ಮಂಗಳೂರು, ಅಕ್ಟೋಬರ್ 01, 2026 (ಕರಾವಳಿ ಟೈಮ್ಸ್) : ಮಂಗಳೂರು ನಗರದ ಬರ್ಕೆ ಪೆÇಲೀಸ್ ಠಾಣಾ ವ್ಯಾಪ್ತಿಯ ಮಂಗಳೂರು ಕಾರಾಗೃಹದಲ್ಲಿ 2015 ರ ನವೆಂಬರ್ 2 ರಂದು ನಡೆದ ಮಾಡೂರು ಯುಸೂಫ್ ಎಂಬವನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಸದ್ರಿ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳಾದ ಕಾಟಿಪಳ್ಳ-ಸೂರಿಂಜೆ ಪೂಪಾಡಿಕಲ್ಲು ನಿವಾಸಿ ರಘುನಾಥ್ ಸನಿಲ್ ಎಂಬವರ ಪುತ್ರ ಲಿತೇಶ್ ಪೂಜಾರಿ ಅಲಿಯಾಸ್ ಲಿತ್ತು, ಸುರತ್ಕಲ್-ವಿಜಯನಗರ ನಿವಾಸಿ ತಿಮ್ಮಪ್ಪ ಪೂಜಾರಿ ಎಂಬವರ ಪುತ್ರ ಶೋಭರಾಜ್ ಅಲಿಯಾಸ್ ಶೋಭಿ, ಕಾಟಿಪಳ್ಳ-ಶಿಬರೂರು ರಾಜೀವ ನಗರ ವೈಷ್ಣವಿ ನಿಲಯ ನಿವಾಸಿ ಭಾಸ್ಕರ ಎಂಬವರ ಪುತ್ರ ಯುವರಾಜ್, ಉಳಾಯಿಬೆಟ್ಟು ವಿಶ್ವನಾಥ ಮಹಾಗಣಪತಿ ದೇವಸ್ಥಾನ ಹತ್ತಿರದ ಶಾಲೆ ಮಜಲ್ ಕಂಪೌಂಡ್ ನಿವಾಸಿ ನಾರಾಯಣ ಪೂಜಾರಿ ಎಂಬವರ ಪುತ್ರ ಪ್ರದೀಪ್ ಹಾಗೂ ಸುಳ್ಯ ತಾಲೂಕು, ಬಾಳುಗೋಡು ಗ್ರಾಮದ ಬೆಟ್ಟುಮುಖಿ ಮನೆ ನಿವಾಸಿ ದಿವಂಗತ ಶೇಷಪ್ಪ ಗೌಡ ಅವರ ಪುತ್ರ ಉಮೇಶ್ ಕೊಂಬಾರ್ ಅಲಿಯಾಸ್ ಉಮೇಶ್ ಕುಂಬಾರ ಎಂಬವರಿಗೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜಗದೀಶ್ ವಿ ಎನ್ ಅವರು ಪ್ರಕರಣದಲ್ಲಿ ವಿಚಾರಣೆ ಪೂರ್ಣಗೊಳಿಸಿ, ಅಕ್ಟೋಬರ್ 1 ರಂದು ಜೀವಾವಧಿ ಶಿಕ್ಷೆ ಹಾಗೂ 76 ಸಾವಿರ ರೂಪಾಯಿ ದಂಡ ವಿಧಿಸಿ ಶಿಕ್ಷೆ ಪ್ರಕಟಿಸಿದ್ದಾರೆ.
ಸದ್ರಿ ಪ್ರಕರಣದಲ್ಲಿ ವಿಶೇಷ ಸರಕಾರಿ ಅಭಿಯೋಜಕ ಬಿ. ಮೋಹನ್ ಕುಮಾರ್ ಅವರು ಸರಕಾರದ ಪರವಾಗಿ ವಾದಿಸಿರುತ್ತಾರೆ. ಸದ್ರಿ ಪ್ರಕರಣದ ತನಿಖೆಯನ್ನು ಅಂದಿನ ಮಂಗಳೂರು ಕೇಂದ್ರ ಉಪವಿಭಾಗ ಸಹಾಯಕ ಪೆÇಲೀಸ್ ಆಯುಕ್ತರಾಗಿದ್ದ ತಿಲಕ್ ಚಂದ್ರ ಅವರು ನಡೆಸಿ ಆರೋಪಿಗಳ ವಿರುದ್ದ ದೋಷಾರೋಪಣ ಪತ್ರ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

















0 comments:
Post a Comment