ಮಂಚಿ : ಮನೆ ಮಂದಿ ಇಲ್ಲದ ವೇಳೆ ನುಗ್ಗಿ ಗೋದ್ರೆಜ್ ಹೊತ್ತೊಯ್ದು ನಗದು ಕಳವುಗೈದ ಖದೀಮರು - Karavali Times ಮಂಚಿ : ಮನೆ ಮಂದಿ ಇಲ್ಲದ ವೇಳೆ ನುಗ್ಗಿ ಗೋದ್ರೆಜ್ ಹೊತ್ತೊಯ್ದು ನಗದು ಕಳವುಗೈದ ಖದೀಮರು - Karavali Times

728x90

16 October 2026

ಮಂಚಿ : ಮನೆ ಮಂದಿ ಇಲ್ಲದ ವೇಳೆ ನುಗ್ಗಿ ಗೋದ್ರೆಜ್ ಹೊತ್ತೊಯ್ದು ನಗದು ಕಳವುಗೈದ ಖದೀಮರು

ಬಂಟ್ವಾಳ, ಅಕ್ಟೋಬರ್ 16, 2026 (ಕರಾವಳಿ ಟೈಮ್ಸ್) : ಮಂಚಿ ಗ್ರಾಮದ ನೊಳ ಎಂಬಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಒಳ ಪ್ರವೇಶಿಸಿದ ಕಳ್ಳರು ಮನೆಯ ಗೋದ್ರೆಜ್ ಕಪಾಟನ್ನೇ ಹೊತ್ತೊಯ್ದು ಅದರಲ್ಲಿದ್ದ ಸುಮಾರು 30 ಸಾವಿರ ರೂಪಾಯಿ ನಗದು ಹಣ ಕಳವುಗೈದ ಘಟನೆ ಅ 15 ರಂದು ಬೆಳಕಿಗೆ ಬಂದಿದೆ. 

ಇಲ್ಲಿನ ನಿವಾಸಿ ಅಬ್ದುಲ್ ಬಶೀರ್ (38) ಅವರ ಮನೆಯಲ್ಲಿ ಈ ಕಳವು ಕೃತ್ಯ ನಡೆದಿದ್ದು, ಇವರು ವಿದೇಶದಲ್ಲಿ (ದುಬೈ) ಕೆಲಸ ಮಾಡಿಕೊಂಡಿದ್ದು ಸುಮಾರು 2 ತಿಂಗಳ ಹಿಂದೆ ಊರಿಗೆ ಬಂದು ಮನೆಯಲ್ಲಿಯೇ ಇದ್ದರು. ಇವರ ತಂದೆ-ತಾಯಿ ಸೆ 12 ರಂದು ಸಂಜೆ 4.30 ರ ವೇಳೆಗೆ ತಂಗಿ ಸಮೀಮಾ ಅವರ ಮೊಂಟೆಪದವು ಮನೆಗೆ ಹೋಗಿದ್ದಾರೆ. ಇವರ ಹೆಂಡಿತಿಯೂ ಮಕ್ಕಳೊಂದಿಗೆ ಕೇರಳ ಕಡೆ ಪ್ರವಾಸಕ್ಕೆ ಹೋಗಿದ್ದರು. ಬಶೀರ್ ಅವರು ಮನೆಯಲ್ಲಿ ಒಬ್ಬನೆ ಇದ್ದ ಕಾರಣ ಮನೆಯ ಕೆಳ ಭಾಗದಲ್ಲಿರುವ ಅಕ್ಕ ಜುಬೈದಾ ಅವರ ಮನೆಯಲ್ಲಿ ರಾತ್ರಿ ಉಳಿದುಕೊಳ್ಳುತ್ತಿದ್ದರು. ಅ 14 ರಂದು ರಾತ್ರಿ 9 ಗಂಟೆಗೆ ಬಶೀರ್ ಅವರು ಮನೆಯ ಬಾಗಿಲಿಗೆ ಬೀಗ ಹಾಕಿ ಅಕ್ಕ ಜುಬೈದಾ ಅವರ ಮನೆಗೆ ಹೋಗಿ ಅಲ್ಲಿಯೇ ಉಳಿದುಕೊಂಡಿದ್ದರು. ಅ 15 ರಂದು ಬೆಳಿಗ್ಗೆ 9 ಗಂಟೆಗೆ ಬಶೀರ್ ಅವರು ಅಕ್ಕಳ ಮನೆಯಿಂದ ತಮ್ಮ ಮನೆಗೆ ಬಂದು ನೋಡಿದಾಗ ಮನೆಯ ಬಾಗಿಲಿಗೆ ಅಳವಡಿಸಿದ ಬೀಗ ಯಾರೋ ಕಳ್ಳರು ಮುರಿದು ಜಖಂಗೊಳಿಸಿರುವುದು ಕಂಡು ಬಂದಿದೆ. ಮನೆಯ ಒಳಗೆ ಪ್ರವೇಶಿಸಿ ನೋಡಿದಾಗ  ಮನೆಯ ಒಳ ಭಾಗದಲ್ಲಿ ಬಟ್ಟೆ-ಬರೆಗಳು ನೆಲದ ಮೇಲೆ ಚಿಲ್ಲಾಪಿಲ್ಲಿಯಾಗಿ ಬಿಸಾಡಿರುವುದು ಕಂಡು ಬಂದಿದೆ. ತಂದೆ-ತಾಯಿಯ ರೂಮಿನ ಗೋದ್ರೆಜ್ ಕಪಾಟುಗಳನ್ನು ಜಖಂಗೊಳಿಸಿರುವುದು ಕಂಡು ಬಂದಿದೆ. ತಂದೆಯ ರೂಮಿನಲ್ಲಿದ್ದ 2 ಗೋದ್ರಜ್ ಕಪಾಟುಗಳ ಪೈಕಿ ಒಂದು ಗೋದ್ರೆಜ್ ಕಾಣೆಯಾಗಿತ್ತು. ಬಳಿಕ ಹುಡುಕಾಡಿದಾಗ ಮನೆಯ ಪಕ್ಕದ ತೋಟದಲ್ಲಿ ಗೋದ್ರೆಜ್ ಕಪಾಟು ಕಂಡು ಬಂದಿದೆ. ಗೋದ್ರೆಜ್ ಕಪಾಟಿನಲ್ಲಿದ್ದ ಸುಮಾರು 30 ಸಾವಿರ ರೂಪಾಯಿ ನಗದು ಹಣ ಕಳವುಗೈದಿರುವುದು ಕಂಡು ಬಂದಿದೆ. ಈ ಬಗ್ಗೆ ಮನೆ ಮಾಲಿಕ ಬಶೀರ್ ಅವರು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಮಂಚಿ : ಮನೆ ಮಂದಿ ಇಲ್ಲದ ವೇಳೆ ನುಗ್ಗಿ ಗೋದ್ರೆಜ್ ಹೊತ್ತೊಯ್ದು ನಗದು ಕಳವುಗೈದ ಖದೀಮರು Rating: 5 Reviewed By: karavali Times
Scroll to Top