ಆರೋಗ್ಯ ಇಲಾಖೆ ನೋಂದಣಿ ನವೀಕರಿಸದ ಆಸ್ಪತ್ರೆಗಳಿಗೆ ದಂಡ ವಿಧಿಸಿ ಡೀಸಿ ಆದೇಶ - Karavali Times ಆರೋಗ್ಯ ಇಲಾಖೆ ನೋಂದಣಿ ನವೀಕರಿಸದ ಆಸ್ಪತ್ರೆಗಳಿಗೆ ದಂಡ ವಿಧಿಸಿ ಡೀಸಿ ಆದೇಶ - Karavali Times

728x90

13 October 2026

ಆರೋಗ್ಯ ಇಲಾಖೆ ನೋಂದಣಿ ನವೀಕರಿಸದ ಆಸ್ಪತ್ರೆಗಳಿಗೆ ದಂಡ ವಿಧಿಸಿ ಡೀಸಿ ಆದೇಶ

ಮಂಗಳೂರು, ಅಕ್ಟೋಬರ್ 13, 2026 (ಕರಾವಳಿ ಟೈಮ್ಸ್) : ಕರ್ನಾಟಕ ಖಾಸಗಿ ವೈದ್ಯಕೀಯ ಸ್ಫಾಪನೆ ಕಾಯಿದೆ (ಕೆ.ಪಿ.ಎಂ.ಇ.ಎ) ನೋಂದಣಿ ಮತ್ತು ಕುಂದುಕೊರತೆ ನಿವಾರಣಾ ಪ್ರಾಧಿಕಾರದ ಸಭೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಅವರ  ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಕೆ.ಪಿ.ಎಂ.ಇ.ಎ ನವೀಕರಣ ಪರವಾನಿಗೆ ಪಡೆಯಲು ಅಗ್ನಿಶಾಮಕ ಇಲಾಖೆಯಿಂದ ಪಡೆದ ಪ್ರಮಾಣ ಪತ್ರ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪಡೆದ ಪ್ರಮಾಣಪತ್ರ ಸಲ್ಲಿಸದೇ ಕೆ.ಪಿ.ಎಂ.ಇ.ಎ ಪ್ರಮಾಣ ಪತ್ರ ನವೀಕರಣವನ್ನು 3 ವರ್ಷಗಳಿಂದ ಮಾಡದೇ ಇರುವುದರಿಂದ ಕೆ.ವಿ.ಜಿ ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಇಲ್ಲಿಯ ಅಧಿಕಾರಿಗಳೊಂದಿಗೆ ಚರ್ಚಿಸಿದಾಗ ಪ್ರಸ್ತುತ ಅಗ್ನಿಶಾಮಕ ಇಲಾಖೆಯಿಂದ ಪ್ರಮಾಣ ಪತ್ರ ಪಡೆದಿರುವ ಬಗ್ಗೆ ತಿಳಿಸಿದ್ದು, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪ್ರಮಾಣ ಪತ್ರ ಪಡೆಯಲು ಬಾಕಿ ಇರುತ್ತದೆ ಎಂದು ತಿಳಿಸಿದರು. ಕಳೆದ 3 ವರ್ಷದಿಂದ ಕೆ.ಪಿ.ಎಂ.ಇ.ಎ ಅಡಿಯಲ್ಲಿ ನೋಂದಣಿಯಾಗದೇ ಕೆ.ವಿ.ಜಿ ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯು ಕಾರ್ಯನಿರ್ವಹಿಸುತ್ತಿರುವುದು ಕೆ.ಪಿ.ಎಂ.ಇ ಕಾಯ್ದೆ ಮತ್ತು ಕಾನೂನಿನ ಉಲ್ಲಂಘನೆಯಾಗಿರುತ್ತದೆ. ಆದುದರಿಂದ ಈ ಪ್ರಕರಣದ ಕುರಿತು ಕೆ.ಪಿ.ಎಂ.ಇ ಕಾಯ್ದೆ 19(1)ರಂತೆ 1 ಲಕ್ಷ ರೂಪಾಯಿಗಳನ್ನು ದಂಡ ವಿಧಿಸಲು ಜಿಲ್ಲಾಧಿಕಾರಿಗಳು ಆದೇಶಿಸಿದರು.

ಒಮೆಗಾ ಆಸ್ಪತ್ರೆ ಮಂಗಳೂರು ಇವರು ಕೆ.ಪಿ.ಎಂ.ಇ.ಎ ನವೀಕರಣ ಪರವಾನಿಗೆ ಪ್ರಮಾಣ ಪತ್ರ ಪಡೆಯದೇ ಒಂದೂವರೇ ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದು, ಕೆ.ಪಿ.ಎಂ.ಇ.ಎ ಪ್ರಮಾಣಪತ್ರ ನವೀಕರಣಗೊಳಿಸಲು ಅಗ್ನಿಶಾಮಕ ಇಲಾಖೆಯಿಂದ ಪಡೆದ ಪ್ರಮಾಣ ಪತ್ರ ನೀಡದೇ ಇರುವುದರಿಂದ ಕೆ.ಪಿ.ಎಂ.ಇ.ಎ ನವೀಕರಣವಾಗದೇ ಇರುವ ಕುರಿತು ಒಮೆಗಾ ಆಸ್ಪತ್ರೆಯ ಅಧಿಕಾರಿಯವರೊಂದಿಗೆ ಜಿಲ್ಲಾಧಿಕಾರಿಗಳು ಚರ್ಚಿಸಿದರು. ಕಳೆದ ಒಂದೂವರೇ ವರ್ಷದಿಂದ ಕೆ.ಪಿ.ಎಂ.ಇ.ಎ ಅಡಿಯಲ್ಲಿ ನೋಂದÀಣಿಯಾಗದೇ ಒಮೆಗಾ ಆಸ್ಪತ್ರೆ ಮಂಗಳೂರು ಕಾರ್ಯನಿರ್ವಹಿಸುತ್ತಿರುವುದು ಕೆ.ಪಿ.ಎಂ.ಇ ಕಾಯ್ದೆ ಮತ್ತು ಕಾನೂನಿನ ಉಲ್ಲಂಘನೆಯಾಗಿರುತ್ತದೆ. ಈ ಪ್ರಕರಣದ ಕುರಿತು ಕೆ.ಪಿ.ಎಂ.ಇ ಕಾಯ್ದೆ 19(1) ರಂತೆ 1 ಲಕ್ಷ ರೂಪಾಯಿಗಳನ್ನು ದಂಡ ವಿಧಿಸಲು ಹಾಗೂ ಕಾನೂನು ಕ್ರಮ ಜರುಗಿಸಲು ಜಿಲ್ಲಾಧಿಕಾರಿಗಳು ಆದೇಶಿಸಿದರು.

ದ.ಕ ಜಿಲ್ಲೆಯಲ್ಲಿರುವ ಎಲ್ಲಾ ಆಸ್ಪತ್ರೆಯವರು ಅಗ್ನಿಶಾಮಕ ಇಲಾಖೆಯಿಂದ ಪ್ರಮಾಣ ಪತ್ರ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪರವಾನಿಗೆ ಕಡ್ಡಾಯವಾಗಿ ಪಡೆದಿರುವ ಬಗ್ಗೆ ಆಡಿಟ್ ಮಾಡಲು ಇಲಾಖಾಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್.ಆರ್ ತಿಮ್ಮಯ್ಯ, ವೆನ್ ಲಾಕ್ ಅಧೀಕ್ಷಕ ಡಾ. ಶಿವಪ್ರಕಾಶ್, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ದೀಪಾ ಪ್ರಭು, ಹಿರಿಯ ಮಕ್ಕಳ ತಜ್ಞ ಡಾ. ಶಾಂತರಾಮ ಬಾಳಿಗ, ಐ.ಎಂ.ಎ ಅಧ್ಯಕ್ಷ ಡಾ. ಸದಾನಂದ ಪೂಜಾರಿ, ಕೆ.ಎಸ್ ಹೆಗ್ಡೆ ಮೆಡಿಕಲ್ ಕಾಲೇಜು ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಸಂದೀಪ್ ರೈ, ಕೌನ್ಸಿಲರ್ ರಾಣಿ ಮಂಗಳ, ವಕೀಲ ಚಂದ್ರಹಾಸ ಮೊದಲಾದವರು ಭಾಗವಹಿಸಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಆರೋಗ್ಯ ಇಲಾಖೆ ನೋಂದಣಿ ನವೀಕರಿಸದ ಆಸ್ಪತ್ರೆಗಳಿಗೆ ದಂಡ ವಿಧಿಸಿ ಡೀಸಿ ಆದೇಶ Rating: 5 Reviewed By: karavali Times
Scroll to Top