ಮಂಗಳೂರು, ಅಕ್ಟೋಬರ್ 16, 2026 (ಕರಾವಳಿ ಟೈಮ್ಸ್) : ಕೆ.ಎಸ್.ಆರ್.ಟಿ.ಸಿ ಮಂಗಳೂರು ವಿಭಾಗವು ಕಳೆದ 4 ವರ್ಷಗಳಿಂದ ದಸರಾ ಹಬ್ಬದ ಪ್ರಯುಕ್ತ ಮಂಗಳೂರಿನಿಂದ ಹಾಗೂ ಉಡುಪಿಯಿಂದ ವಿವಿಧ ದೇವಸ್ಥಾನ/ ಪ್ರೇಕ್ಷಣೀಯ ಸ್ಥಳಗಳಿಗೆ ವಿಶೇಷ ಪ್ರವಾಸ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಹಮ್ಮಿಕೊಂಡಿದ್ದು, ಪ್ಯಾಕೇಜ್ ಪ್ರವಾಸಕ್ಕೆ ಸಾರ್ವಜನಿಕ ಪ್ರಯಾಣಿಕರಿಂದ ಉತ್ತಮ ರೀತಿಯ ಪ್ರತಿಕ್ರಿಯೆ/ ಸ್ಪಂದನೆ ಬಂದಿರುತ್ತದೆ. ಅದರಂತೆ ಈ ವರ್ಷವೂ ಸಹ ಅಕ್ಟೋಬರ್ 20ರವರೆಗೆ ವಿಭಾಗದ ಘಟಕಗಳಿಂದ ಸ್ಥಳೀಯ ಪ್ರೇಕ್ಷಣಿಯ ಸ್ಥಳಗಳಿಗೆ/ ದೇವಸ್ಥಾನಗಳಿಗೆ ದಸರಾ ವಿಶೇಷವಾಗಿ ಪ್ಯಾಕೇಜ್ ಪ್ರವಾಸವನ್ನು ಯಶಸ್ವಿಯಾಗಿ ಕಾರ್ಯಾಚರಿಸುತ್ತಿದ್ದು, ಬಹುಜನರ ಬೇಡಿಕೆಯ ಮೇರೆಗೆ ಮಂಗಳೂರು ದಸರಾ ಪ್ಯಾಕೇಜ್ ಪ್ರವಾಸವನ್ನು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಅಕ್ಟೋಬರ್ 25 ರವರೆಗೆ ವಿಸ್ತರಿಸಲಾಗಿದೆ.
ಪ್ಯಾಕೇಜ್ ಹೆಸರು, ಪ್ರಯಾಣದ ದರ ವಿವರ (ಊಟ ಉಪಹಾರ ಹೊರತುಪಡಿಸಿ) :
ಮಂಗಳೂರು ದಸರಾ ದರ್ಶನ ವಯಸ್ಕರಿಗೆ 500/- ರೂಪಾಯಿ, ಮಕ್ಕಳಿಗೆ 400/- ರೂಪಾಯಿ
ಮಂಗಳೂರು-ಕೊಲ್ಲೂರು : ವಯಸ್ಕರಿಗೆ 600/- ರೂಪಾಯಿ, ಮಕ್ಕಳಿಗೆ 500/- ರೂಪಾಯಿ
ಮಂಗಳೂರು-ತಲಕಾವೇರಿ-ಭಾಗಮಂಡಲ : ವಯಸ್ಕರಿಗೆ 600/- ರೂಪಾಯಿ, ಮಕ್ಕಳಿಗೆ 500/- ರೂಪಾಯಿ
ಮಂಗಳೂರು-ಸಿಗಂದೂರು : ವಯಸ್ಕರಿಗೆ 700/- ರೂಪಾಯಿ, ಮಕ್ಕಳಿಗೆ 600/- ರೂಪಾಯಿ
ಮಂಗಳೂರು-ಶೃಂಗೇರಿ : ವಯಸ್ಕರಿಗೆ 600/- ರೂಪಾಯಿ, ಮಕ್ಕಳಿಗೆ 500/- ರೂಪಾಯಿ,
ಉಡುಪಿ-ಕೊಲ್ಲೂರು : ವಯಸ್ಕರಿಗೆ 500/- ರೂಪಾಯಿ, ಮಕ್ಕಳಿಗೆ 400/- ರೂಪಾಯಿ
ಉಡುಪಿ-ಶೃಂಗೇರಿ : ವಯಸ್ಕರಿಗೆ 500/- ರೂಪಾಯಿ, ಮಕ್ಕಳಿಗೆ 400/- ರೂಪಾಯಿ
ಬಸ್ಸುಗಳಿಗೆ ಕೆ ಎಸ್ ಆರ್ ಟಿ ಸಿ ವೆಬ್ ಸೈಟಿನಲ್ಲಿ ಮುಂಗಡ ಬುಕ್ಕಿಂಗ್ ವ್ಯವಸ್ಥೆ ಇರುತ್ತದೆ ಎಂದು ಕೆ.ಎಸ್.ಆರ್.ಟಿ.ಸಿ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











0 comments:
Post a Comment