ತಲೆಮೊಗರು : ಅಕ್ರಮ ಮರಳು ಸಂಗ್ರಹ ಪ್ರಕರಣ ಬೇಧಿಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು - Karavali Times ತಲೆಮೊಗರು : ಅಕ್ರಮ ಮರಳು ಸಂಗ್ರಹ ಪ್ರಕರಣ ಬೇಧಿಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು - Karavali Times

728x90

30 October 2026

ತಲೆಮೊಗರು : ಅಕ್ರಮ ಮರಳು ಸಂಗ್ರಹ ಪ್ರಕರಣ ಬೇಧಿಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು

ಬಂಟ್ವಾಳ, ಅಕ್ಟೋಬರ್ 30, 2026 (ಕರಾವಳಿ ಟೈಮ್ಸ್) : ಸಜಿಪನಡು ಗ್ರಾಮದ ತಲೆಮೊಗರು ಎಂಬಲ್ಲಿನ ನದಿ ತೀರದ ಅಡಿಕೆ ತೋಟದ ಬಳಿ ಹಾದು ಹೋಗುವ ಕಾಲುದಾರಿಯಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿರುವ ಪ್ರಕರಣ ಬೇಧಿಸಿರುವ ಬಂಟ್ವಾಳ ಗ್ರಾಮಾಂತರ ಪೊಲೀಸರು ಮರಳು ಚೀಲಗಳನ್ನು ವಶಪಡಿಸಿಕೊಂಡ ಘಟನೆ ಅ 28 ರಂದು ರಾತ್ರಿ ವೇಳೆ ನಡೆದಿದೆ. 

ಬಂಟ್ವಾಳ ಗ್ರಾಮಾಂತರ ಠಾಣಾ ಪಿಎಸ್ಸೈ ಲೋಲಾಕ್ಷ ಕೆ ಅವರ ನೇತೃತ್ವದ ಪೊಲೀಸರು ಖಚಿತ ಮಾಹಿತಿ ಮೇರೆಗೆ ಈ ಕಾರ್ಯಾಚರಣೆ ನಡೆಸಿದ್ದು, ಸ್ಥಳೀಯ ನಿವಾಸಿ ಸತೀಶ್ ಸಪಲ್ಯ ಎಂಬವರಿಗೆ ಸೇರಿದ ಅಡಿಕೆ ತೋಟದ ಬಳಿ ಹಾದು ಹೋಗುವ ಕಾಲು ದಾರಿಯಲ್ಲಿ ಯಾರೋ ಮರಳು ಕಳ್ಳರು ಸಿಮೆಂಟ್ ಚೀಲದಲ್ಲಿ ಮರಳು ಸಂಗ್ರಹಿಸಿರುವುದು ಕಂಡು ಬಂದಿದೆ. 

ದಾಳಿ ವೇಳೆ ಪೊಲೀಸರು ಸ್ಥಳದಲ್ಲಿದ್ದ ಸುಮಾರು 1750/- ರೂಪಾಯಿ ಮೌಲ್ಯದ 38 ಸಿಮೆಂಟ್ ಚೀಲದಲ್ಲಿದ್ದ ಸುಮಾರು 50 ಕೆಜಿಯಷ್ಟು ಮರಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ತಲೆಮೊಗರು : ಅಕ್ರಮ ಮರಳು ಸಂಗ್ರಹ ಪ್ರಕರಣ ಬೇಧಿಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು Rating: 5 Reviewed By: karavali Times
Scroll to Top