ಮಂಗಳೂರು, ಅಕ್ಟೋಬರ್ 10, 2026 (ಕರಾವಳಿ ಟೈಮ್ಸ್) : ಸೆಪ್ಟೆಂಬರ್ 30 ರಂದು ಎಂ ಆರ್ ಪಿ ಎಲ್ ದುರಂತದಲ್ಲಿ ಮೃತಪಟ್ಟ ಭವಿಷ್ಯ ಮನೀಶ್ ಕರ್ಕಡ ಅವರ ಕುಟುಂಬಕ್ಕೆ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್‍ಒ) ವತಿಯಿಂದ ಕುಟುಂಬದ ಅವಲಂಬಿತರ ಸಾಮಾಜಿಕ ಭದ್ರತಾ ಸೌಲಭ್ಯಗಳ ಕ್ಲೇಮುಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಿದೆ.
ಇದರೊಂದಿಗೆ ಉದ್ಯೋಗಿಗಳ ಪಂಚಣಿ ಯೋಜನೆ-2026ರ ಅಡಿಯಲ್ಲಿ ಮಾಸಿಕ ಪಂಚಣಿಯನ್ನು ಮಂಜೂರು ಮಾಡಿ ಪಾವತಿ ಪ್ರಾರಂಭಿಸಲಾಗಿದೆ. ಈ ಎಲ್ಲಾ ಸೌಲಭ್ಯಗಳನ್ನು ಅಕ್ಟೋಬರ್ 8 ರಂದು ಇತ್ಯರ್ಥಪಡಿಸಿ ಜಾರಿಗೊಳಿಸಲಾಗಿದೆ ಹಾಗೂ ಮೊತ್ತವನ್ನು ಪಾವತಿಸಲಾಗಿದೆ.
ದುಃಖತಪ್ತ ಕುಟುಂಬಕ್ಕೆ ಸಂತಾಪ ಹಾಗೂ ಸಾಂತ್ವನ ಸಲ್ಲಿಸುವ ಉದ್ದೇಶದಿಂದ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ಸಂದೀಪ್ ಬಿಸ್ವಾಸ್ ಅವರು, ಸಹಾಯಕ ಭವಿಷ್ಯ ನಿಧಿ ಆಯುಕ್ತ ಅಂಕಿತ್ ಸಿಂಗ್ ಹಾಗೂ ಪ್ರವರ್ತನಾಧಿಕಾರಿ ಶ್ರೀಮತಿ ಅನಿತಾ ಆರ್ ಅವರೊಂದಿಗೆ ಅಕ್ಟೋಬರ್ 9 ರಂದು ಮೃತ ಮನೀಶ್ ಕರ್ಕಡೆ ಅವರ ನಿವಾಸಕ್ಕೆ ಭೇಟಿ ನೀಡಿ ಫಲಾನುಭವಿಗೆ ಪಿಂಚಣಿ ಆದೇಶವನ್ನು (ಪಿಪಿಒ) ಹಸ್ತಾಂತರಿಸಿದರು.












0 comments:
Post a Comment