ಬೆಳಗಾವಿ ಮೂಲದ ಯುವತಿ ವಗ್ಗದ ಮನೆಯಲ್ಲಿ ನಿಗೂಢ ಸಾವು : ಕೊಲೆ ಆರೋಪದಲ್ಲಿ ಪತಿ ಬಂಧಿಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು - Karavali Times ಬೆಳಗಾವಿ ಮೂಲದ ಯುವತಿ ವಗ್ಗದ ಮನೆಯಲ್ಲಿ ನಿಗೂಢ ಸಾವು : ಕೊಲೆ ಆರೋಪದಲ್ಲಿ ಪತಿ ಬಂಧಿಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು - Karavali Times

728x90

23 October 2026

ಬೆಳಗಾವಿ ಮೂಲದ ಯುವತಿ ವಗ್ಗದ ಮನೆಯಲ್ಲಿ ನಿಗೂಢ ಸಾವು : ಕೊಲೆ ಆರೋಪದಲ್ಲಿ ಪತಿ ಬಂಧಿಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು

ಬಂಟ್ವಾಳ, ಅಕ್ಟೋಬರ್ 24, 2026 (ಕರಾವಳಿ ಟೈಮ್ಸ್) : ಬಂಟ್ವಾಳದ ವಗ್ಗದಲ್ಲಿ ವಾಸವಾಗಿರುವ ಬೆಳಗಾವಿ ಅಥಣಿ ಮೂಲದ ಯುವತಿ ನಿಗೂಢವಾಗಿ ಸಾವನ್ನಪ್ಪಿದ ಘಟನೆ ಅ 23 ರಂದು ಸಂಭವಿಸಿದ್ದು, ಕೊಲೆ ಆರೋಪದಲ್ಲಿ ಪತಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ ಅಥಣಿ ಮೂಲದ ಸುನಿತಾ ಮಹಾದೇವ್ ದೇಸಂಗಿ (26) ಎಂಬಾಕೆಯೇ ನಿಗೂಢವಾಗಿ ಮೃತಪಟ್ಟ ಯುವತಿಯಾಗಿದ್ದು, ಬಂಧಿತ ಪತಿಯನ್ನು ಬಾಗಲಕೋಡಿ-ಜಮಖಂಡಿ ನಿವಾಸಿ ಸಂಜೀವ್ ಕುಮಾರ್ (36) ಎಂದು ಹೆಸರಿಸಲಾಗಿದೆ. 

ಈ ಬಗ್ಗೆ ಮೃತ ಯುವತಿಯ ಸಹೋದರ ಅರುಣ್ ಮಹಾದೇವ್ ದೇಸಂಗಿ (26) ಅವರು ಪೊಲೀಸರಿಗೆ ದೂರು ನೀಡಿದ್ದು, ಇವರ ಸಹೋದರಿ ಸುನೀತಾ ಮಹಾದೇವ್ ದೇಸಂಗಿ ಎಂಬಾಕೆಯನ್ನು ಬಾಗಲಕೋಟೆ,-ಜಮಖಂಡಿ ನಿವಾಸಿ, ಆರೋಪಿ ಸಂಜೀವ ಕುಮಾರ್ ಎಂಬವರಿಗೆ ಮದುವೆ ಮಾಡಿಕೊಟ್ಟಿದ್ದು, ಸದ್ರಿ ದಂಪತಿಗಳು ಬಂಟ್ವಾಳ ಸಮೀಪದ ವಗ್ಗ ಎಂಬಲ್ಲಿ ವಾಸವಿರುವುದಾಗಿದೆ. ಸದ್ರಿ ದಂಪತಿಗಳ ನಡುವೆ ವೈವಾಹಿಕ ಕಲಹ ನಡೆಯುತ್ತಿದ್ದು, ಸಂಬಂಧಿಕರು ಸೇರಿ ರಾಜಿ ಸಂಧಾನ ಮಾಡಿರುವುದಾಗಿದೆ. ಸುನೀತಾ ಅವರು ಹೆರಿಗೆಯಾಗಿ ತವರು ಮನೆಯಲ್ಲಿದ್ದವರನ್ನು ಆರೋಪಿ ಅ 4 ರಂದು ಬಂಟ್ವಾಳದ ವಗ್ಗದಲ್ಲಿರುವ ತನ್ನ ಮನೆಗೆ ಕರೆತಂದಿದ್ದಾನೆ. ಅ 22 ರಂದು ಸುನೀತಾ ಸಹೋದರನಿಗೆ ಕರೆ ಮಾಡಿ, ಆರೋಪಿ ಗಂಡ ಕಿರುಕುಳ ನೀಡಿ ಹಲ್ಲೆ ನಡೆಸುತ್ತಿರುವುದಾಗಿ ತಿಳಿಸಿದ್ದಳು. ಈ ಮಧ್ಯೆ ಅ 23 ರಂದು ಮುಂಜಾನೆ ಆರೋಪಿ ಪತಿ ಸಂಜೀವ ಕುಮಾರ್ ಕರೆ ಮಾಡಿ ಸುನೀತಾಳಿಗೆ ಅರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಿಸುತ್ತಿರುವುದಾಗಿ ತಿಳಿಸಿದ್ದಾನೆ. 

ಈ ಸಂದರ್ಭ ಸಹೋದರ ಬಂದು ನೋಡಿದಾಗ ಸಹೋದರಿ ಸುನಿತಾ ಮೃತಪಟ್ಟಿದ್ದು, ಮೃತದೇಹವನ್ನು ನೋಡಿದಾಗ ಹಲ್ಲೆ ನಡೆಸಿದ ಗಾಯಗಳು ಹಾಗೂ ರಕ್ತ ಕಂಡುಬಂದಿರುತ್ತದೆ. ಆದ್ದರಿಂದ ಆರೋಪಿ ಪತಿ ಸಂಜೀವ ಕುಮಾರ್ ಕೌಟುಂಬಿಕ ಕಲಹದಲ್ಲಿ ಸುನಿತಾಳಿಗೆ ಅ 22 ರ ರಾತ್ರಿಯಿಂದ ಅ 23 ರ ಮುಂಜಾನೆ ಸಮಯದಲ್ಲಿ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿರುವುದಾಗಿ ಸಹೋದರ ನೀಡಿದ ದೂರಿನಂತೆ ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. 

ಆರೋಪಿ ಪತಿ ಸಂಜೀವ ಕುಮಾರ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ತಿಳಿಸಿದ್ದಾರೆ.

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ಬೆಳಗಾವಿ ಮೂಲದ ಯುವತಿ ವಗ್ಗದ ಮನೆಯಲ್ಲಿ ನಿಗೂಢ ಸಾವು : ಕೊಲೆ ಆರೋಪದಲ್ಲಿ ಪತಿ ಬಂಧಿಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು Rating: 5 Reviewed By: karavali Times
Scroll to Top