ಬಂಟ್ವಾಳ, ಅಕ್ಟೋಬರ್ 30, 2026 (ಕರಾವಳಿ ಟೈಮ್ಸ್) : ಪುದು ಗ್ರಾಮದ ಮಾರಿಪಳ್ಳ ಸಮೀಪದ 10ನೇ ಮೈಲಿಕಲ್ಲು ಎಂಬಲ್ಲಿನ ಒಳ ಕಾಂಕ್ರಿಟ್ ರಸ್ತೆಯಲ್ಲಿ ಸ್ಕೂಟರ್ ನಿಯಂತ್ರಣ ಮೀರಿ ರಸ್ತೆಗೆ ಬಿದ್ದು ಸವಾರಿಣಿ ಹಾಗೂ ಸಹಸವಾರಿಣಿ ಗಾಯಗೊಂಡ ಘಟನೆ ಅ 28 ರಂದು ಸಂಭವಿಸಿದೆ.
ಗಾಯಗೊಂಡವರನ್ನು ಸ್ಕೂಟರ್ ಸವಾರಿಣಿ ಸಬೀನಾ ಹಾಗೂ ಸಹಸವಾರಿಣಿ ರೊಶಿನಾಬಿ ಎಂದು ಹೆಸರಿಸಲಾಗಿದೆ. 10ನೇ ಮೈಲಿಕಲ್ಲು ನಿವಾಸಿ ಹುಸೈನ್ ಶಬೀರ್ ಅವರಿಗೆ ಸೇರಿದ ಸ್ಕೂಟರಿನಲ್ಲಿ ಇವರು ಸಂಚರಿಸುತ್ತಿದ್ದ ವೇಳೆ ನಿಯಂತ್ರಣ ಮೀರಿ ರಸ್ತೆಗೆ ಬಿದ್ದು ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ಇಬ್ಬರು ಸವಾರರಿಗೂ ಗಾಯಗಳಾಗಿದ್ದು, ಅವರನ್ನು ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಶಬೀರ್ ಅವರು ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











0 comments:
Post a Comment