ಮಂಗಳೂರು, ಅಕ್ಟೋಬರ್ 22, 2026 (ಕರಾವಳಿ ಟೈಮ್ಸ್) : ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಅಧಿನಿಯಮದಂತೆ ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜನೆಗೊಳಪಟ್ಟಿರುವ ಎಲ್ಲಾ ಕಾಲೇಜು/ ವಿದ್ಯಾ ಸಂಸ್ಥೆಗಳಿಂದ ಶೈಕ್ಷಣಿಕ ವರ್ಷ 2027-28ನೇ ಸಾಲಿಗೆ ಸಂಯೋಜಿತ ಕಾಲೇಜುಗಳಿಗೆ ಹೊಸ ವ್ಯಾಸಂಗ ಕ್ರಮ ಮತ್ತು ಹೊಸ ವಿಷಯಗಳು/ ಮುಂದುವರಿಕೆ/ ವಿಸ್ತರಣಾ ಸಂಯೋಜನೆ/ ವಿದ್ಯಾರ್ಥಿ ಪ್ರಮಾಣ ಹೆಚ್ಚಳ/ ಕಾಲೇಜಿನ ಹೆಸರು ಬದಲಾವಣೆ/ ಮ್ಯಾನೇಜ್ ಮೆಂಟ್ ಬದಲಾವಣೆ ಮತ್ತು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿರುವ ಆಸಕ್ತ ವಿದ್ಯಾ ಸಂಸ್ಥೆಗಳಿಂದ ಹೊಸ ಸಂಯೋಜನೆ ನೀಡುವ ಬಗ್ಗೆ ಅರ್ಜಿ ಆಹ್ವಾನಿಸಲಾಗಿದೆ.
ಯುಸಿಸಿಎಂಎಸ್ ಪೋರ್ಟಲ್ www.uucms.karnataka.gov.in ಮುಖಾಂತರ ಅರ್ಜಿ ಶುಲ್ಕ 3 ಸಾವಿರ ರೂಪಾಯಿ ಸಹಿತ ಸಂಯೋಜನಾ ಶುಲ್ಕವನ್ನು ಪಾವತಿಸಿ, ನವೆಂಬರ್ 21ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿಯ ಒಂದು ಪ್ರತಿಯನ್ನು ಕುಲಸಚಿವರ ಕಚೇರಿಗೆ ಸಲ್ಲಿಸಲು ಸೂಚಿಸಲಾಗಿದೆ.
ಹೆಚ್ಚಿನ ಮಾಹಿತಿಗೆ ವಿಶ್ವವಿದ್ಯಾನಿಲಯದ ವೆಬ್ ಸೈಟ್ www.mangaloreuniversity.ac.in ನ್ನು ವೀಕ್ಷಿಸಬಹುದು ಎಂದು ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











0 comments:
Post a Comment