ಮಂಗಳೂರು, ಅಕ್ಟೋಬರ್ 17, 2026 (ಕರಾವಳಿ ಟೈಮ್ಸ್) : ಶ್ರೀನಿವಾಸ ವಿಶ್ವವಿದ್ಯಾಲಯ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಆಂಡ್ ಕಾಮರ್ಸ್ ಇಲ್ಲಿನ ಬಿಬಿಎ ವಿಭಾಗದ ಮುಖ್ಯಸ್ಥೆ ಶಿಲ್ಪಾ ಕೆ ಮಂಡಿಸಿದ “ಕಸ್ಟಮರ್ ಸ್ಯಾಟಿಸ್ ಫ್ಯಾಕ್ಷನ್ ಟುವರ್ಡ್ಸ್ ಆನ್ ಲೈನ್ ಬ್ಯಾಂಕಿಂಗ್ ಸರ್ವಿಸಸ್ ಆಫ್ ಕಮರ್ಷಿಯಲ್ ಬ್ಯಾಂಕ್ಸ್” (ವಾಣಿಜ್ಯ ಬ್ಯಾಂಕುಗಳ ಆನ್ ಲೈನ್ ಬ್ಯಾಂಕಿಂಗ್ ಸೇವೆಗಳ ಕುರಿತು ಗ್ರಾಹಕರ ತೃಪ್ತಿ) ಎಂಬ ವಿಷಯದ ಕುರಿತು ಮಂಡಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯ ಪಿ.ಎಚ್.ಡಿ ಪದವಿ ನೀಡಿ ಗೌರವಿಸಿದೆ.
ಇವರು ವಿಶ್ವವಿದ್ಯಾಲಯದ ಸಂಶೋಧನಾ ಪ್ರಾಧ್ಯಾಪಕ ಡಾ. ಸಿ.ಕೆ. ಹೆಬ್ಬಾರ್ ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು. ಡಾ. ಶಿಲ್ಪಾ ಕೆ. ಕುದ್ರೋಳಿಯ ಸುರೇಶ್ ಕೆ. ಹಾಗೂ ವಿಜಯಾ ಆರ್.ಕೆ. ದಂಪತಿಯ ಪುತ್ರಿ.











0 comments:
Post a Comment