ಯುವತಿಗೆ ಹಣದ ಆಮಿಷವೊಡ್ಡಿ ಕಿರುಕುಳ : ಆರೋಪಿ ಬಂಧಿಸಿದ ವೇಣೂರು ಪೊಲೀಸರು - Karavali Times ಯುವತಿಗೆ ಹಣದ ಆಮಿಷವೊಡ್ಡಿ ಕಿರುಕುಳ : ಆರೋಪಿ ಬಂಧಿಸಿದ ವೇಣೂರು ಪೊಲೀಸರು - Karavali Times

728x90

25 October 2026

ಯುವತಿಗೆ ಹಣದ ಆಮಿಷವೊಡ್ಡಿ ಕಿರುಕುಳ : ಆರೋಪಿ ಬಂಧಿಸಿದ ವೇಣೂರು ಪೊಲೀಸರು

ಬಂಟ್ವಾಳ, ಅಕ್ಟೋಬರ್ 25, 2026 (ಕರಾವಳಿ ಟೈಮ್ಸ್) : ಕೆಲಸ ಮಾಡುತ್ತಿದ್ದ ಯುವತಿಗೆ ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿಯೋರ್ವ ಹಣದ ಆಮಿಷವೊಡ್ಡಿ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. 

ಬಂಧಿತ ಆರೋಪಿಯನ್ನು ವೇಣೂರು ನಿವಾಸಿ ಸೈಯ್ಯದ್ ಮಹಮ್ಮದ್ ಇಸಾಕ್ (61) ಎಂದು ಹೆಸರಿಸಲಾಗಿದೆ. ಸಂತ್ರಸ್ಥ ಯುವತಿಯು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಅ 24 ರಂದು ಮಧ್ಯಾಹ್ನ, ವೇಣೂರು ಠಾಣಾ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದಾಗ, ಅಲ್ಲಿಗೆ ಬಂದ ಆರೋಪಿ ದ್ವಿಚಕ್ರ ವಾಹನದಲ್ಲಿ ಬಂದು ಯುವತಿಯೊಂದಿಗೆ  ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ಮಾತನಾಡುತ್ತಾ, ಹಣದ ಆಮಿಷವೊಡ್ಡಿ ಲೈಂಗಿಕವಾಗಿ ಕಿರುಕುಳ ನೀಡಿರುತ್ತಾನೆ ಎಂಬುದಾಗಿ ನೀಡಿದ ದೂರಿನಂತೆ ಈ ಬಗ್ಗೆ ವೇಣೂರು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಯುವತಿಗೆ ಹಣದ ಆಮಿಷವೊಡ್ಡಿ ಕಿರುಕುಳ : ಆರೋಪಿ ಬಂಧಿಸಿದ ವೇಣೂರು ಪೊಲೀಸರು Rating: 5 Reviewed By: karavali Times
Scroll to Top