ಬಂಟ್ವಾಳ, ಅಕ್ಟೋಬರ್ 30, 2026 (ಕರಾವಳಿ ಟೈಮ್ಸ್) : ಬೈಕಿನ ಇಎಂಐ ಯಾಕೆ ಪಾವತಿಸಿಲ್ಲ ಎಂದು ಮನೆಯಲ್ಲಿ ಪ್ರಶ್ನಿಸಿದ ಕಾರಣಕ್ಕೆ ಮನನೊಂದು ಯುವಕನೋರ್ವ ಮನೆ ಪಕ್ಕದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಪಾಣೆಮಂಗಳೂರು ಸಮೀಪದ ರೆಂಗೇಲು ಎಂಬಲ್ಲಿ ಸಂಭವಿಸಿದೆ.
ಮೃತ ಯುವಕನನ್ನು ಇಲ್ಲಿನ ನಿವಾಸಿ ಡೀಕಯ್ಯ ಪೂಜಾರಿ ಅವರ ಪುತ್ರ ಅಕಿಲೇಶ್ ಎಂದು ಹೆಸರಿಸಲಾಗಿದೆ. ಈ ಬಗ್ಗೆ ಮೃತನ ತಂದೆ ಡೀಕಯ್ಯ ಅವರು ಪೊಲೀಸರಿಗೆ ದೂರು ನೀಡಿದ್ದು, ಅ 28 ರಂದು ರಾತ್ರಿ 10 ಗಂಟೆ ವೇಳೆಗೆ ಬೈಕಿನ ಇಎಂಐ ಹಣ ಯಾಕೆ ಪಾವತಿಸಲಿಲ್ಲ ಎಂದು ಪ್ರಶ್ನಿಸಿದಕ್ಕೆ ಅ 28 ರ ರಾತ್ರಿ 11 ಗಂಟೆಯಿಂದ ಅ 29 ರ ಬೆಳಿಗ್ಗೆ 9.30ರ ಮಧ್ಯೆ ಜೀವನದಲ್ಲಿ ಜಿಗುಪ್ಸೆಗೊಂಡು ಮನೆ ಪಕ್ಕದಲ್ಲಿರುವ ಕಾಟುಮರದ ಕೊಂಬೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂದು ನೀಡಿದ ದೂರಿನಂತೆ ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.











0 comments:
Post a Comment