ಕೈಕುಂಜೆ-ಅಲೆತ್ತೂರು ಸಂಪರ್ಕ ರಸ್ತೆ, ಕಿರು ಸೇತುವೆ ಉದ್ಘಾಟಿಸಿದ ಶಾಸಕ ರಾಜೇಶ್ ನಾಯಕ್ - Karavali Times ಕೈಕುಂಜೆ-ಅಲೆತ್ತೂರು ಸಂಪರ್ಕ ರಸ್ತೆ, ಕಿರು ಸೇತುವೆ ಉದ್ಘಾಟಿಸಿದ ಶಾಸಕ ರಾಜೇಶ್ ನಾಯಕ್ - Karavali Times

728x90

11 October 2026

ಕೈಕುಂಜೆ-ಅಲೆತ್ತೂರು ಸಂಪರ್ಕ ರಸ್ತೆ, ಕಿರು ಸೇತುವೆ ಉದ್ಘಾಟಿಸಿದ ಶಾಸಕ ರಾಜೇಶ್ ನಾಯಕ್

ಬಂಟ್ವಾಳ, ಅಕ್ಟೋಬರ್ 11, 2026 (ಕರಾವಳಿ ಟೈಮ್ಸ್) : ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ರಸ್ತೆ ಸಂಪರ್ಕ ಪ್ರಮುಖವಾಗಿದ್ದು, ಜನರ ಸಂಚಾರಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಯು ರಾಜೇಶ್ ನಾಯ್ಕ್ ಹೇಳಿದರು.

ಬಿ ಸಿ ರೋಡಿನಿಂದ ಕೈಕುಂಜೆ-ಅಲೆತ್ತೂರು ಮೂಲಕ ಗ್ರಾಮ ದೈವ ಪಂಜುರ್ಲಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ 20 ಲಕ್ಷ ರೂಪಾಯಿ ವೆಚ್ಚದ ಕಾಂಕ್ರಿಟ್ ರಸ್ತೆ ಹಾಗೂ 30 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಕಿರು ಸೇತುವೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನರಿಗೆ ಉತ್ತಮ ರಸ್ತೆ ಸಂಪರ್ಕ ಕಲ್ಪಿಸುವುದರಿಂದ ದೈನಂದಿನ ಸಂಚಾರ ಸುಗಮವಾಗುವುದರ ಜತೆಗೆ ಸ್ಥಳೀಯ ಅಭಿವೃದ್ಧಿಗೂ ಸಹಕಾರಿಯಾಗುತ್ತದೆ. ಜನರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ರಸ್ತೆ, ಸೇತುವೆ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಸಾರ್ವಜನಿಕರ ಬೇಡಿಕೆಗಳಿಗೆ ಸ್ಪಂದಿಸಿ ಕೈಗೆತ್ತಿಕೊಳ್ಳುವ ಇಂತಹ ಕಾಮಗಾರಿಗಳು ಗ್ರಾಮೀಣ ಭಾಗದ ಜನರಿಗೆ ದೀರ್ಘಕಾಲದ ಪ್ರಯೋಜನ ಒದಗಿಸಲಿವೆ ಎಂದವರು ಹೇಳಿದರು.

ಬಿ ಸಿ ರೋಡಿನಿಂದ ಕೈಕುಂಜೆ-ಅಲೆತ್ತೂರು ಮೂಲಕ ಪಂಜುರ್ಲಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಕಾಂಕ್ರೀಟ್ ರಸ್ತೆ ಪೂರ್ಣಗೊಂಡಿರುವುದರಿಂದ ಸ್ಥಳೀಯ ನಿವಾಸಿಗಳು ಹಾಗೂ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಅನುಕೂಲವಾಗಲಿದೆ. ಕಿರು ಸೇತುವೆಯೂ ನಿರ್ಮಾಣಗೊಂಡಿರುವುದರಿಂದ ಈ ಭಾಗದ ಜನರ ಸಂಚಾರ ಮತ್ತಷ್ಟು ಸುಗಮವಾಗಲಿದೆ ಎಂದರು. 

ಈ ಸಂದರ್ಭ ಪುರಸಭಾ ನಿಕಟಪೂರ್ವ ಸದಸ್ಯ ಗೋವಿಂದ ಪ್ರಭು, ಬೂತ್ ಅಧ್ಯಕ್ಷರಾದ ಶಿವರಾಜ್ ಕೈಕುಂಜೆ, ನಿತಿನ್ ಅಲೆತ್ತೂರು, ನಗರ ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ಸುರೇಶ್ ಟೈಲರ್ ಕೈಕಂಬ, ಶಕ್ತಿ ಕೇಂದ್ರದ ಪ್ರಮುಖ್ ನವೀನ್ ಶೆಟ್ಟಿ ಕೈಕಂಬ, ಮಂಗಳ ಫ್ರೆಂಡ್ಸ್ ಅಲೆತ್ತೂರು ಅಧ್ಯಕ್ಷ ಶ್ರೀಧರ್ ಶೆಟ್ಟಿ, ಬಿಜೆಪಿ ಪ್ರಮುಖರಾದ ಅಶ್ವಥ್ ಶೆಟ್ಟಿ ಅಲೆತ್ತೂರು, ವಿಜಯ್ ಅಲೆತ್ತೂರು, ಪ್ರಣಾಮ್ ರಾಜ್ ಹಾಗೂ ಮಹೇಶ್ ಜುಮಾದಿಗುಡ್ಡೆ ಉಪಸ್ಥಿತರಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಕೈಕುಂಜೆ-ಅಲೆತ್ತೂರು ಸಂಪರ್ಕ ರಸ್ತೆ, ಕಿರು ಸೇತುವೆ ಉದ್ಘಾಟಿಸಿದ ಶಾಸಕ ರಾಜೇಶ್ ನಾಯಕ್ Rating: 5 Reviewed By: karavali Times
Scroll to Top