ಬಂಟ್ವಾಳ, ಅಕ್ಟೋಬರ್ 04, 2026 (ಕರಾವಳಿ ಟೈಮ್ಸ್) : ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕರ್ನಾಟಕ ರಾಜ್ಯ ಸಮಾವೇಶವು ಬಿ ಸಿ ರೋಡಿನ ಅಂಬೇಡ್ಕರ್ ಭವನದಲ್ಲಿ ಅ 4 ರಂದು ನಡೆಯಿತು.
ಸಮಾವೇಶ ಉದ್ಘಾಟಿಸಿದ ಎಐಸಿಸಿಟಿಯು ರಾಜ್ಯಾಧ್ಯಕ್ಷ ಕಾಮ್ರೇಡ್ ಪಿ ಪಿ ಅಪ್ಪಣ್ಣ ಮಾತನಾಡಿ, ಕಟ್ಟಡ ಕಾರ್ಮಿಕರು ಇಂದು ರಾಜ್ಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತರಾಗಿದ್ದಾರೆ, ಅವರಿಗೆ ಸಿಗಬೇಕಾದ ಸೌಲಭ್ಯಗಳು ಸಮರ್ಪಕವಾಗಿ ಸಿಗುತ್ತಿಲ್ಲ, ಕಾರ್ಮಿಕರಿಗೆ ಕಿಟ್ ಗಳನ್ನು ನೀಡುವ ಮೂಲಕ ಕಾರ್ಮಿಕರನ್ನು ಗುಲಾಮರನ್ನಾಗಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಎಐಸಿಸಿಟಿಯು ಅಡಿಯಲ್ಲಿ ಕಟ್ಟಡ ಕಾರ್ಮಿಕರು ಸಂಘಟಿತರಾಗಿ ಹೋರಾಟ ನಡೆಸುವ ಮೂಲಕ ಸೌಲಭ್ಯಗಳನ್ನು ಪಡೆಯಬೇಕು ಹಾಗೂ ರಾಜಕೀಯ ಪ್ರಜ್ಞೆಯನ್ನು ಬೆಳೆಸಿಕೊಳ್ಳುವ ಮೂಲಕ ದೇಶದ ರಾಜಕೀಯವನ್ನು ನಿರ್ಧರಿಸಲು ಕಾರ್ಮಿಕರಿಂದ ಸಾದ್ಯವಾಗಬೇಕು. ಇಂದು ನಮ್ಮನ್ನಾಳುವ ಸರಕಾರಗಳು ಕಾರ್ಮಿಕ ವಿರೋಧಿಯಾಗಿದ್ದು, ಸರಕಾರಗಳ ನೀತಿಗಳ ವಿರುದ್ಧ ನಾವು ಸಂಘಟಿತ ಹೋರಾಟ ಮಾಡಬೇಕೆಂದು ಕರೆ ನೀಡಿದರು.
ಎಐಸಿಸಿಟಿಯು ಜಿಲ್ಲಾದ್ಯಕ್ಷ ರಾಮಣ್ಣ ವಿಟ್ಲ, ಜನಪರ ವೈದ್ಯ ಡಾ ಸಂದೀಪ್ ನಾಯಕ್ ಪುತ್ತೂರು, ಕರ್ನಾಟಕ ರಾಜ್ಯ ಪ್ರಗತಿಪರ ಕಟ್ಟಡ ಕಾರ್ಮಿಕರ ಸಂಘದ ರಾಜ್ಯ ಕಾರ್ಯದರ್ಶಿ ಪ್ರಭು ಕೋಲಾರ, ಎಐಸಿಸಿಟಿಯು ರಾಜ್ಯ ಸಮಿತಿ ಸದಸ್ಯರಾದ ಅಝೀಝ್ ಜಾಗೀರ್ದಾರ್, ಚೆನ್ನಯ್ಯ, ಎಐಸಿಸಿಟಿಯು ರಾಜ್ಯ ಗೌರವಾಧ್ಯಕ್ಷ ಮೋಹನ್ ಕೆ ಇ, ಅನ್ಸಾರ್ ಬಜಾಲ್, ಬೀಡಿ ಕಾರ್ಮಿಕರ ಸಂಘದ ಮುಖಂಡರಾದ ಸರಸ್ವತಿ ಮಾಣಿ, ಆರ್ ವೈ ಎ ರಾಜ್ಯ ಸಹ ಸಂಚಾಲಕರಾದ ಲುಕ್ಮಾನ್ ಕೆ ಎಂ, ಸುರೇಂದ್ರ ಎಸ್ ಎಂ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು.
ಇದೇ ವೇಳೆ ನೂತನ ರಾಜ್ಯ ಸಮಿತಿ ರಚಿಸಲಾಯಿತು. ರಾಜ್ಯಾದ್ಯಕ್ಷರಾಗಿ ಪಿ ಪಿ ಅಪ್ಪಣ್ಣ, ಪ್ರಧಾನ ಕಾರ್ಯದರ್ಶಿಯಾಗಿ ರಾಮಣ್ಣ ವಿಟ್ಲ, ಕೋಶಾಧಿಕಾರಿಯಾಗಿ ಚನ್ನಯ್ಯ, ಉಪಾಧ್ಯಕ್ಷರಾಗಿ ವಿಜಯ್ ದೊರೆರಾಜ್ ಕೊಪ್ಪಳ, ಮೆಹಬೂಬ್ ಸಾಬ್ ದಾರವಾಡ, ಮಕ್ತಾಬ್ ಹುಸೇನ್, ಸಂಜೀವ ಬೆಳ್ತಂಗಡಿ, ಜೊತೆ ಕಾರ್ಯದರ್ಶಿಗಳಾಗಿ ಪ್ರಭು ಕೋಲಾರ, ಅಝೀಜ್ ಜಾಗಿರ್ದಾರ್ ರಾಯಚೂರು, ಸುರೇಂಧರ ಎಸ್ ಎಂ, ರಝಾಕ್ ಸಾಬ್, ಶೌಕತ್ ಆಲಿ ಖಾನ್, ಆಸೀಪ್ ಮಂಗಳೂರು ಅವರು ಆಯ್ಕೆಯಾದರು.























0 comments:
Post a Comment