ಮಂಗಳೂರು, ಅಕ್ಟೋಬರ್ 13, 2026 (ಕರಾವಳಿ ಟೈಮ್ಸ್) : ತಲಪಾಡಿ ಸಮೀಪದ ಕೆ.ಸಿ.ರೋಡು ನಿವಾಸಿ ಮುಹಮ್ಮದ್ (70) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಅಕ್ಟೋಬರ್ 12 ರಂದು ಸೋಮವಾರ ಮಧ್ಯರಾತ್ರಿ ವೇಳೆ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು, ನಾಲ್ವರು ಪುತ್ರಿಯರ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಇವರು ಕರಾವಳಿ ಟೈಮ್ಸ್ ಪತ್ರಿಕೆಯ ಪ್ರಧಾನ ಸಂಪಾದಕ ಪಿ.ಎಂ. ಅಶ್ರಫ್ ಪಾಣೆಮಂಗಳೂರು ಅವರ ಮಾವ (ತಾಯಿಯ ಸಹೋದರ ಹಾಗೂ ಪತ್ನಿಯ ತಂದೆ) ಆಗಿದ್ದಾರೆ.
ಮೃತರ ದಫನ ಕಾರ್ಯವು ಅಕ್ಟೋಬರ್ 13 ರಂದು ಮಂಗಳವಾರ ಬೆಳಿಗ್ಗೆ 10 ಗಂಟೆ ವೇಳೆಗೆ ಕೆ.ಸಿ.ರೋಡು ಅಲ್-ಮುಬಾರಕ್ ಜುಮಾ ಮಸೀದಿಯಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.










0 comments:
Post a Comment