ಚರ್ಚ್ ಫಾದರ್ ವಿರುದ್ದ ಲೈಂಗಿಕ ದೌರ್ಜನ್ಯದ ಆರೋಪ : ಪೋಕ್ಸೋ ಪ್ರಕರಣ ದಾಖಲು - Karavali Times ಚರ್ಚ್ ಫಾದರ್ ವಿರುದ್ದ ಲೈಂಗಿಕ ದೌರ್ಜನ್ಯದ ಆರೋಪ : ಪೋಕ್ಸೋ ಪ್ರಕರಣ ದಾಖಲು - Karavali Times

728x90

16 October 2026

ಚರ್ಚ್ ಫಾದರ್ ವಿರುದ್ದ ಲೈಂಗಿಕ ದೌರ್ಜನ್ಯದ ಆರೋಪ : ಪೋಕ್ಸೋ ಪ್ರಕರಣ ದಾಖಲು

ಬಂಟ್ವಾಳ, ಅಕ್ಟೋಬರ್ 16, 2026 (ಕರಾವಳಿ ಟೈಮ್ಸ್) : ನಗರ ವೆಲೆನ್ಸಿಯಾದಲ್ಲಿರುವ ಸೈಂಟ್ ವಿನ್ಸೆಂಟ್ ಫೆರರ್ ಚರ್ಚ್ ಧರ್ಮಗುರು ಸಿಪ್ರಿಯನ್ ಪಿಂಟೋ ವಿರುದ್ದ ಅಪ್ರಾಪ್ತ ಬಾಲಕನೋರ್ವ ಲೈಂಗಿಕ ದೌರ್ಜನ್ಯ ನಡೆಸಿದ ಬಗ್ಗೆ ಪೊಲೀಸ್ ದೂರು ನೀಡಿದ ಹಿನ್ನಲೆಯಲ್ಲಿ ಈ ಬಗ್ಗೆ ಪೋಕ್ಸೋ ಪ್ರಕರಣ ದಾಖಲಾಗಿದೆ. 

ಚರ್ಚಿಗೆ ಪ್ರಾರ್ಥನೆಗೆಂದು ತೆರಳಿದ್ದ ಬಾಲಕನನ್ನು ಕೊಠಡಿಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಬಾಲಕ ಪೋಷಕರೊಂದಿಗೆ ತೆರಳಿ ದೂರು ನೀಡಿರುವ ಹಿನ್ನಲೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕನಿಗೆ ಹಲವು ಬಾರಿ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದ್ದು, ಆಗಸ್ಟ್ 14 ರಂದು ಸಂಜೆ ಪ್ರಾರ್ಥನೆಯ ಸಮಯದಲ್ಲಿ ಧರ್ಮಗುರು ಬಾಲಕನಿಗೆ ಮತ್ತೆ ಕಿರುಕುಳ ನೀಡಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. 

ಬಾಲಕನ ಪೆÇೀಷಕರು ಈ ವಿಚಾರವನ್ನು ಬಿಷಪ್ ಗಮನಕ್ಕೆ ತಂದಿದ್ದಾರೆ. ಬಿಷಪ್ ಅವರ ಸಲಹೆಯಂತೆ ಪೆÇೀಷಕರು ಪೆÇಲೀಸರನ್ನು ಸಂಪರ್ಕಿಸಿ ಅಧಿಕೃತ ದೂರು ನೀಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಚರ್ಚ್ ಫಾದರ್ ವಿರುದ್ದ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ಚರ್ಚ್ ಫಾದರ್ ವಿರುದ್ದ ಲೈಂಗಿಕ ದೌರ್ಜನ್ಯದ ಆರೋಪ : ಪೋಕ್ಸೋ ಪ್ರಕರಣ ದಾಖಲು Rating: 5 Reviewed By: karavali Times
Scroll to Top