ವಾಹನಗಳ ದಂಡ ಪಾವತಿಸುವಂತೆ ಮೊಬೈಲ್ ಮೂಲಕ ಬರುವ ನಕಲಿ ಸಂದೇಶಗಳ ಬಗ್ಗೆ ಜಾಗರೂಕರಾಗಿರುವಂತೆ ಸಾರ್ವಜನಿಕರಿಗೆ ಪೊಲೀಸ್ ಕಮಿಷನರ್ ಸೂಚನೆ - Karavali Times ವಾಹನಗಳ ದಂಡ ಪಾವತಿಸುವಂತೆ ಮೊಬೈಲ್ ಮೂಲಕ ಬರುವ ನಕಲಿ ಸಂದೇಶಗಳ ಬಗ್ಗೆ ಜಾಗರೂಕರಾಗಿರುವಂತೆ ಸಾರ್ವಜನಿಕರಿಗೆ ಪೊಲೀಸ್ ಕಮಿಷನರ್ ಸೂಚನೆ - Karavali Times

728x90

30 October 2026

ವಾಹನಗಳ ದಂಡ ಪಾವತಿಸುವಂತೆ ಮೊಬೈಲ್ ಮೂಲಕ ಬರುವ ನಕಲಿ ಸಂದೇಶಗಳ ಬಗ್ಗೆ ಜಾಗರೂಕರಾಗಿರುವಂತೆ ಸಾರ್ವಜನಿಕರಿಗೆ ಪೊಲೀಸ್ ಕಮಿಷನರ್ ಸೂಚನೆ

ಮಂಗಳೂರು, ಅಕ್ಟೋಬರ್ 30, 2026 (ಕರಾವಳಿ ಟೈಮ್ಸ್) : ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಇ-ಚಲನ್ ದಂಡ ಪಾವತಿಸುವಂತೆ ಸೈಬರ್ ವಂಚಕರು ಸಾರ್ವಜನಿಕರ ಮೊಬೈಲ್ ಫೆÇೀನ್ ಗಳಿಗೆ ಎಸ್ ಎಂ ಎಸ್/ ವಾಟ್ಸಪ್ ಮೂಲಕ ನಕಲಿ ಲಿಂಕ್ ಗಳು ಹಾಗೂ ಎಪಿಕೆ ಫೈಲ್ ಗಳನ್ನು ಕಳುಹಿಸಿ, ಸೈಬರ್ ವಂಚನೆ ನಡೆಸುತ್ತಿರುವ ಬಗ್ಗೆ ಪೆÇಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗುತ್ತಿವೆ. ಈ ರೀತಿಯ ಸೈಬರ್ ವಂಚನೆಗೆ ಸಂಬಂಧಿಸಿದಂತೆ ಮಂಗಳೂರು ನಗರದ ವಿವಿಧ ಪೆÇಲೀಸ್ ಠಾಣೆಗಳಲ್ಲಿ 2026ನೇ ಸಾಲಿನಲ್ಲಿ ಈವರೆಗೆ ಒಟ್ಟು 8 ಪ್ರಕರಣಗಳು ದಾಖಲಾಗಿದ್ದು, ಈ ವಂಚನೆಯಿಂದ ಸಾರ್ವಜನಿಕರು ಒಟ್ಟು ಸುಮಾರು 44 ಲಕ್ಷ ರೂಪಾಯಿ ಹಣವನ್ನು ಕಳೆದುಕೊಂಡಿರುತ್ತಾರೆ. 

ಆದ್ದರಿಂದ, ಸಾರ್ವಜನಿಕರು ಇಂತಹ ವಂಚನೆಗಳ ಬಗ್ಗೆ ಹೆಚ್ಚಿನ ಜಾಗರೂಕತೆ ವಹಿಸಬೇಕು. ತಮ್ಮ ವಾಹನದ ಮೇಲೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದೆಯೇ ಎಂಬುದನ್ನು ಅಧಿಕೃತ ಇ-ಚಲನ್ ವೆಬ್ ಸೈಟಿನಲ್ಲಿ ಅಥವಾ ಖುದ್ದಾಗಿ ಹತ್ತಿರದ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪರಿಶೀಲಿಸಿದ ನಂತರವೇ ದಂಡದ ಮೊತ್ತವನ್ನು ಪಾವತಿಸಬೇಕು.

ಸೈಬರ್ ವಂಚನೆಯಿಂದ ಸುರಕ್ಷಿತವಾಗಿರಲು ಸಾರ್ವಜನಿಕರು ಈ ಕೆಳಕಂಡ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಕೋರಲಾಗಿದೆ : 

ಮಾಡಬೇಕಾದ ಕ್ರಮಗಳು : 

ತಮ್ಮ ವಾಹನದ ಮೇಲೆ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದ ಇ-ಚಲನ್ ಬಾಕಿ ಇದೆಯೇ ಎಂಬುದನ್ನು ಸರ್ಕಾರದ ಅಧಿಕೃತ ವೆಬ್ಸೈಟ್ https://echallan.parivahan.nic.in ನಲ್ಲಿ ಮಾತ್ರ ಪರಿಶೀಲಿಸಿ, ಅಲ್ಲಿಯೇ ದಂಡದ ಮೊತ್ತವನ್ನು ಪಾವತಿಸುವುದು., ಇ-ಚಲನ್ ಸಂದೇಶದ ಬಗ್ಗೆ ಯಾವುದೇ ಸಂಶಯವಿದ್ದಲ್ಲಿ, ಮಂಗಳೂರು ನಗರದ ಹತ್ತಿರದ ಸಂಚಾರ ಪೆÇಲೀಸ್ ಠಾಣೆಗೆ/ ಸಂಚಾರ ಪೆÇಲೀಸ್ ಅಧಿಕಾರಿಗಳನ್ನು ಭೇಟಿ ನೀಡಿ ಖಚಿತಪಡಿಸಿಕೊಳ್ಳುವುದು., ಇ-ಚಾಲನ್ ನೋಟಿಸು ಪೆÇೀಸ್ಟ್ ಮೂಲಕ ಸ್ವೀಕೃತವಾಗಿದ್ದರೆ, ಅದರ ದಂಡವನ್ನು ಮಂಗಳೂರು ಒನ್/ ಕರ್ನಾಟಕ ಒನ್ ಅಧಿಕೃತ ವೆಬ್ ಸೈಟ್/ ಅಪ್ ಮೂಲಕ ಪಾವತಿಸುವುದು. 

ಮಾಡಬಾರದ ಕ್ರಮಗಳು : 

ಮೊಬೈಲ್ ಫೆÇೀನಿಗೆ ಬರುವ ಯಾವುದೇ ಎಪಿಕೆ ಫೈಲ್ ಗಳನ್ನು ಯಾವುದೇ ಕಾರಣಕ್ಕೂ ಡೌನ್ಲೋಡ್ ಮಾಡಬಾರದು ಅಥವಾ ಇಸ್ಟಾಲ್ ಮಾಡಬಾರದು., ಅಪರಿಚಿತ ವ್ಯಕ್ತಿಗಳಿಂದ ಬರುವ ಲಿಂಕ್ ಗಳನ್ನು ಕ್ಲಿಕ್ ಮಾಡಬಾರದು., ಇ-ಚಲನ್ ದಂಡ ಪಾವತಿಸುವಂತೆ ಬರುವ ಅಪರಿಚಿತ ಲಿಂಕ್ ಗಳ ಮೂಲಕ ಬ್ಯಾಂಕ್ ಖಾತೆಯ ವಿವರಗಳು, ಎಟಿಎಂ ಕಾರ್ಡ್ ವಿವರಗಳು, ಒಟಿಪಿ ಅಥವಾ ಇತರ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳಬಾರದು., ಅಧಿಕೃತ ವೆಬ್ ಸೈಟ್ ಗಳಂತೆ ಕಾಣುವ ನಕಲಿ ವೆಬ್ ಸೈಟ್ ಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಕೇವಲ https:// ಇರುವುದರಿಂದಲೇ ವೆಬ್ ಸೈಟ್ ಅಧಿಕೃತವೆಂದು ಪರಿಗಣಿಸಬಾರದು.

ಸಾರ್ವಜನಿಕರು ಮೇಲ್ಕಂಡ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವ ಮೂಲಕ ಸೈಬರ್ ವಂಚನೆಗೆ ಒಳಗಾಗುವುದನ್ನು ತಪ್ಪಿಸಿಕೊಳ್ಳುವುದು. ತಮ್ಮ ಮೊಬೈಲ್ ಫೆÇೀನಿಗೆ ಬರುವ ಇ-ಚಲನ್ ದಂಡ ಪಾವತಿ ಸಂದೇಶದ ಬಗ್ಗೆ ಯಾವುದೇ ಸಂಶಯವಿದ್ದಲ್ಲಿ 0824-2220823 ಸಂಖ್ಯೆಗೆ ಕರೆ ಮಾಡಿ ಖಚಿತಪಡಿಸಿಕೊಳ್ಳಬಹುದು ಎಂದು ಮಂಗಳೂರು ನಗರ ಪೆÇಲೀಸ್ ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ವಾಹನಗಳ ದಂಡ ಪಾವತಿಸುವಂತೆ ಮೊಬೈಲ್ ಮೂಲಕ ಬರುವ ನಕಲಿ ಸಂದೇಶಗಳ ಬಗ್ಗೆ ಜಾಗರೂಕರಾಗಿರುವಂತೆ ಸಾರ್ವಜನಿಕರಿಗೆ ಪೊಲೀಸ್ ಕಮಿಷನರ್ ಸೂಚನೆ Rating: 5 Reviewed By: karavali Times
Scroll to Top