ಪುತ್ತೂರು, ಅಕ್ಟೋಬರ್ 30, 2026 (ಕರಾವಳಿ ಟೈಮ್ಸ್) : ಪುತ್ತೂರು ಕೊಡಿಂಬಾಡಿ ಗ್ರಾಮದ ಶಾಂತಿನಗರ ಎಂಬಲ್ಲಿ ಯಾರೋ ಅಪರಿಚಿತ ವ್ಯಕ್ತಿಯು ಬೆಂಗಳೂರಿನ ಫೌಂಡೇಶನ್ ಒಂದರ ಹೆಸರಿನಲ್ಲಿ ದೇಣಿಗೆಯನ್ನು ಕೇಳುತ್ತಾ, ಮನೆಯೊಂದಕ್ಕೆ ಬಂದು ಮಕ್ಕಳನ್ನು ಕೊಡಿಸುವುದಾಗಿ ಹೇಳಿ ಅವರಿಂದ ಹಣ ಸಂಗ್ರಹಿಸಲು ಮುಂದಾಗಿರುತ್ತಾನೆ. ಈ ವೇಳೆ ಸ್ಥಳೀಯರು 112 ತುರ್ತು ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದು, 112 ತುರ್ತು ಕರ್ತವ್ಯದಲ್ಲಿದ್ದ ಸಿಬ್ಬಂದಿಗಳು ಸದ್ರಿ ಸ್ಥಳಕ್ಕೆ ತೆರಳಿ ಆತನನ್ನು ಠಾಣೆಗೆ ಕರೆತಂದಿರುತ್ತಾರೆ. ಆತನನ್ನು ವಿಚಾರಿಸಲಾಗಿ ಹಾಸನ ಬೇಲೂರು ನಿವಾಸಿ ಗಣೇಶ್ (24) ಎಂಬುದಾಗಿ ತಿಳಿಸಿರುತ್ತಾನೆ. ಪ್ರಕರಣದ ದೂರುದಾರರು ಘಟನೆಯ ಬಗ್ಗೆ ದೂರು ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ, ಸದ್ರಿ ಆಸಾಮಿಯ ವಿರುದ್ದ ಪುತ್ತೂರು ನಗರ ಠಾಣೆಯಲ್ಲಿ ಕಲಂ 92 ಕರ್ನಾಟಕ ಪೆÇಲೀಸ್ ಅಧಿನಿಯಮ-1965 ರಡಿ ಪ್ರಕರಣ ದಾಖಲಿಸಲಾಗಿದೆ.
30 October 2026
- Blogger Comments
- Facebook Comments
Subscribe to:
Post Comments (Atom)











0 comments:
Post a Comment