ಪಡಕುಂಜ-ಮಾವೆ ರಸ್ತೆಯ ತಡೆಗೋಡೆ ನಿರ್ಮಾಣಕ್ಕೆ 75 ಲಕ್ಷ ಅನುದಾನ ಮಂಜೂರು : ಸಂಸದರಿಂದ ಶಿಲಾನ್ಯಾಸ - Karavali Times ಪಡಕುಂಜ-ಮಾವೆ ರಸ್ತೆಯ ತಡೆಗೋಡೆ ನಿರ್ಮಾಣಕ್ಕೆ 75 ಲಕ್ಷ ಅನುದಾನ ಮಂಜೂರು : ಸಂಸದರಿಂದ ಶಿಲಾನ್ಯಾಸ - Karavali Times

728x90

17 October 2026

ಪಡಕುಂಜ-ಮಾವೆ ರಸ್ತೆಯ ತಡೆಗೋಡೆ ನಿರ್ಮಾಣಕ್ಕೆ 75 ಲಕ್ಷ ಅನುದಾನ ಮಂಜೂರು : ಸಂಸದರಿಂದ ಶಿಲಾನ್ಯಾಸ

 ಬಂಟ್ವಾಳ, ಅಕ್ಟೋಬರ್ 17, 2026 (ಕರಾವಳಿ ಟೈಮ್ಸ್) : ಸಾಲೆತ್ತೂರು ಗ್ರಾಮದ ಪಡಕುಂಜ-ಮಾವೆ ರಸ್ತೆಯಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿಗೆ 75 ಲಕ್ಷ ರೂಪಾಯಿ ಅನುದಾನ ಮೀಸಲಿಡಲಾಗಿದ್ದು, ಕಾಮಗಾರಿಗೆ ಸಂಸದ ಕ್ಯಾ ಬ್ರಿಜೇಶ್ ಚೌಟ ಶಿಲಾನ್ಯಾಸ ನೆರವೇರಿಸಿದರು.

ರಸ್ತೆಯ ಸುರಕ್ಷತೆ ಹಾಗೂ ಸಾರ್ವಜನಿಕರ ಸುಗಮ ಸಂಚಾರದ ದೃಷ್ಟಿಯಿಂದ ತಡೆಗೋಡೆ ನಿರ್ಮಾಣ ಕಾಮಗಾರಿ ಮಹತ್ವದ್ದಾಗಿದ್ದು, ಈ ಕಾಮಗಾರಿ ಪೂರ್ಣಗೊಂಡ ಬಳಿಕ ಸ್ಥಳೀಯರಿಗೆ ಅನುಕೂಲವಾಗಲಿದೆ. ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಅವರ ಉಪಸ್ಥಿತಿಯಲ್ಲಿ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.

ಈ ಸಂದರ್ಭ ಪ್ರಮುಖರಾದ ಮಾಧವ ಮಾವೆ, ಶಿವಪ್ರಸಾದ್ ಶೆಟ್ಟಿ, ಶಶಿಧರ್ ಶೆಟ್ಟಿ ಕುಳಾಲು, ಕೇಶವ ರಾವ್ ನೂಜಿಪಾಡಿ, ರವೀಶ್ ಶೆಟ್ಟಿ ಕರ್ಕಳ, ದೇವಿದಾಸ ಶೆಟ್ಟಿ ಪಾಲ್ತಾಜೆ, ಹರೀಶ್ ಟೈಲರ್ ಮಂಕುಡೆ, ವಿದ್ಯೇಶ್ ರೈ, ಲೋಹಿತ್ ಅಗರಿ, ಆನಂದ ಪೂಜಾರಿ ಮಾವೆ, ನಾಗರಾಜ್ ಆಳ್ವ, ಸುನಿತಾ ರೈ, ಅಭಿಷೇಕ್ ರೈ, ಪುರುಷೋತ್ತಮ ಪೂಜಾರಿ, ಪ್ರೇಮಲತಾ, ಜಯರಾಮ ಪೂಜಾರಿ, ಪದ್ಮನಾಭ ಶೆಟ್ಟಿ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಯಿಶಾ ಮತ್ತಿತರರು ಉಪಸ್ಥಿತರಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಪಡಕುಂಜ-ಮಾವೆ ರಸ್ತೆಯ ತಡೆಗೋಡೆ ನಿರ್ಮಾಣಕ್ಕೆ 75 ಲಕ್ಷ ಅನುದಾನ ಮಂಜೂರು : ಸಂಸದರಿಂದ ಶಿಲಾನ್ಯಾಸ Rating: 5 Reviewed By: karavali Times
Scroll to Top