ಪಟಾಕಿ ಸದ್ದಿನಿಂದ ಸಾಕು ಪ್ರಾಣಿಗಳಿಗೆ ಭೀತಿ : ಮುನ್ನಚ್ಚರಿಕೆ ವಹಿಸಲು ಪಶು ವೈದ್ಯಕೀಯ ಇಲಾಖೆ ಸೂಚನೆ - Karavali Times ಪಟಾಕಿ ಸದ್ದಿನಿಂದ ಸಾಕು ಪ್ರಾಣಿಗಳಿಗೆ ಭೀತಿ : ಮುನ್ನಚ್ಚರಿಕೆ ವಹಿಸಲು ಪಶು ವೈದ್ಯಕೀಯ ಇಲಾಖೆ ಸೂಚನೆ - Karavali Times

728x90

30 October 2026

ಪಟಾಕಿ ಸದ್ದಿನಿಂದ ಸಾಕು ಪ್ರಾಣಿಗಳಿಗೆ ಭೀತಿ : ಮುನ್ನಚ್ಚರಿಕೆ ವಹಿಸಲು ಪಶು ವೈದ್ಯಕೀಯ ಇಲಾಖೆ ಸೂಚನೆ

ಮಂಗಳೂರು, ಅಕ್ಟೋಬರ್ 30, 2026 (ಕರಾವಳಿ ಟೈಮ್ಸ್) : ದೀಪಾವಳಿ ಹಬ್ಬದ ದಿನಗಳಲ್ಲಿ ಸಾರ್ವಜನಿಕರು ಸಿಡಿಸುವ ಸಿಡಿಮದ್ದುಗಳ (ಪಟಾಕಿ) ಶಬ್ದದಿಂದ ಸಾಕು ಪ್ರಾಣಿ/ ಜಾನುವಾರುಗಳಲ್ಲಿ ಭೀತಿ ಸೃಷ್ಟಿಯಾಗಿ ಜಾನುವಾರುಗಳು ಹಲವು ದಿನಗಳ ಕಾಲ ಆಹಾರವನ್ನು ತ್ಯಜಿಸುತ್ತವೆ ಹಾಗೂ ಮೂಲ ಸ್ಥಾನದಿಂದ ಪಲಾಯನ ಮಾಡುವ ಸಂಭವವಿರುತ್ತದೆ.  ಅನಾರೋಗ್ಯ ಪೀಡಿತ ಜಾನುವಾರುಗಳಿಗೆ ವ್ಯತಿರಿಕ್ತ ಪರಿಣಾಮಗಳಾಗುತ್ತದೆ. 

ಆದುದರಿಂದ ಸಾರ್ವಜನಿಕರು ಪ್ರಾಣಿಗಳನ್ನು ಪಟಾಕಿಗಳ ಕರ್ಕಶ ಶಬ್ದಗಳಿಂದ ಮುಕ್ತಗೊಳಿಸಲು ಅಗತ್ಯ ಮುಂಜಾಗೃತಾ ಕ್ರಮವಹಿಸುವುದು ಹಾಗೂ ಪರಿಸರ ಸ್ನೇಹಿ ಸಿಡಿಮದ್ದು (ಗ್ರೀನ್ ಕ್ರ್ಯಾಕರ್ಸ್) ಗಳಿಗೆ ಆದ್ಯತೆ ನೀಡುವಂತೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕರು (ಆಡಳಿತ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಪಟಾಕಿ ಸದ್ದಿನಿಂದ ಸಾಕು ಪ್ರಾಣಿಗಳಿಗೆ ಭೀತಿ : ಮುನ್ನಚ್ಚರಿಕೆ ವಹಿಸಲು ಪಶು ವೈದ್ಯಕೀಯ ಇಲಾಖೆ ಸೂಚನೆ Rating: 5 Reviewed By: karavali Times
Scroll to Top