ಬೆಳ್ತಂಗಡಿ : ಕ್ಲಿನಿಕಿಗೆ ಬೆಂಕಿ ಹಚ್ಚಿದ ಪ್ರಕರಣ ಬೇಧಿಸಿದ ಪೊಲೀಸರು, ಮೂವರು ಕಿಡಿಗೇಡಿಗಳು ಅರೆಸ್ಟ್ - Karavali Times ಬೆಳ್ತಂಗಡಿ : ಕ್ಲಿನಿಕಿಗೆ ಬೆಂಕಿ ಹಚ್ಚಿದ ಪ್ರಕರಣ ಬೇಧಿಸಿದ ಪೊಲೀಸರು, ಮೂವರು ಕಿಡಿಗೇಡಿಗಳು ಅರೆಸ್ಟ್ - Karavali Times

728x90

15 October 2026

ಬೆಳ್ತಂಗಡಿ : ಕ್ಲಿನಿಕಿಗೆ ಬೆಂಕಿ ಹಚ್ಚಿದ ಪ್ರಕರಣ ಬೇಧಿಸಿದ ಪೊಲೀಸರು, ಮೂವರು ಕಿಡಿಗೇಡಿಗಳು ಅರೆಸ್ಟ್

ಬೆಳ್ತಂಗಡಿ, ಅಕ್ಟೋಬರ್ 15, 2026 (ಕರಾವಳಿ ಟೈಮ್ಸ್) : ಬೆಳ್ತಂಗಡಿ ನಡ ಗ್ರಾಮದ ಆರೋಗ್ಯ ಕ್ಲಿನಿಕಿಗೆ ಬೆಂಕಿ ಹಚ್ಚಿದ ಪ್ರಕರಣ ಬೇಧಿಸಿದ ಪೊಲೀಸರು ಮೂವರು ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. 

ಬಂಧಿತ ಆರೋಪಿಗಳನ್ನು ಬೆಳ್ತಂಗಡಿ ನಾವೂರು ನಿವಾಸಿಗಳಾದ ರವಿ ಕುಮಾರ್ (31), ಸುರೇಶ್ ಪಿ.ಎನ್. (44) ಹಾಗೂ ದಿನೇಶ್ ಪ್ರಭು (51) ಎಂದು ಹೆಸರಿಸಲಾಗಿದೆ. ನಡ ಗ್ರಾಮದ ನಿವಾಸಿ ಡಾ. ಪ್ರದೀಪ ಎ (51) ಎಂಬವರು ಬೆಳ್ತಂಗಡಿ ನಾವೂರ ಎಂಬಲ್ಲಿ ನಡೆಸುತ್ತಿದ್ದ ಕ್ಲಿನಿಕಿಗೆ ಅ 6 ರಂದು ರಾತ್ರಿ ಕಿಡಿಗೇಡಿಗಳು ಬೆಂಕಿ ಹಾಕಿದ ಪರಿಣಾಮ ಔಷದಿ ಹಾಗೂ ವೈದ್ಯಕೀಯ ಸಲಕರಣೆಗಳು ಸೇರಿದಂತೆ ಸುಮಾರು 2-3 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳು ಸುಟ್ಟುಹೋಗಿತ್ತು. 

ಈ ಬಗ್ಗೆ ಪಕ್ರರಣ ದಾಖಲಿಸಿಕೊಂಡು ತನಿಖೆ ನಡೆಸಿದ ಬೆಳ್ತಂಗಡಿ ಪೊಲೀಸರು ಅರೋಪಿಗಳನ್ನು ಬಂದಿಸುವಲ್ಲಿ ಸಫಲರಾಗಿದ್ದಾರೆ. ಬಂಧಿತರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಬೆಳ್ತಂಗಡಿ : ಕ್ಲಿನಿಕಿಗೆ ಬೆಂಕಿ ಹಚ್ಚಿದ ಪ್ರಕರಣ ಬೇಧಿಸಿದ ಪೊಲೀಸರು, ಮೂವರು ಕಿಡಿಗೇಡಿಗಳು ಅರೆಸ್ಟ್ Rating: 5 Reviewed By: karavali Times
Scroll to Top