ಬಂಟ್ವಾಳ, ಅಕ್ಟೋಬರ್ 03, 2026 (ಕರಾವಳಿ ಟೈಮ್ಸ್) : ತಾಲೂಕಿನ ಕೆಲವೆಡೆ ಶುಕ್ರವಾರ ರಾತ್ರಿ ಸುರಿದ ಗಾಳಿ-ಮಳೆಗೆ ಹಲವೆಡೆ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿದೆ. ಪೆರ್ನೆ ಗ್ರಾಮದ ಹನುಮಾಜೆ ನಿವಾಸಿ ಬಾಗಿ ಕೋಂ ಚೆನ್ನಪ್ಪ ಮೊಗೇರ ಅವರ ಮನೆಗೆ ಬಾಗಶಃ ಹಾನಿ ಸಂಭವಿಸಿದೆ.
ಚೀಂಕ್ರಗುರಿ ನಿವಾಸಿ ನಳಿನಿ ಕೋಂ ಜನಾರ್ದನ ಅವರ ಮನೆಗೆ ಮರ ಬಿದ್ದು ಹಾನಿ ಸಂಭವಿಸಿದೆ. ವಿಟ್ಲ ಮುಡ್ನೂರು ಗ್ರಾಮದ ದಾದುಕೋಡಿ ಪಿಲಿಂಜ ನಿವಾಸಿ ಆನಂದ ಬಿನ್ ಈಶ್ವರ ನಾಯ್ಕ ಅವರ ವಾಸ್ತವ್ಯದ ಮನೆಯ ಮುಂಭಾಗದ ಶೀಟು ಛಾವಣಿ ಕುಸಿದು ಬಿದ್ದು ಹಾನಿ ಸಂಭವಿಸಿದೆ.
ದೇವಶ್ಯಮೂಡೂರು ಗ್ರಾಮದ ಉಂಡರು ಮನೆ ನಿವಾಸಿ ಪುರುಷೋತ್ತಮ್ ಅವರ ಮನೆಗೆ ಸಿಡಿಲು ಬಡಿದು ಭಾಗಶಹಃ ಹಾನಿಯಾಗಿದೆ.
ಅಪ್ಪೇರಿ ಪಾದೆ ನಿವಾಸಿ ಶ್ರೀಮತಿ ಜಯಂತಿ ಕೋಂ ವಿಜಯ ಭಂಡಾರಿ ಅವರ ಮನೆಗೆ ಮರ ಬಿದ್ದು ಭಾಗಷ ಹಾನಿ ಸಂಭವಿಸಿದೆ.
ಪುಣಚ ಗ್ರಾಮದ ಅಜೇರು ನಿವಾಸಿ ಪ್ರಭಾಕರ ಪ್ರಭು ಬಿನ್ ಶಂಕರನಾರಾಯಣ ಪ್ರಭು ಅವರ ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿ ಸಂಭವಿಸಿದೆ. ವಿಟ್ಲ ಮುಡ್ನೂರು ಗ್ರಾಮದ ಕೇಪುಳಗುಡ್ಡೆ ನಿವಾಸಿ ಸುಂದರಿ ಕೋಂ ಕುಂಞÂ ನಲಿಕೆ ಅವರ ಮನೆಗೆ ಮರ ಬಿದ್ದು ಭಾಗಶಃ ಹಾನಿ ಸಂಭವಿಸಿದೆ.


























0 comments:
Post a Comment