ಬಂಟ್ವಾಳ, ಅಕ್ಟೋಬರ್ 05, 2026 (ಕರಾವಳಿ ಟೈಮ್ಸ್) : ಅಜ್ಜಿಬೆಟ್ಟು ಗ್ರಾಮದ ಮಲೆರ್ಮಲ ಕೋಡಿ ಎಂಬಲ್ಲಿ ಸೆ 5 ರಂದು ಮುಂಜಾನೆ ಮನೆಗೆ ಸಿಡಿಲು ಬಡಿದು ಮಹಿಳೆ ಗಾಯಗೊಂಡಿದ್ದು, ಮನೆಗೆ ತೀವ್ರ ಹಾನಿಯಾಗಿದೆ.
ಗಾಯಾಳು ಮಹಿಳೆಯನ್ನು ಇಲ್ಲಿನ ನಿವಾಸಿ ನಾಗೇಶ್ ಮೂಲ್ಯ ಅವರ ಪತ್ನಿ ಕುಶಲಾಕ್ಷಿ ಎಂದು ಹೆಸರಿಸಲಾಗಿದೆ. ಗಾಯಾಳು ಮಹಿಳೆಯನ್ನು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಲಾಗಿದೆ.
ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಘಟನಾ ಸ್ಥಳಕ್ಕೆ ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಭೇಟಿ ನೀಡಿದ್ದು, ಮನೆಮಂದಿಗೆ ಧೈರ್ಯ ತುಂಬಿದ್ದಾರೆ. ಮಾಜಿ ಸಚಿವ ಬಿ ರಮಾನಾಥ ರೈ ಅವರ ನೇತೃತ್ವದ ನಿಯೋಗ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದು, ಸೂಕ್ತ ಪರಿಹಾರಕ್ಕೆ ಸಂಬಂಧಪಟ್ಟ ಇಲಾಖಾಧಿಕಾರಿಗಳ ಜೊತೆ ಚರ್ಚಿಸಿದ್ದಾರೆ.























0 comments:
Post a Comment