ಸಚಿವ ಖಾದರ್ ಮಧ್ಯಸ್ಥಿಕೆಯಲ್ಲಿ ಕಟ್ಟುನಿಟ್ಟಿನ ಸೂಚನೆ ಹಿನ್ನಲೆ : ದುರಂತದಲ್ಲಿ ಬಲಿಯಾದ ಕಾರ್ಮಿಕಗೆ 1.20 ಕೋಟಿ ಪರಿಹಾರ ಘೋಷಿಸಿದ ಎಂ.ಆರ್.ಪಿ.ಎಲ್. - Karavali Times ಸಚಿವ ಖಾದರ್ ಮಧ್ಯಸ್ಥಿಕೆಯಲ್ಲಿ ಕಟ್ಟುನಿಟ್ಟಿನ ಸೂಚನೆ ಹಿನ್ನಲೆ : ದುರಂತದಲ್ಲಿ ಬಲಿಯಾದ ಕಾರ್ಮಿಕಗೆ 1.20 ಕೋಟಿ ಪರಿಹಾರ ಘೋಷಿಸಿದ ಎಂ.ಆರ್.ಪಿ.ಎಲ್. - Karavali Times

728x90

1 October 2026

ಸಚಿವ ಖಾದರ್ ಮಧ್ಯಸ್ಥಿಕೆಯಲ್ಲಿ ಕಟ್ಟುನಿಟ್ಟಿನ ಸೂಚನೆ ಹಿನ್ನಲೆ : ದುರಂತದಲ್ಲಿ ಬಲಿಯಾದ ಕಾರ್ಮಿಕಗೆ 1.20 ಕೋಟಿ ಪರಿಹಾರ ಘೋಷಿಸಿದ ಎಂ.ಆರ್.ಪಿ.ಎಲ್.

 ಮೃತರ ಕುಟುಂಬದ ನೋವಿಗೆ ಪರಿಹಾರ ಸಮವಾಗದು, ಆದರೆ ಕುಟುಂಬದ ಭವಿಷ್ಯ ಅತಂತ್ರವಾಗಬಾರದು ಎಂಬುದೇ ಆಶಯ : ಸಚಿವ ಖಾದರ್ 


ಮಂಗಳೂರು, ಅಕ್ಟೋಬರ್ 01, 2026 (ಕರಾವಳಿ ಟೈಮ್ಸ್) : ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‍ಪಿಎಲ್) ಘಟಕದಲ್ಲಿ ಸಂಭವಿಸಿದ ಅವಘಡದಲ್ಲಿ ಮೃತಪಟ್ಟ ನೌಕರನ ಕುಟುಂಬಕ್ಕೆ ಸಂಸ್ಥೆಯ ಆಡಳಿತ ಮಂಡಳಿ .20 ಕೋಟಿ ರೂಪಾಯಿ ಪರಿಹಾರ ಘೋಷಿಸಿದೆ. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರ ಮಧ್ಯಸ್ಥಿಕೆಯಿಂದ ಈ ಪರಿಹಾರ ದೊರೆತಿದೆ.

ನಿನ್ನೆ ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಕೊಳ್ಳೇಗಾಲ ಪ್ರವಾಸದಿಂದ ಮಂಗಳೂರಿಗೆ ಧಾವಿಸಿದ ಸಚಿವರು, ಜಿಲ್ಲಾಧಿಕಾರಿಗಳೊಂದಿಗೆ ಎಂಆರ್‍ಪಿಎಲ್ ಘಟಕಕ್ಕೆ ಭೇಟಿ ನೀಡಿ ಘಟನಾ ಸ್ಥಳ ಪರಿಶೀಲಿಸಿದರು. ಬಳಿಕ ಸಂಸ್ಥೆಯ ಉನ್ನತಾಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ, ಸಂತ್ರಸ್ತ ಕುಟುಂಬಕ್ಕೆ ಗರಿಷ್ಠ ಮೊತ್ತದ ಪರಿಹಾರ ಹಾಗೂ ಮೃತರ ಸಹೋದರನಿಗೆ ಖಾಯಂ ಉದ್ಯೋಗ ನೀಡಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. 

ಸಚಿವರ ಸೂಚನೆಗೆ ತಕ್ಷಣ ಸ್ಪಂದಿಸಿರುವ ಎಂಆರ್‍ಪಿಎಲ್, ಪರಿಹಾರ ಮೊತ್ತ ಘೋಷಿಸಿರುವುದರ ಜೊತೆಗೆ ಕುಟುಂಬದ ಸದಸ್ಯರಿಗೆ ಖಾಯಂ ಉದ್ಯೋಗ ನೀಡುವ ಪ್ರಸ್ತಾವನೆಯನ್ನು ಪರಿಶೀಲನೆಗೆ ಕೈಗೆತ್ತಿಕೊಂಡಿದೆ.

“ಮೃತರ ಕುಟುಂಬದ ನೋವಿಗೆ ಯಾವುದೇ ಪರಿಹಾರ ಸಮನಾಗದು. ಆದರೆ ಆ ಕುಟುಂಬದ ಭವಿಷ್ಯ ಅತಂತ್ರವಾಗಬಾರದು ಎಂಬುದು ನಮ್ಮ ಆಶಯ. ಖಾಯಂ ಉದ್ಯೋಗದ ಭರವಸೆಯೂ ಶೀಘ್ರದಲ್ಲೇ ಈಡೇರುವಂತೆ ನಿರಂತರವಾಗಿ ನಿಗಾ ವಹಿಸಲಾಗುವುದು ಎಂದು ಖಾದರ್ ಇದೇ ವೇಳೆ ಹೇಳಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಸಚಿವ ಖಾದರ್ ಮಧ್ಯಸ್ಥಿಕೆಯಲ್ಲಿ ಕಟ್ಟುನಿಟ್ಟಿನ ಸೂಚನೆ ಹಿನ್ನಲೆ : ದುರಂತದಲ್ಲಿ ಬಲಿಯಾದ ಕಾರ್ಮಿಕಗೆ 1.20 ಕೋಟಿ ಪರಿಹಾರ ಘೋಷಿಸಿದ ಎಂ.ಆರ್.ಪಿ.ಎಲ್. Rating: 5 Reviewed By: karavali Times
Scroll to Top