ಬಂಟ್ವಾಳ, ಅಕ್ಟೋಬರ್ 12, 2026 (ಕರಾವಳಿ ಟೈಮ್ಸ್) : ಮಾಣಿ ಗ್ರಾಮದಲ್ಲಿ ಕ್ರಿಕೆಟ್ ಪಂದ್ಯಾಟದ ವೇಳೆ ನಡೆದ ಮಾತಿನ ಚಕಮಕಿಗೆ ಸಂಬಂಧಿಸಿದಂತೆ ವ್ಯಕ್ತಿಗೆ ಮೂವರ ತಂಡ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿದ ಘಟನೆ ಅ 11 ರಂದು ನಡೆದಿದೆ.
ಹಲ್ಲೆಗೊಳಗಾದ ವ್ಯಕ್ತಿಯನ್ನು ಮಾಣಿ ಗ್ರಾಮದ ಹಳೀರ ನಿವಾಸಿ ಶೌಕತ್ ಅಲಿ ಎಂಬವರ ಪುತ್ರ ರಿಜ್ವಾನ್ (22) ಎಂದು ಹೆಸರಿಸಲಾಗಿದ್ದು, ಶಮ್ಮಾಸ್ ಹಾಗೂ ಆತನ ಇಬ್ಬರು ಸ್ನೇಹಿತರನ್ನು ಆರೋಪಿಗಳೆಂದು ಗುರುತಿಸಲಾಗಿದೆ.
ರಿಜ್ವಾನ್ ಮಾಣಿಯ ಅಂಬ್ಯುಲೆನ್ಸ್ ಚಾಲಕರಾಗಿದ್ದು, ಕ್ರಿಕೆಟ್ ಆಟವಾಡುವ ಹವ್ಯಾಸ ಇರುವವರಾಗಿದ್ದಾರೆ. ಅಲ್ಲದೆ ಕ್ರಿಕೆಟ್ ಪಂದ್ಯಾಟಗಳಲ್ಲಿ ಅಂಪೈರ್ ಆಗಿಯೂ ಕೆಲಸ ಮಾಡುತ್ತಾರೆ. ಅ 11 ರಂದು ರಿಜ್ವಾನ್ ಹಾಗೂ ಅವರ ಸ್ನೇಹಿತರಾದ ಶರೀಫ್, ನಶಾತ್ ಅವರು ಸೇರಿಕೊಂಡು ಮಾಣಿ ಗ್ರಾಮದ ಮಾಣಿ ಗ್ರಾಮ ಪಂಚಾಯತ್ ಮೈದಾನದಲ್ಲಿ 18 ವರ್ಷದೊಳಗಿನ ಮಕ್ಕಳಿಗಾಗಿ ಆಹ್ವಾನಿತ 8 ತಂಡಗಳ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿದ್ದರು. ಪಂದ್ಯಾಟ ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಗಿದ್ದು, ಮದ್ಯಾಹ್ನ ಸುಮಾರು 3.30 ಗಂಟೆಗೆ ಕ್ವಾಲಿಟಿ ಮಾಣಿ ಮತ್ತು ಗಡಿಯಾರ್ ಜಿ ಎಫ್ ಸಿ ತಂಡಗಳ ನಡುವೆ ಕ್ರಿಕೆಟ್ ಪಂದ್ಯಾಟ ನಡೆಯುತ್ತಿದ್ದ ವೇಳೆ ಸ್ಕೋರ್ ವಿಚಾರವಾಗಿ ಎರಡು ತಂಡಗಳ ಆಟಗಾರರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭ ಗಡಿಯಾರ ತಂಡದ ಸಮ್ಮಾಸ್ ಎಂಬಾತನು ರಿಜ್ವಾನ್ ಅವರ ಸ್ನೇಹಿತ ನಶಾತ್ ಎಂಬವರಿಗೆ ಅವಾಚ್ಯ ಶಬ್ದಗಳಿಂದ ಬೈದಾಗ ಈ ಬಗ್ಗೆ ರಿಜ್ವಾನ್ ಪ್ರಶ್ನಿಸಿದ್ದಾರೆ. ಆ ಸಮಯ ರಿಜ್ವಾನ್ ಅವರನ್ನು ಅವರ ಸ್ನೇಹಿತ ಕರೆದುಕೊಂಡು ಹೋಗುತ್ತಿದ್ದ ವೇಳೆ ಆರೋಪಿ ಸಮ್ಮಾಸ್ ಮತ್ತು ಆತನ ಇಬ್ಬರೂ ಸ್ನೇಹಿತರು ಸೇರಿಕೊಂಡು ತಡೆದು ಅಡ್ಡಗಟ್ಟಿದ್ದು, ಆರೋಪಿ ಸಮ್ಮಾಸ್ ಕೈಗಳಿಂದ ರಿಜ್ವಾನ್ ಅವರ ತಲೆಗೆ ಮತ್ತು ಮುಖಕ್ಕೆ ಹೊಡೆದಿರುತ್ತಾನೆ. ಆತನ ಇಬ್ಬರೂ ಸ್ನೇಹಿತರು ಸಹ ತಮ್ಮ ಕೈಗಳಿಂದ ಮುಖಕ್ಕೆ ಹಾಗೂ ಬಲ ಕಿವಿಗೆ ಹೊಡೆದಿರುತ್ತಾರೆ. ಆ ಸಂದರ್ಭ ಸ್ಥಳದಲ್ಲಿದ್ದವರು ಜಗಳವನ್ನು ಬಿಡಿಸುತ್ತಿದ್ದರೂ ಆರೋಪಿ ಸಮ್ಮಾಸ್ ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾನೆ. ಹಲ್ಲೆಯಿಂದ ಗಾಯಗೊಂಡ ರಿಜ್ವಾನ್ ಅವರು ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದೆ ವಿಕಿತ್ಸೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ರಿಜ್ವಾನ್ ನೀಡಿದ ದೂರಿನಂತೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












0 comments:
Post a Comment