ಮಂಗಳೂರು, ಅಕ್ಟೋಬರ್ 17, 2026 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕಿನಾದ್ಯಂತ ಶುಕ್ರವಾರ ರಾತ್ರಿ ಸಿಡಿಲು-ಮಿಂಚು ಸಹಿತ ಭಾರೀ ಮಳೆಯಾಗಿದ್ದು, ಕೆಲವೆಡೆ ಸಿಡಿಲು ಬಡಿದು ಹಾನಿ ಸಂಭವಿಸಿದೆ.
ಮೂಡಪಡುಕೋಡಿ ಗ್ರಾಮದ ಸೇವಾ ಎಂಬಲ್ಲಿನ ನಿವಾಸಿ ಜೋಹರ ಕೋಂ ಅಬ್ದುಲ್ ಜಬ್ಬಾರ್ ಅವರ ವಾಸ್ತವ್ಯದ ಮನೆಗೆ ಸಿಡಿಲಿನಿಂದ ಭಾಗಶಃ ಹಾನಿ ಸಂಭವಿಸಿದೆ. ಬಡಗಬೆಳ್ಳೂರು ಗ್ರಾಮದ ಪಲ್ಲಿಪಾಡಿ ನಿವಾಸಿ ಅಬ್ದುಲ್ ಹಮೀದ್ ಅವರ ಮನೆಗೆ ಶುಕ್ರವಾರ ರಾತ್ರಿ ಸಿಡಿಲು ಬಡಿದು ಮನೆಗೆ ಮತ್ತು ವಿದ್ಯುತ್ ಉಪಕರಣಗಳಿಗೆ ಹಾನಿ ಸಂಭವಿಸಿ ನಷ್ಟ ಉಂಟಾಗಿದೆ. ಬಿಳಿಯೂರು ಗ್ರಾಮದ ಮೈರಕಟ್ಟೆ ನಿವಾಸಿ ಅಜೀಜ್ ಅವರ ವಾಸ್ತವ್ಯದ ಮನೆಗೆ ಸಿಡಿಲು ಬಡಿದು ಬಾಗಶಃ ಹಾನಿ ಸಂಭವಿಸಿದೆ.




















0 comments:
Post a Comment