ಸುಳ್ಯ, ಅಕ್ಟೋಬರ್ 13, 2026 (ಕರಾವಳಿ ಟೈಮ್ಸ್) : ಮೀನು ಹಿಡಿಯಲೆಂದು ತೋಡಿಗೆ ಇಳಿದ ಇಬ್ಬರು ಯುವಕರು ವಿದ್ಯುತ್ ಪ್ರವಹಿಸಿ ದಾರುಣವಾಗಿ ಮೃತಪಟ್ಟು ಓರ್ವ ಅಪ್ರಾಪ್ತ ಬಾಲಕ ಗಂಭೀರ ಗಾಯಗೊಂಡ ಘಟನೆ ಕಲ್ಮಡ್ಕ ಗ್ರಾಮದ ಹೊಳೆಕ್ಕೆರೆ ಎಂಬಲ್ಲಿ ಅ 12 ರಂದು ಸಂಭವಿಸಿದೆ.
ಮೃತ ಯುವಕರನ್ನು ಸುಳ್ಯ-ಕಲ್ಮಡ್ಕ ನಿವಾಸಿ ಭರತ್ (28) ಹಾಗೂ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ನಿವಾಸಿ ರಮೇಶ್ ಅಲಿಯಾಸ್ ಗಣೇಶ್ (36) ಎಂದು ಹೆಸರಿಸಲಾಗಿದೆ. ಇವರು ಇನ್ನೊಬ್ಬ ಅಪ್ರಾಪ್ತ ಬಾಲಕನೊಂದಿಗೆ ಸುಳ್ಯದ ಕಲ್ಮಡ್ಕ ಗ್ರಾಮದಲ್ಲಿನ ಹೊಳೆಕ್ಕೆರೆ ಎಂಬಲ್ಲಿ ತೋಡಿನಲ್ಲಿ ಹರಿಯುವ ನೀರಿನಲ್ಲಿ ಮೀನು ಹಿಡಿಯುತ್ತಾ ಮುಂದೆ ಸಾಗಿದ್ದು ಅದರ ಪಕ್ಕದಲ್ಲಿನ ಮಧುಸೂದನ್ ಭಟ್ ಎಂಬವರ ತೋಟದಿಂದ ವಿದ್ಯುತ್ ಪ್ರವಹಿಸಿ ಬಿದ್ದಿರುವುದಾಗಿದೆ ಇದನ್ನು ನೋಡಿದ ಜೊತೆಗಿದ್ದ ಅಪ್ರಾಪ್ತ ಬಾಲಕ ತನ್ನ ಸಂಬಂಧಿಕರೊಂದಿಗೆ ಸದ್ರಿ ವಿಷಯವನ್ನು ತಿಳಿಸಿ ಅವರನ್ನು ಕೆ.ವಿ.ಜಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಪರೀಕ್ಷಿಸಿ ಸದ್ರಿ ಭರತ್ ಮತ್ತು ರಮೇಶ್ ಅಲಿಯಾಸ್ ಗಣೇಶ್ ಅವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಗಾಯಗೊಂಡ ಬಾಲಕನ್ನು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಅನಧಿಕೃತವಾಗಿ ತೋಟಕ್ಕೆ ವಿದ್ಯುತ್ ಅಳವಡಿಸಿರುವ ಮಧುಸೂದನ್ ಭಟ್ ಅವರ ವಿರುದ್ಧ ಬೆಳ್ಳಾರೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












0 comments:
Post a Comment