ಅತ್ತೆ ಮನೆಗೆ ಕಲ್ಲೆಸೆದು ಹಾನಿಗೊಳಿಸಿದ ಸೊಸೆ, ಗಾಯಗೊಂಡ ಅತ್ತೆ ಆಸ್ಪತ್ರೆಗೆ ದಾಖಲು : ಕಡಬ ಠಾಣೆಯಲ್ಲಿ ಪ್ರಕರಣ ದಾಖಲು - Karavali Times ಅತ್ತೆ ಮನೆಗೆ ಕಲ್ಲೆಸೆದು ಹಾನಿಗೊಳಿಸಿದ ಸೊಸೆ, ಗಾಯಗೊಂಡ ಅತ್ತೆ ಆಸ್ಪತ್ರೆಗೆ ದಾಖಲು : ಕಡಬ ಠಾಣೆಯಲ್ಲಿ ಪ್ರಕರಣ ದಾಖಲು - Karavali Times

728x90

20 October 2026

ಅತ್ತೆ ಮನೆಗೆ ಕಲ್ಲೆಸೆದು ಹಾನಿಗೊಳಿಸಿದ ಸೊಸೆ, ಗಾಯಗೊಂಡ ಅತ್ತೆ ಆಸ್ಪತ್ರೆಗೆ ದಾಖಲು : ಕಡಬ ಠಾಣೆಯಲ್ಲಿ ಪ್ರಕರಣ ದಾಖಲು

ಬೆಳ್ಳಾರೆ, ಅಕ್ಟೋಬರ್ 20, 2026 (ಕರಾವಳಿ ಟೈಮ್ಸ್) : ಸೊಸೆಯೋರ್ವರು ಅತ್ತೆಯ ಮನೆಗೆ ಬಂದು ಅವಾಚ್ಯವಾಗಿ ಬೈದು ಜೀವಬೆದರಿಕೆ ಒಡ್ಡಿದ್ದಲ್ಲದೆ ಮನೆಗೆ ಕಲ್ಲೆಸೆದು ಹಾನಿಗೊಳಿಸಿದ ಘಟನೆ ಕಡಬ ತಾಲೂಕಿನ ಕೊಯಿಲದಲ್ಲಿ ಅ 14 ರಂದು ನಡೆದಿದ್ದು, ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಈ ಬಗ್ಗೆ ಅತ್ತೆ ಕೊಯಿಲ ನಿವಾಸಿ ನೀಲಮ್ಮ (70) ಅವರು ಪೊಲೀಸರಿಗೆ ದೂರು ನೀಡಿದ್ದು, ಇವರ ಸೊಸೆಯಾದ ಮಂಗಳಾ ಬಾಯಿ ಎಂಬವರು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅ 12 ರಂದು ಸಂಜೆ ವೇಳೆ ಅತ್ತೆಯ ಮನೆಗೆ ಬಂದು ಜೀವಬೆದರಿಕೆ ಹಾಕಿರುತ್ತಾರೆ. ಮುಂದುವರಿದಂತೆ ಅ 14 ರಂದು ರಾತ್ರಿ ಮನೆಯ ಕಿಟಕಿಯ ಗಾಜಿಗೆ ಕಲ್ಲು ಎಸೆದು ಹಾನಿಮಾಡಿರುತ್ತಾರೆ. ಕೃತ್ಯದಿಂದ ಸುಮಾರು 30 ಸಾವಿರ ರೂಪಾಯಿ ನಷ್ಟವಾಗಿರುತ್ತದೆ ಹಾಗೂ ಆರೋಪಿ ಸೊಸೆ ಎಸೆದ ಕಲ್ಲಿನಿಂದ ಅತ್ತೆ ನೀಲಮ್ಮ ಅವರಿಗೆ ಗಾಯವಾಗಿದೆ. ಅಲ್ಲದೆ ಅವ್ಯಾಚವಾಗಿ ಬೈದು ಜೀವ ಬೆದರಿಕೆ ಹಾಕಿರುವುದಾಗಿದೆ. ಆರೋಪಿ ಸೊಸೆ ಎಸೆದ ಕಲ್ಲಿನಿಂದಾಗಿ ಗಾಯಗೊಂಡ ಅತ್ತೆ ನೀಲಮ್ಮ ಅವರು ಕಡಬದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ ಎಂದು ನೀಡಿದ ದೂರಿನಂತೆ ಈ ಬಗ್ಗೆ ಕಡಬ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಅತ್ತೆ ಮನೆಗೆ ಕಲ್ಲೆಸೆದು ಹಾನಿಗೊಳಿಸಿದ ಸೊಸೆ, ಗಾಯಗೊಂಡ ಅತ್ತೆ ಆಸ್ಪತ್ರೆಗೆ ದಾಖಲು : ಕಡಬ ಠಾಣೆಯಲ್ಲಿ ಪ್ರಕರಣ ದಾಖಲು Rating: 5 Reviewed By: karavali Times
Scroll to Top