ಪೆರುವಾಯಿ ಹಾಗೂ ಸಂಗಬೆಟ್ಟು ಅಕ್ರಮ ಕೋಳಿ ಅಂಕಕ್ಕೆ ಪೊಲೀಸ್ ದಾಳಿ : ಒಟ್ಟು ಐವರು ವಶಕ್ಕೆ - Karavali Times ಪೆರುವಾಯಿ ಹಾಗೂ ಸಂಗಬೆಟ್ಟು ಅಕ್ರಮ ಕೋಳಿ ಅಂಕಕ್ಕೆ ಪೊಲೀಸ್ ದಾಳಿ : ಒಟ್ಟು ಐವರು ವಶಕ್ಕೆ - Karavali Times

728x90

3 October 2026

ಪೆರುವಾಯಿ ಹಾಗೂ ಸಂಗಬೆಟ್ಟು ಅಕ್ರಮ ಕೋಳಿ ಅಂಕಕ್ಕೆ ಪೊಲೀಸ್ ದಾಳಿ : ಒಟ್ಟು ಐವರು ವಶಕ್ಕೆ

ಬಂಟ್ವಾಳ, ಅಕ್ಟೋಬರ್ 03, 2026 (ಕರಾವಳಿ ಟೈಮ್ಸ್) : ಪೆರುವಾಯಿ ಎಂಬಲ್ಲಿನ ಸರಕಾರಿ ಜಾಗದಲ್ಲಿ ನಡೆಯುತ್ತಿದ್ದ ಅಕ್ರಮ ಕೋಳಿ ಅಂಕದ ಸ್ಥಳಕ್ಕೆ ವಿಟ್ಲ ಪೊಲೀಸರು ದಾಳಿ ನಡೆಸಿ ನಾಲ್ಕು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದ ಘಟನೆ ಅ 2 ರಂದು ಮಧ್ಯಾಹ್ನ ವೇಳೆ ನಡೆದಿದೆ. 
ಬಂಧಿತ ಆರೋಪಿಗಳನ್ನು ಕೃಷ್ಣಪ್ಪ (59), ಲಕ್ಷ್ಮಣ ನಾಯ್ಕ (38), ಶೋಭಿತ್ ರಾಜ್ (29) ಹಾಗೂ ಯುವರಾಜ್ (46) ಎಂದು ಹೆಸರಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ವಿಟ್ಲ ಪೊಲೀಸ್ ಠಾಣಾ ಪಿಎಸ್ಸೈ ರಾಮಕೃಷ್ಣ ಅವರ ನೇತೃತ್ವದ ಪೊಲೀಸರು ಈ ದಾಳಿ ಸಂಘಟಿಸಿದ್ದಾರೆ. ಘಟನಾ ಸ್ಥಳದಲ್ಲಿದ್ದ 3 ಕೋಳಿಗಳು, ಕೃತ್ಯಕ್ಕೆ ಉಪಯೋಗಿಸಿದ 3050/- ರೂಪಾಯಿ ನಗದು ಹಣ ಸಹಿತ ಇತರ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಗಬೆಟ್ಟು ಗ್ರಾಮದ ಮಂಚಕಲ್ಲು ಮನಿಪಾಲ್ ದೋಟ ಎಂಬಲ್ಲಿ ನಡೆಯುತ್ತಿದ್ದ ಅಕ್ರಮ ಕೋಳಿ ಅಂಕಕ್ಕೆ ದಾಳಿ ನಡೆಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು ಕೋಳಿ ಸಹಿತ ಓರ್ವ ಆರೋಪಿಯನ್ನು ವಶಕ್ಕೆ ಪಡೆದುಕೊಂಡ ಘಟನೆ ಅ 2 ರಂದು ನಡೆದಿದೆ. 
ಬಂಧಿತ ಆರೋಪಿಯನ್ನು ಬಿ ಕಸ್ಬಾ ಗ್ರಾಮದ ಮಂಡಾಡಿ ನಿವಾಸಿ ಚಂದ್ರ (52) ಎಂದು ಹೆಸರಿಸಲಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್ಸೈ ಲೋಲಾಕ್ಷ ಕೆ ಅವರ ನೇತೃತ್ವದ ಪೊಲೀಸರು ಈ ದಾಳಿ ಸಂಘಟಿಸಿದ್ದು, ದಾಳಿ ವೇಳೆ 1400/- ರೂಪಾಯಿ ಮೌಲ್ಯದ 14 ಕೋಳಿಗಳನ್ನು ಹಾಗೂ 660/- ರೂಪಾಯಿ ನಗದು ಹಣ ಸಹಿತ ಒಟ್ಟು 2060/- ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
  • Blogger Comments
  • Facebook Comments

0 comments:

Post a Comment

Item Reviewed: ಪೆರುವಾಯಿ ಹಾಗೂ ಸಂಗಬೆಟ್ಟು ಅಕ್ರಮ ಕೋಳಿ ಅಂಕಕ್ಕೆ ಪೊಲೀಸ್ ದಾಳಿ : ಒಟ್ಟು ಐವರು ವಶಕ್ಕೆ Rating: 5 Reviewed By: karavali Times
Scroll to Top