ರಾಜ್ಯೋತ್ಸವ ಆಚರಣೆ ವೇಳೆ ತಾಲೂಕು ಮಟ್ಟದಲ್ಲಿ ಸಾಧಕರನ್ನು ಗುರುತಿಸಿ ಗೌರವಿಸುವ ಸಂಪ್ರದಾಯ ಮುಂದಿನ ವರ್ಷದಿಂದಲೇ ಬಂಟ್ವಾಳದಲ್ಲಿ ಆರಂಭಿಸಲು ಕ್ರಮ ಕೈಗೊಳ್ಳಿ : ಕಸಾಪ ಅಧ್ಯಕ್ಷ ವಿಶ್ವನಾಥ್ ಆಗ್ರಹ - Karavali Times ರಾಜ್ಯೋತ್ಸವ ಆಚರಣೆ ವೇಳೆ ತಾಲೂಕು ಮಟ್ಟದಲ್ಲಿ ಸಾಧಕರನ್ನು ಗುರುತಿಸಿ ಗೌರವಿಸುವ ಸಂಪ್ರದಾಯ ಮುಂದಿನ ವರ್ಷದಿಂದಲೇ ಬಂಟ್ವಾಳದಲ್ಲಿ ಆರಂಭಿಸಲು ಕ್ರಮ ಕೈಗೊಳ್ಳಿ : ಕಸಾಪ ಅಧ್ಯಕ್ಷ ವಿಶ್ವನಾಥ್ ಆಗ್ರಹ - Karavali Times

728x90

31 October 2026

ರಾಜ್ಯೋತ್ಸವ ಆಚರಣೆ ವೇಳೆ ತಾಲೂಕು ಮಟ್ಟದಲ್ಲಿ ಸಾಧಕರನ್ನು ಗುರುತಿಸಿ ಗೌರವಿಸುವ ಸಂಪ್ರದಾಯ ಮುಂದಿನ ವರ್ಷದಿಂದಲೇ ಬಂಟ್ವಾಳದಲ್ಲಿ ಆರಂಭಿಸಲು ಕ್ರಮ ಕೈಗೊಳ್ಳಿ : ಕಸಾಪ ಅಧ್ಯಕ್ಷ ವಿಶ್ವನಾಥ್ ಆಗ್ರಹ

ಬಿ.ಸಿ.ರೋಡಿನಲ್ಲಿ ಬಂಟ್ವಾಳ ತಾಲೂಕಾಡಳಿತ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ


ಬಂಟ್ವಾಳ, ನವಂಬರ್ 01, 2026 (ಕರಾವಳಿ ಟೈಮ್ಸ್) : ರಾಜ್ಯ, ಜಿಲ್ಲಾ ಮಟ್ಟದಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡುವ ರೀತಿಯಲ್ಲೇ ತಾಲೂಕು ಮಟ್ಟದಲ್ಲಿ ನಾಡು-ನುಡಿ, ಸಂಸ್ಕøತಿಯ ಬೆಳವಣಿಗೆಗಾಗಿ ಶ್ರಮಿಸಿದ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಗೌರವಿಸುವ ಸಂಪ್ರದಾಯಕ್ಕೆ ಬಂಟ್ವಾಳ ತಾಲೂಕಿನಲ್ಲಿ ಮುಂದಿನ ವರ್ಷದಿಂದಲೇ ಆರಂಭಿಸುವ ಕುರಿತು ತಾಲೂಕಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಹೇಳಿದರು. 

ಬಂಟ್ವಾಳ ತಾಲೂಕಾಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನವೆಂಬರ್ 1 ರಂದು ಬಿ ಸಿ ರೋಡಿನ ಮಿನಿ ವಿಧಾನಸೌಧ ಆವರಣದಲ್ಲಿ ನಡೆದ 71ನೇ ಕನ್ನಡ ರಾಜ್ಯೋತ್ಸವ ಅಚರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಧ್ವಜಾರೋಹಣ ನೆರವೇರಿಸಿದ ತಾಲೂಕು ತಹಶೀಲ್ದಾರ್ ಹಾಗೂ ದಂಡಾಧಿಕಾರಿ ಜಿ ಮಂಜುನಾಥ್ ಅವರು ಮಾತನಾಡಿ, ಕನ್ನಡ ರಾಜ್ಯೋತ್ಸವ ಕೇವಲ ಆಚರಣೆಯಲ್ಲ. ನಾಡು-ನುಡಿ, ಭಾಷೆ, ಸಂಸ್ಕೃತಿಗಳ ಬಗ್ಗೆ ಹೆಮ್ಮೆ ಮೂಡಿಸಬೇಕಾದ ದಿನವಾಗಿದೆ. ಕನ್ನಡಿಗರ ಹೋರಾಟ, ಒಗ್ಗಟ್ಟು, ಕ್ರಾಂತಿ ಹಾಗೂ ಇತಿಹಾಸವನ್ನು ಪ್ರಕಟಿಸಬೇಕಾದ ದಿನವಾಗಿ ಮೂಡಿಬರಬೇಕಿದೆ ಎಂದರು. 

ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ ಮಾತನಾಡಿ, ನಮ್ಮ ಮಾತೃ ಭಾಷೆಯಾಗಿರುವ ಕನ್ನಡ ಭಾಷೆ ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗದೆ ನಮ್ಮ ದೈನಂದಿನ ಜೀವನದ ಭಾಗವಾಗಬೇಕು. ನಿತ್ಯದ ಕಾರ್ಯಚಟುವಟಿಕೆಗಳಲ್ಲಿ ಕನ್ನಡವನ್ನೇ ಬಳಸುವ ಮೂಲಕ ಮಾತೃ ಭಾಷೆಯ ಸವಿಯನ್ನು ಅನುಭವಿಸಬೇಕು ಎಂದರು. 

ರಾಜ್ಯೋತ್ಸವ ಸಂದೇಶ ನೀಡಿದ ಬಂಟ್ವಾಳ-ವಿದ್ಯಾಗಿರಿಯ ಎಸ್ ವಿ ಎಸ್ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಆಶ್ನಿ ಆರ್ ಶೆಟ್ಟಿ ಜಗತ್ತಿನ ಎಲ್ಲಾ ಭಾಷೆಗಳನ್ನು ಕಲಿಯಬೇಕು. ಅದರ ಜೊತೆಗೆ ಮಾತೃ ಭಾಷೆಯನ್ನು ನಿತ್ಯದ ಭಾಷೆಯಾಗಿ ಬಳಸುವ ಮೂಲಕ ಭಾಷಾಭಿಮಾನ ಬೆಳೆಸಬೇಕು ಎಂದು ಕರೆ ನೀಡಿದರು. ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಗೌರವ ಧ್ವಜ ವಂದನೆ ಸ್ವೀಕರಿಸಿದರು. ಬಂಟ್ವಾಳ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ವಿ ಪೂಜಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಮಾಲತಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಎಇಇ ತಾರಾನಾಥ ಸಾಲ್ಯಾನ್ ಸಹಿತ ವಿವಿಧ ಇಲಾಖಾಧಿಕಾರಿಗಳು ಭಾಗವಹಿಸಿದ್ದರು. 

ಇದೇ ವೇಳೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೌರವಕ್ಕೆ ಪಾತ್ರಳಾದ ಬೇಬಿ ಪ್ರಾಧ್ಯಾ ವೈ ಕುಲಾಲ್ ಮತ್ತು ಅಥ್ಲೆಟಿಕ್ಸ್ ನಲ್ಲಿ ವಿಶೇಷ ಸಾಧನೆಗೈದ ನಿವೃತ್ತ ಶಿಕ್ಷಕಿ ಗ್ಲಾಡಿಯಸ್ ಪಾಯಸ್ ಅವರನ್ನು ಗೌರವಿಸಲಾಯಿತು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಆಶಾ ನಾಯಕ್ ಸ್ವಾಗತಿಸಿ, ರಮಾನಂದ ನೂಜಿಪ್ಪಾಡಿ ವಂದಿಸಿದರು. ಸುರೇಖಾ ಯಳವರ ಕಾರ್ಯಕ್ರಮ ನಿರೂಪಿಸಿದರು.

ಇದಕ್ಕೂ ಮೊದಲು ಪೊಲೀಸ್, ಗೃಹರಕ್ಷಕ ದಳ, ವಿವಿಧ ಶಾಲೆಗಳ ಎನ್ ಸಿ ಸಿ, ಎಸ್ ಎಸ್ ಎಸ್, ಸ್ಕೌಟ್ಸ್, ಗೈಡ್ಸ್, ಬ್ಯಾಂಡ್, ವಾದ್ಯ ತಂಡಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಬಳಿಕ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.  

  • Blogger Comments
  • Facebook Comments

0 comments:

Post a Comment

Item Reviewed: ರಾಜ್ಯೋತ್ಸವ ಆಚರಣೆ ವೇಳೆ ತಾಲೂಕು ಮಟ್ಟದಲ್ಲಿ ಸಾಧಕರನ್ನು ಗುರುತಿಸಿ ಗೌರವಿಸುವ ಸಂಪ್ರದಾಯ ಮುಂದಿನ ವರ್ಷದಿಂದಲೇ ಬಂಟ್ವಾಳದಲ್ಲಿ ಆರಂಭಿಸಲು ಕ್ರಮ ಕೈಗೊಳ್ಳಿ : ಕಸಾಪ ಅಧ್ಯಕ್ಷ ವಿಶ್ವನಾಥ್ ಆಗ್ರಹ Rating: 5 Reviewed By: karavali Times
Scroll to Top