ಉಳ್ಳಾಲ ಕ್ಷೇತ್ರದ ಕೆರೆಗಳ ಅಭಿವೃದ್ದಿಗೆ ಚುರುಕು : ಮುಡಾ ಅಧ್ಯಕ್ಷರಿಂದ ವಿವಿಧ ಸ್ಥಳಗಳ ಪರಿಶೀಲನೆ - Karavali Times ಉಳ್ಳಾಲ ಕ್ಷೇತ್ರದ ಕೆರೆಗಳ ಅಭಿವೃದ್ದಿಗೆ ಚುರುಕು : ಮುಡಾ ಅಧ್ಯಕ್ಷರಿಂದ ವಿವಿಧ ಸ್ಥಳಗಳ ಪರಿಶೀಲನೆ - Karavali Times

728x90

11 October 2026

ಉಳ್ಳಾಲ ಕ್ಷೇತ್ರದ ಕೆರೆಗಳ ಅಭಿವೃದ್ದಿಗೆ ಚುರುಕು : ಮುಡಾ ಅಧ್ಯಕ್ಷರಿಂದ ವಿವಿಧ ಸ್ಥಳಗಳ ಪರಿಶೀಲನೆ

ಮಂಗಳೂರು, ಅಕ್ಟೋಬರ್ 11, 2026 (ಕರಾವಳಿ ಟೈಮ್ಸ್) : ಉಳ್ಳಾಲ ವಿಧಾನಸಭಾ ಕ್ಷೇತ್ರದ ಕುಂಪಲ, ಅಂಬ್ಲಮೊಗರು ಹಾಗೂ ಹರೇಕಳ ಪ್ರದೇಶಗಳಲ್ಲಿನ ವಿವಿಧ ಕೆರೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವ ಹಿನ್ನೆಲೆಯಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅವರು ಸ್ಥಳ ಪರಿಶೀಲನೆ ನಡೆಸಿದರು.

ಪ್ರದೇಶದ ಕೆರೆಗಳ ಅಭಿವೃದ್ಧಿ ಹಾಗೂ ಅವುಗಳ ಸಮರ್ಪಕ ನಿರ್ವಹಣೆಗೆ ಸಂಬಂಧಿಸಿದಂತೆ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಅಭಿವೃದ್ಧಿ ಕಾರ್ಯಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅಗತ್ಯ ಮಾಹಿತಿಗಳನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಮುಡಾ ಅಧಿಕಾರಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಉಳ್ಳಾಲ ಕ್ಷೇತ್ರದ ಕೆರೆಗಳ ಅಭಿವೃದ್ದಿಗೆ ಚುರುಕು : ಮುಡಾ ಅಧ್ಯಕ್ಷರಿಂದ ವಿವಿಧ ಸ್ಥಳಗಳ ಪರಿಶೀಲನೆ Rating: 5 Reviewed By: karavali Times
Scroll to Top