ಪಂಜಿಮೊಗರು : 2019ರ ಕೊಲೆ ಪ್ರಕರಣದ ನಾಲ್ವರು ಆರೋಪಿಗಳಿಗೆ ಶಿಕ್ಷೆ ವಿಧಿಸಿ ತೀರ್ಪಿತ್ತ ನ್ಯಾಯಾಲಯ - Karavali Times ಪಂಜಿಮೊಗರು : 2019ರ ಕೊಲೆ ಪ್ರಕರಣದ ನಾಲ್ವರು ಆರೋಪಿಗಳಿಗೆ ಶಿಕ್ಷೆ ವಿಧಿಸಿ ತೀರ್ಪಿತ್ತ ನ್ಯಾಯಾಲಯ - Karavali Times

728x90

29 October 2026

ಪಂಜಿಮೊಗರು : 2019ರ ಕೊಲೆ ಪ್ರಕರಣದ ನಾಲ್ವರು ಆರೋಪಿಗಳಿಗೆ ಶಿಕ್ಷೆ ವಿಧಿಸಿ ತೀರ್ಪಿತ್ತ ನ್ಯಾಯಾಲಯ

ಮಂಗಳೂರು, ಅಕ್ಟೋಬರ್ 29, 2026 (ಕರಾವಳಿ ಟೈಮ್ಸ್) : ಪಂಜಿಮೊಗರು-ಮಾಲಾಡಿ ರಸ್ತೆಯ ಎಂ ವಿ ಶೆಟ್ಟಿ ಕಾಲೇಜ್ ಬಳಿ 2019 ರಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. 

ಶಿಕ್ಷೆಗೊಳಗಾದ ಆರೋಪಿಗಳನ್ನು ಸುನೀಲ್ ಕುಮಾರ್ ಅಲಿಯಾಸ್ ಕೌಟಿ, ಪ್ರವೀಣ್ ಪೂಜಾರಿ ಅಲಿಯಾಸ್ ಚೋಟು, ಪ್ರೀತಮ್ ಅಲಿಯಾಸ್ ಅಭಿ ಹಾಗೂ ರೋಹಿತ್ ಕುಮಾರ್ ಅಲಿಯಾಸ್ ಶೂಟರ್ ಎಂದು ಹೆಸರಿಸಲಾಗಿದೆ. 

2019 ರ ಜನವರಿ 3 ರಂದು ಪಂಜಿಮೊಗರು-ಮಾಲಾಡಿ ರಸ್ತೆಯ ಎಂ ವಿ ಶೆಟ್ಟಿ ಕಾಲೇಜ್ ಬಳಿ ಪ್ರಕರಣದ 1ನೇ ಆರೋಪಿಯಾದ ಸುನಿಲ್ ಕುಮಾರ್ ಅಲಿಯಾಸ್ ಕೌಟಿ ಎಂಬವನ ತಂಗಿಯನ್ನು ರಾಕೇಶ್ ಪ್ರೀತಿಸುತಿದ್ದನು ಎಂಬ ಕಾರಣಕ್ಕೆ  ಇತರ ಆರೋಪಿಗಳ ಜೊತೆ ಸೇರಿ ರಾಕೇಶ್ ನನ್ನು ತಲವಾರಿನಿಂದ ಕಡಿದು ಕೊಲೆ ಮಾಡಿದ್ದರು. ಆರೋಪಿಗಳ ವಿರುದ್ಧ ತನಿಖಾಧಿಕಾರಿ ಅಂದಿನ ಕಾವೂರು ಪೊಲೀಸ್ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಕೆ ಆರ್ ನಾಯ್ಕ ಅವರು ಪ್ರಕರಣದ ತನಿಖೆ ನಡೆಸಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಎಸ್ ಸಿ 105/2019 ರಲ್ಲಿ 6ನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯವು ಸುದೀರ್ಘ ವಿಚಾರಣೆ ನಡೆಸಿ 4 ಜನ ಆರೋಪಿತರನ್ನು ದೋಷಿಗಳೆಂದು ಘೋಷಿಸಿದೆ. 

1 ರಿಂದ 3ನೇ ಆರೋಪಿಗಳಿಗೆ ಕಲಂ 302, 120(ಬಿ) ಜೊತೆಗೆ 34 ಐ.ಪಿ.ಸಿಗೆ ಜೀವಾವಧಿ ಶಿಕ್ಷೆ ಜೊತೆಗೆ ತಲಾ 15 ಸಾವಿರ ರೂಪಾಯಿ ದಂಡ, ಒಂದು ವೇಳೆ ದಂಡ ಪಾವತಿಸದಿದ್ದಲ್ಲಿ 1 ವರ್ಷ ಹೆಚ್ಚಿನ ಶಿಕ್ಷೆ.

1 ರಿಂದ 4ನೇ ಆರೋಪಿಗಳಿಗೆ ಕಲಂ 201 ಜೊತೆಗೆ 34 ಐ.ಪಿ.ಸಿಗೆ 3 ವರ್ಷಗಳ ಕಾರಾವಾಸ ಜೊತೆಗೆ ತಲಾ 5 ಸಾವಿರ ರೂಪಾಯಿ ದಂಡ, ಒಂದು ವೇಳೆ ದಂಡ ಪಾವತಿಸದಿದ್ದಲ್ಲಿ 1 ತಿಂಗಳ ಹೆಚ್ಚಿನ ಶಿಕ್ಷೆ.

4ನೇ ಆರೋಪಿಗೆ ಕಲಂ 212 ಜೊತೆಗೆ 34 ಐ.ಪಿ.ಸಿಗೆ 3 ವರ್ಷಗಳ ಕಾರಾವಾಸ ಮತ್ತು 5 ಸಾವಿರ ರೂಪಾಯಿ ದಂಡ, ಒಂದು ವೇಳೆ ದಂಡ ಪಾವತಿಸದಿದ್ದಲ್ಲಿ 1 ತಿಂಗಳ ಹೆಚ್ಚಿನ ಶಿಕ್ಷೆ ಸಹಿತ ಒಟ್ಟು 70 ಸಾವಿರ ರೂಪಾಯಿ ದಂಡದಲ್ಲಿ 20 ಸಾವಿರ ರೂಪಾಯಿ ಸರ್ಕಾರಕ್ಕೆ ಮತ್ತು 50 ಸಾವಿರ ರೂಪಾಯಿ ಮೃತನ ತಂದೆಗೆ ಕೊಡಬೇಕು ಎಂಬುದಾಗಿ ಶಿಕ್ಷೆ ವಿಧಿಸಿ ನ್ಯಾಯಾಧೀಶ ರಾಜೇಶ್ ಮಾರುತಿ ಕಮಟೆ ಅವರು ತೀರ್ಪು ನೀಡಿದ್ದಾರೆ.  ಪ್ರಕರಣದಲ್ಲಿ ಸರಕಾರಿ ಅಭಿಯೋಜಕ ಮೋತಿಲಾಲ್ ಚೌಧರಿ ಅವರು ವಾದ ಮಂಡಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಪಂಜಿಮೊಗರು : 2019ರ ಕೊಲೆ ಪ್ರಕರಣದ ನಾಲ್ವರು ಆರೋಪಿಗಳಿಗೆ ಶಿಕ್ಷೆ ವಿಧಿಸಿ ತೀರ್ಪಿತ್ತ ನ್ಯಾಯಾಲಯ Rating: 5 Reviewed By: karavali Times
Scroll to Top