ಮಂಗಳೂರು, ಅಕ್ಟೋಬರ್ 12, 2026 (ಕರಾವಳಿ ಟೈಮ್ಸ್) : ಪತ್ನಿಯ ವಿರುದ್ದ ಅನೈತಿಕ ಸಂಬಂಧದ ಆರೋಪ ಹೊರಿಸಿದ ಪತಿ ಪತ್ನಿಯನ್ನು ಕೊಲೆ ಮಾಡಿದ ಘಟನೆ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಂಜಿಮೊಗರು ಗ್ರಾಮದ ಉರುಂಡಾಡಿಗುಡ್ಡೆ ಎಂಬಲ್ಲಿ ಅ 12 ರಂದು ಸಂಭವಿಸುದೆ.
ಕೊಲೆಯಾದ ಪತ್ನಿಯನ್ನು ಸೊನಾಲಿ ಎಂದು ಹೆಸರಿಸಲಾಗಿದ್ದು, ಆರೋಪಿ ಪತಿಯನ್ನು ವಿಜಯಪುರ ನಿವಾಸಿ ಶಿವಲಿಂಗಪ್ಪ (40) ಎಂದು ಗುರುತಿಸಲಾಗಿದೆ. ಪಂಜಿಮೊಗರು ಗ್ರಾಮದ ಉರುಂಡಾಡಿಗುಡ್ಡೆ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಆರೋಪಿ ಶಿವಲಿಂಗಪ್ಪ ಆತನ ಹೆಂಡತಿಯಾದ ಸೋನಾಲಿ ಎಂಬಾಕೆಯನ್ನು ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ಚೂರಿಯಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಕಾವೂರು ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 138/2026 ಕಲಂ 103(2), 238 ಭಾರತೀಯ ನ್ಯಾಯ ಸಂಹಿತೆ 2023ರಂತೆ ಪ್ರಕರಣ ದಾಖಲಾಗಿದ್ದು, ಆರೋಪಿ ಶಿವಲಿಂಗಪ್ಪನನ್ನು ಕಾವೂರು ಪೆÇಲೀಸರು ದಸ್ತಗಿರಿ ಮಾಡಿದ್ದು ತನಿಖೆ ಮುಂದುವರಿಸಿದ್ದಾರೆ.












0 comments:
Post a Comment