ಅಮ್ಟಾಡಿ : ಕೋಳಿ ಅಂಕಕ್ಕೆ ಪೊಲೀಸ್ ದಾಳಿ, ಓರ್ವ ವಶಕ್ಕೆ - Karavali Times ಅಮ್ಟಾಡಿ : ಕೋಳಿ ಅಂಕಕ್ಕೆ ಪೊಲೀಸ್ ದಾಳಿ, ಓರ್ವ ವಶಕ್ಕೆ - Karavali Times

728x90

18 October 2026

ಅಮ್ಟಾಡಿ : ಕೋಳಿ ಅಂಕಕ್ಕೆ ಪೊಲೀಸ್ ದಾಳಿ, ಓರ್ವ ವಶಕ್ಕೆ

ಬಂಟ್ವಾಳ, ಅಕ್ಟೋಬರ್ 19, 2026 (ಕರಾವಳಿ ಟೈಮ್ಸ್) : ತಾಲೂಕಿನ ಅಮ್ಟಾಡಿ ಗ್ರಾಮದ ಎರ್ಮುಡೆ ಎಂಬಲ್ಲಿ ಅ 18 ರಂದು ಸಂಜೆ ನಡೆಯುತ್ತಿದ್ದ ಅಕ್ರಮ ಕೋಳಿ ಅಂಕದ ಸ್ಥಳಕ್ಕೆ ಬಂಟ್ವಾಳ ನಗರ ಪೊಲೀಸರು ದಾಳಿ ನಡೆಸಿದ್ದು, ಓರ್ವನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿತನನ್ನು ಬಿ ಮೂಡ ಗ್ರಾಮದ ಗಣೇಶ್ (33) ಎಂದು ಹೆಸರಿಸಲಾಗಿದೆ. ಅ 18 ರಂದು ಸಂಜೆ ವೇಳೆ ಬಂಟ್ವಾಳ ನಗರ ಪೊಲೀಸ್ ಠಾಣಾ ಪಿಎಸ್ಸೈ ಸಂದೀಪ್ ಕುಮಾರ್ ಶೆಟ್ಟಿ ಅವರ ನೇತೃತ್ವದ ಪೊಲೀಸರು ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಸಿದ್ದಾರೆ.

 ಪೊಲೀಸರ ದಾಳಿ ವೇದ ದಾಳಿ ಇತರ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳದಲ್ಲಿದ್ದ  12 ಅಂಕದ ಕೋಳಿಗಳನ್ನು, ಕೋಳಿ ಅಂಕಕ್ಕೆ ಬಳಸುವ ಕತ್ತಿ ಹಾಗೂ 1100/- ರೂಪಾಯಿ ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಅಮ್ಟಾಡಿ : ಕೋಳಿ ಅಂಕಕ್ಕೆ ಪೊಲೀಸ್ ದಾಳಿ, ಓರ್ವ ವಶಕ್ಕೆ Rating: 5 Reviewed By: lk
Scroll to Top