - Karavali Times

728x90

5 October 2026

ಕೊಡಾಜೆ : ಹಿಂದಿನಿಂದ ಕಾರು ಡಿಕ್ಕಿ ಹೊಡೆದು ಬೈಕ್ ಸವಾರರಿಬ್ಬರಿಗೆ ಗಾಯ

ಬಂಟ್ವಾಳ, ಅಕ್ಟೋಬರ್ 05, 2026 (ಕರಾವಳಿ ಟೈಮ್ಸ್) : ನೆಟ್ಲಮುಡ್ನೂರು ಗ್ರಾಮದ ಕೊಡಾಜೆ ಎಂಬಲ್ಲಿ ಕಾರು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಗಾಯಗೊಂಡ ಘಟನೆ ಅ 3 ರಂದು ಮಧ್ಯಾಹ್ನ ವೇಳೆ ಸಂಭವಿಸಿದೆ. 

ಗಾಯಗೊಂಡ ಬೈಕ್ ಸವಾರರನ್ನು ಇಡ್ಕಿದು ಗ್ರಾಮದ ಕೊಪ್ಪಳ ನಿವಾಸಿಗಳಾದ ಕಿಶೋರ್ ಕುಮಾರ್ (23) ಹಾಗೂ ಸಹಸವಾರೆಯಾಗಿದ್ದ ಅವರ ಅಕ್ಕ ರೇಷ್ಮಾ ಎಂದು ಹೆಸರಿಸಲಾಗಿದೆ. ಇವರು ಅ 3 ರಂದು ಮಧ್ಯಾಹ್ನ 3.15ರ ವೇಳೆಗೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಕೊಡಾಜೆ ಎಂಬಲ್ಲಿ ರಮೀಝ್ ಆದಂ ರಾಝ್ ಎಂಬವರು ಚಲಾಯಿಸಿಕೊಂಡು ಬಂದ ಕಾರು ಹಿಂದಿನಿಂದ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. 

ಅಪಘಾತದಿಂದ ಬೈಕ್ ಸವಾರರಾದ ಅಕ್ಕ-ತಮ್ಮ ಇಬ್ಬರೂ ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡಿದ್ದಾರೆ. ಅವರನ್ನು ಪುತ್ತೂರು ಮಹಾವೀರ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಕೊಡಾಜೆ : ಹಿಂದಿನಿಂದ ಕಾರು ಡಿಕ್ಕಿ ಹೊಡೆದು ಬೈಕ್ ಸವಾರರಿಬ್ಬರಿಗೆ ಗಾಯ Rating: 5 Reviewed By: karavali Times
Scroll to Top