ಸಿದ್ದಕಟ್ಟೆ : ವ್ಯಕ್ತಿಗೆ ಆರು ಮಂದಿಯ ತಂಡದಿಂದ ಚೂರಿ ಇರಿತ, ಗಾಯಾಳು ಆಸ್ಪತ್ರೆಗೆ ದಾಖಲು - Karavali Times ಸಿದ್ದಕಟ್ಟೆ : ವ್ಯಕ್ತಿಗೆ ಆರು ಮಂದಿಯ ತಂಡದಿಂದ ಚೂರಿ ಇರಿತ, ಗಾಯಾಳು ಆಸ್ಪತ್ರೆಗೆ ದಾಖಲು - Karavali Times

728x90

19 October 2026

ಸಿದ್ದಕಟ್ಟೆ : ವ್ಯಕ್ತಿಗೆ ಆರು ಮಂದಿಯ ತಂಡದಿಂದ ಚೂರಿ ಇರಿತ, ಗಾಯಾಳು ಆಸ್ಪತ್ರೆಗೆ ದಾಖಲು

ಬಂಟ್ವಾಳ, ಅಕ್ಟೋಬರ್ 19, 2026 (ಕರಾವಳಿ ಟೈಮ್ಸ್) : ಸಂಗಬೆಟ್ಟು ಗ್ರಾಮದ ಸಿದ್ದಕಟ್ಟೆ ಜಂಕ್ಷನ್ನಿನಲ್ಲಿ ವ್ಯಕ್ತಿಯೋರ್ವರನ್ನು ತಮ್ಮ ಬಳಿಗೆ ಕರೆದು ಆರು ಮಂದಿಯ ತಂಡ ಚೂರಿಯಿಂದ ಇರಿದ ಘಟನೆ ಅ 18 ರಂದು ರಾತ್ರಿ ವೇಳೆ ನಡೆದಿದೆ. 

ಚೂರಿ ಇರಿತದಿಂದ ಗಾಯಗೊಂಡವರನ್ನು ಸಂಗಬೆಟಟ್ಟು ನಿವಾಸಿ ಪ್ರಕಾಶ್ ಎಂದು ಹೆಸರಿಸಲಾಗಿದ್ದು, ಆರೋಪಿಗಳನ್ನು ಅಕ್ಷಿತ್, ಕಿರಣ್ ಅಲಿಯಾಸ್ ರಂಜು, ಅಜಿತ್, ಧನುಷ್, ಸಂತೋಷ್ ಹಾಗೂ ರಾಜು ಎಂದು ಗುರುತಿಸಲಾಗಿದೆ. 

ಈ ಬಗ್ಗೆ ಗಾಯಾಳು ಪ್ರಕಾಶ್ ಅವರ ಸಹೋದರ ಗಣೇಶ್ ಅವರು ಪೊಲೀಸರಿಗೆ ದೂರು ನೀಡಿದ್ದು, ಅ 18 ರಂದು ರಾತ್ರಿ ವೇಳೆ ಇವರು ಸಹೋದರ ಪ್ರಕಾಶ್ ಮತ್ತು ಇತರ 5 ಜನ ಗೆಳೆಯರೊಂದಿಗೆ ಸಿದ್ದಕಟ್ಟೆ ಜಂಕ್ಷನ್ನಿನಲ್ಲಿ ನಿಂತಿದ್ದಾಗ, ಅಲ್ಲಿಗೆ ಬಂದ ಆರೋಪಿಗಳು ಸ್ವಲ್ಪ ಮುಂದೆ ತಾವು ಬಂದಿದ್ದ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ಪ್ರಕಾಶ್ ಅವರನ್ನು ಕರೆದಿರುತ್ತಾರೆ. ಆರೋಪಿಗಳಿದ್ದಲ್ಲಿಗೆ ಪ್ರಕಾಶ್ ಅವರು ತೆರಳಿದಾಗ, ಆರೋಪಿಗಳು ಸೇರಿ ಪ್ರಕಾಶ್ ಅವರಿಗೆ ಹಲ್ಲೆ ನಡೆಸಿದ್ದಾರೆ. ಆರೋಪಿಗಳ ಪೈಕಿ ಅಕ್ಷಿತ್ ಎಂಬಾತ ಚೂರಿಯಿಂದ ಪ್ರಕಾಶ್ ಅವರಿಗೆ ಹಲವು ಬಾರಿ ಚುಚ್ಚಿದ್ದಾನೆ. ಗಾಯಗೊಂಡ ಪ್ರಕಾಶ್ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ನೀಡಿದ ದೂರಿನಂತೆ ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಸಿದ್ದಕಟ್ಟೆ : ವ್ಯಕ್ತಿಗೆ ಆರು ಮಂದಿಯ ತಂಡದಿಂದ ಚೂರಿ ಇರಿತ, ಗಾಯಾಳು ಆಸ್ಪತ್ರೆಗೆ ದಾಖಲು Rating: 5 Reviewed By: karavali Times
Scroll to Top