ಅಡ್ಯನಡ್ಕ : ಮಟ್ಕಾ ಜೂಜಾಟ ಆಡಿಸುತ್ತಿದ್ದ ವ್ಯಕ್ತಿ ವಿಟ್ಲ ಪೊಲೀಸರ ವಶಕ್ಕೆ - Karavali Times ಅಡ್ಯನಡ್ಕ : ಮಟ್ಕಾ ಜೂಜಾಟ ಆಡಿಸುತ್ತಿದ್ದ ವ್ಯಕ್ತಿ ವಿಟ್ಲ ಪೊಲೀಸರ ವಶಕ್ಕೆ - Karavali Times

728x90

26 October 2026

ಅಡ್ಯನಡ್ಕ : ಮಟ್ಕಾ ಜೂಜಾಟ ಆಡಿಸುತ್ತಿದ್ದ ವ್ಯಕ್ತಿ ವಿಟ್ಲ ಪೊಲೀಸರ ವಶಕ್ಕೆ

ಬಂಟ್ವಾಳ, ಅಕ್ಟೋಬರ್ 26, 2026 (ಕರಾವಳಿ ಟೈಮ್ಸ್) : ಮಟ್ಕಾ ಜೂಜಾಟ ಆಡಿಸುತ್ತಿದ್ದ ವ್ಯಕ್ತಿಯನ್ನು ವಿಟ್ಲ ಪೊಲೀಸರು ಅಡ್ಯನಡ್ಕ ಎಂಬಲ್ಲಿ ಬಂಧಿಸಿದ್ದಾರೆ.  ಬಂಧಿತನನ್ನು ಕೇಪು ಗ್ರಾಮದ ನಿವಾಸಿ ಯಶೋಧರ (42) ಎಂದು ಹೆಸರಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ವಿಟ್ಲ ಠಾಣಾ ಪಿಎಸ್ಸೈ ರಾಮಕೃಷ್ಣ ಅವರ ನೇತೃತ್ವದ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಬಂಧಿತನಿಂದ ಮಟ್ಕಾ ಆಟಕ್ಕೆ ಬಳಸುವ ಚೀಟಿಗಳು, ನಗದು ಹಣ ಹಾಗೂ ಮೊಬೈಲ್ ಫೋನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಅಡ್ಯನಡ್ಕ : ಮಟ್ಕಾ ಜೂಜಾಟ ಆಡಿಸುತ್ತಿದ್ದ ವ್ಯಕ್ತಿ ವಿಟ್ಲ ಪೊಲೀಸರ ವಶಕ್ಕೆ Rating: 5 Reviewed By: karavali Times
Scroll to Top