ಬಂಟ್ವಾಳ, ಅಕ್ಟೋಬರ್ 16, 2026 (ಕರಾವಳಿ ಟೈಮ್ಸ್) : ಎನ್.ಬಿ. ಗ್ರೂಪ್ ಪಾಣೆಮಂಗಳೂರು ಮಾಲಕತ್ವದಲ್ಲಿ ಶುಭ ಸಮಾರಂಭಗಳಿಗೆ ಯೋಗ್ಯ ರೀತಿಯಲ್ಲಿ ಬಂಟ್ವಾಳದ ಬಸ್ತಿಪಡ್ಪುವಿನಲ್ಲಿ ಸುಸಜ್ಜಿತ ಹಾಗೂ ಐಶಾರಾಮಿಯಾಗಿ ನಿರ್ಮಾಣಗೊಂಡಿರುವ ‘ಬಂಟ್ವಾಳ ಗಾರ್ಡನ್’ ಸಭಾಂಗಣ ಅಕ್ಟೋಬರ್ 17 ರಂದು ಸಂಜೆ 4 ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ.
ಉದ್ಘಾಟನಾ ಸಮಾರಂಭದಲ್ಲಿ ರಾಜ್ಯ ಆರೋಗ್ಯ, ಕುಟುಂಬ ಕಲ್ಯಾಣ, ಅಲ್ಪಸಂಖ್ಯಾತ ಇಲಾಖಾ, ಹಜ್ ಹಾಗೂ ವಕ್ಫ್ ಇಲಾಖಾ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಹಾಜಿ ಡಾ ಯು ಟಿ ಖಾದರ್, ಮಾಜಿ ಸಚಿವ ಬಿ ರಮಾನಾಥ ರೈ, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾರ ಯು ರಾಜೇಶ್ ನಾಯಕ್, ಎ ಕೆ ಅಶ್ರಫ್, ಐವನ್ ಡಿಸೋಜ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಆರ್ ಪೂಜಾರಿ ಸಹಿತ ಹಲವು ಮಂದಿ ಗಣ್ಯರು ಭಾಗವಹಿಸಲಿದ್ದಾರೆ.
ಮದುವೆ ಸಹಿತ ಶುಭ ಸಮಾರಂಭಗಳು, ಪಾರ್ಟಿ, ಈವೆಂಟ್ಸ್ ಸಹಿತ ಎಲ್ಲಾ ರೀತಿಯ ಸಂಭ್ರಮಗಳಿಗೆ ಹೊಂದಿಕೊಳ್ಳುವಂತೆ ಸರ್ವ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ಸಭಾಂಗಣದಲ್ಲಿ ಹೊರಾಂಗಣ ಉದ್ಯಾನ ಸಭಾಂಗಣ, ಹವಾನಿಯಂತ್ರಿತ ಔತಣ ಕೂಟ ಸಭಾಂಗಣ, ಈಜುಕೊಳ, ರಿವರ್ ವೀವ್, ವಿಹಾರ ಸ್ಥಳಾವಕಾಶ, ಸಾಕಷ್ಟು ವಾಹನ ಪಾರ್ಕಿಂಗ್ ವ್ಯವಸ್ಥೆಗಳನ್ನು ಹೊಂದಿದ್ದು, ಸಭಾಂಗಣದ ವರ್ಣರಂಜಿತ ಲೋಕಾರ್ಪಣಾ ಸಮಾರಂಭದಲ್ಲಿ ಸಂಗೀತ ದಿಗ್ಗಜರಿಂದ ರಸ ಸಂಗೀತ ಮಂಜರಿ ಸಹಿತ ವಿವಿಧ ಮನೋರಂಜನಾ ಕಾರ್ಯಕ್ರಮಗಳಿರಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಹಾಗೂ ಈ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ಬುಕ್ಕಿಂಗಿಗಾಗಿ ಮೊಬೈಲ್ ಸಂಖ್ಯೆ 9008751883 ಹಾಗೂ 6364874313 ಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಮಾಲಕರಾದ ಅಬೂಬಕ್ಕರ್ ಎನ್.ಬಿ., ಅಶ್ರಫ್ ಎನ್.ಬಿ. ಹಾಗೂ ನಹೀಂ ಎನ್.ಬಿ. ಅವರು ತಿಳಿಸಿದ್ದಾರೆ.













0 comments:
Post a Comment