ಭಜನೆ, ಶೋಕ-ಮಂತ್ರಗಳನ್ನು ನಿರರ್ಗಳವಾಗಿ ಪಠಿಸುವ 2 ವರ್ಷದ ಕಂದಮ್ಮ : ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ಪ್ರಾಧ್ಯಾ ವೈ ಕುಲಾಲ್, ಸಂಸದ-ಶಾಸಕರಿಂದ ಸನ್ಮಾನ - Karavali Times ಭಜನೆ, ಶೋಕ-ಮಂತ್ರಗಳನ್ನು ನಿರರ್ಗಳವಾಗಿ ಪಠಿಸುವ 2 ವರ್ಷದ ಕಂದಮ್ಮ : ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ಪ್ರಾಧ್ಯಾ ವೈ ಕುಲಾಲ್, ಸಂಸದ-ಶಾಸಕರಿಂದ ಸನ್ಮಾನ - Karavali Times

728x90

17 October 2026

ಭಜನೆ, ಶೋಕ-ಮಂತ್ರಗಳನ್ನು ನಿರರ್ಗಳವಾಗಿ ಪಠಿಸುವ 2 ವರ್ಷದ ಕಂದಮ್ಮ : ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ಪ್ರಾಧ್ಯಾ ವೈ ಕುಲಾಲ್, ಸಂಸದ-ಶಾಸಕರಿಂದ ಸನ್ಮಾನ

 ಬಂಟ್ವಾಳ, ಅಕ್ಟೋಬರ್ 17, 2026 (ಕರಾವಳಿ ಟೈಮ್ಸ್) : ಕೇವಲ ಎರಡು ವರ್ಷ ಒಂಬತ್ತು ತಿಂಗಳ ಪುಟ್ಟ ಬಾಲಕಿ ಕನ್ನಡ ಮತ್ತು ತುಳು ಭಾಷೆಗಳಲ್ಲಿ ಭಜನೆಗಳನ್ನು ಸುಶ್ರಾವ್ಯವಾಗಿ ಹಾಡಿ, ಶ್ಲೋಕ-ಮಂತ್ರಗಳನ್ನು ನಿರರ್ಗಳವಾಗಿ ಪಠಿಸುವ ಮೂಲಕ ಪ್ರತಿಷ್ಠಿತ ‘ಇಂಡಿಯಾ ಬುಕ್ ಆಫ್ ರೆಕಾರ್ಡ್’ ನಲ್ಲಿ ತನ್ನ ಹೆಸರು ದಾಖಲಿಸಿ ಗಮನಾರ್ಹ ಸಾಧನೆ ಮಾಡಿದ್ದಾಳೆ.

ಬಂಟ್ವಾಳ ವಿದ್ಯಾಗಿರಿಯ ಎಸ್ ವಿ ಎಸ್ ಆಂಗ್ಲ ಮಾಧ್ಯಮ ಶಾಲೆಯ ನರ್ಸರಿ ವಿಭಾಗದ ವಿದ್ಯಾರ್ಥಿನಿಯಾಗಿರುವ ಈಕೆ ಬಿ ಸಿ ರೋಡು-ದೈಪಲ ನಿವಾಸಿ ಯಾದವ ಮತ್ತು ವಿಜಯಲಕ್ಷ್ಮಿ ದಂಪತಿಯ ಪುತ್ರಿ. 

ತನ್ನ ತೊದಲು ನುಡಿಯ ಪ್ರಾಯದಲ್ಲೇ ಕನ್ನಡ ಹಾಗೂ ತುಳು ಭಾಷೆಯ 5 ಭಕ್ತಿಪೂರ್ವಕ ಭಜನೆಗಳನ್ನು ಸ್ಪಷ್ಟವಾಗಿ ಹಾಡುವುದರ ಜೊತೆಗೆ, 4 ಪವಿತ್ರ ಮಂತ್ರಗಳನ್ನು ಲೀಲಾಜಾಲವಾಗಿ ಪಠಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನ ತೀರ್ಪುಗಾರರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಈಕೆಯ ಅಸಾಮಾನ್ಯ ಸ್ಮರಣಾಶಕ್ತಿ ಹಾಗೂ ಭಕ್ತಿಭಾವದ ಅಭಿವ್ಯಕ್ತಿಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ.

ಕಿರಿಯ ವÀಯಸ್ಸಿನಲ್ಲಿ ಶಾಲೆಗೆ ಹಾಗೂ ಊರಿಗೆ ಕೀರ್ತಿ ತಂದಿರುವ ಇವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು. 

ಈಕೆಯ ಸಾಧನೆಗೆ ಸಂಸದ ಕ್ಯಾ ಬ್ರಿಜೇಶ್ ಚೌಟ ಹಾಗೂ ಶಾಸಕ ಯು ರಾಜೇಶ್ ನಾಯ್ಕ್ ಅವರು ತಮ್ಮ ಶಾಸಕರ ಮನೆಯಾದ ಒಡ್ಡೂರು ಫಾರ್ಮ್ ಹೌಸ್ ನಲ್ಲಿ ಶಾಲು ಹೊದಿಸಿ ಅಭಿನಂದನೆ ಸಲ್ಲಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಭಜನೆ, ಶೋಕ-ಮಂತ್ರಗಳನ್ನು ನಿರರ್ಗಳವಾಗಿ ಪಠಿಸುವ 2 ವರ್ಷದ ಕಂದಮ್ಮ : ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ಪ್ರಾಧ್ಯಾ ವೈ ಕುಲಾಲ್, ಸಂಸದ-ಶಾಸಕರಿಂದ ಸನ್ಮಾನ Rating: 5 Reviewed By: karavali Times
Scroll to Top