ಮದುವೆ ಸಭಾಂಗಣದಲ್ಲಿ ಬಾಲಕಿಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿದ ಕಳ್ಳಿಯನ್ನು 24 ಗಂಟೆಯೊಳಗೆ ಬಂಧಿಸಿದ ಮಂಗಳೂರು ಪೊಲೀಸರು - Karavali Times ಮದುವೆ ಸಭಾಂಗಣದಲ್ಲಿ ಬಾಲಕಿಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿದ ಕಳ್ಳಿಯನ್ನು 24 ಗಂಟೆಯೊಳಗೆ ಬಂಧಿಸಿದ ಮಂಗಳೂರು ಪೊಲೀಸರು - Karavali Times

728x90

21 October 2026

ಮದುವೆ ಸಭಾಂಗಣದಲ್ಲಿ ಬಾಲಕಿಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿದ ಕಳ್ಳಿಯನ್ನು 24 ಗಂಟೆಯೊಳಗೆ ಬಂಧಿಸಿದ ಮಂಗಳೂರು ಪೊಲೀಸರು

 ಮಂಗಳೂರು, ಅಕ್ಟೋಬರ್ 21, 2026 (ಕರಾವಳಿ ಟೈಮ್ಸ್) : ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಗುವಿನ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಎಗರಿಸಿದ ಕಳ್ಳಿಯನ್ನು 24 ಗಂಟೆಯೊಳಗೆ ಬೇಧಿಸಿದ ಬರ್ಕೆ ಪೊಲೀಸರು ಚಿನ್ನದ ಸರ ಸಹಿತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಬಂಧಿತ ಕಳ್ಳಿಯನ್ನು ಮೂಲತಃ ಉಳ್ಳಾಲ-ಕೋಟೆಪುರ ನಿವಾಸಿ, ಪ್ರಸ್ತುತ ಅಕ್ಕರೆಕರೆ ಆರ್.ಸಿ.ಸಿ. ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿರುವ ಮಿನ್ನತ್ (42) ಎಂದು ಹೆಸರಿಸಲಾಗಿದೆ. ಅಕ್ಟೋಬರ್ 18 ರಂದು ಮಂಗಳೂರಿನ ಕೊಡಿಯಾಲ್ ಬೈಲ್ ನಲ್ಲಿರುವ ಟಿ.ಎಂ.ಎ. ಪೈ ಹಾಲ್ ನಲ್ಲಿ ನಡೆದ ವಿವಾಹ ಸಮಾರಂಭದ ಸಂದರ್ಭದಲ್ಲಿ ಮಧ್ಯಾಹ್ನ 3 ವರ್ಷ 6 ತಿಂಗಳ ಬಾಲಕಿಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಅಪರಿಚಿತ ಮಹಿಳೆಯೊಬ್ಬರು ಎಳೆದುಕೊಂಡು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಚಿನ್ನದ ಸರವು ಪೆಂಡೆಂಟ್ ಹೊಂದಿದ್ದು, ಸುಮಾರು 10 ಗ್ರಾಂ ತೂಕ ಹಾಗೂ ಅಂದಾಜು 1.35 ಲಕ್ಷ ರೂಪಾಯಿ ಮೌಲ್ಯದ್ದಾಗಿತ್ತು. ಈ ಬಗ್ಗೆ ಶ್ರೀಮತಿ ಶೀಮಾ ಬಾನು ಅವರು ನೀಡಿದ ದೂರಿನಂತೆ ಬರ್ಕೆ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ಈ ಬಗ್ಗೆ ತನಿಖೆ ಕೈಗೊಂಡ ಬರ್ಕೆ ಪೊಲೀಸರು ಅ 19 ರಂದು ಅಂದರೆ ಘಟನೆ ನಡೆದು 24 ಗಂಟೆಯೊಳಗೆ ಆರೋಪಿ ಮಹಿಳೆಯನ್ನು ಬಂಧಿಸಿದ್ದು, ಆಕೆಯ ವಶದಿಂದ ಕಳವು ಮಾಡಿದ ಮಗುವಿನ 10 ಗ್ರಾಂ ತೂಕದ ಚಿನ್ನದ ಸರವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿತೆಯನ್ನು ಅ 20 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಆರೋಪಿ ಮಹಿಳೆಯ ವಿರುದ್ದ ಉಳ್ಳಾಲ ಪೆÇಲೀಸ್ ಠಾಣೆಯಲ್ಲಿ 3 ಕಳವು ಪ್ರಕರಣ ಹಾಗೂ ಕೊಣಾಜೆ ಪೆÇಲೀಸ್ ಠಾಣೆಯಲ್ಲಿ 5 ಕಳವು ಪ್ರಕರಣಗಳು ಸೇರಿ ಒಟ್ಟು 9 ಪ್ರಕರಣಗಳು ದಾಖಲಾಗಿ ನ್ಯಾಯಾಲಯದ ವಿಚಾರಣೆಯಲ್ಲಿರುತ್ತದೆ. ಈಕೆಯು ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವುದರಿಂದ ಹೊಸ ಭಾರತೀಯ ನ್ಯಾಯ ಸಂಹಿತೆಯಲ್ಲಿ ಕಲಂ 112 ಸಂಘಟಿತ ಅಪರಾಧ ಸೇರಿಸಿ ತನಿಖೆ ಕೈಗೊಳ್ಳಲಾಗುತ್ತಿದೆ. ಈ ಪತ್ತೆ ಕಾರ್ಯದಲ್ಲಿ ಬರ್ಕೆ ಠಾಣಾ ಪಿಎಸ್ಸೈಗಳಾದ ಗುರುಪ್ಪ ಕಾಂತಿ, ವಿನಾಯಕ ತೋರಗಲ್ ಹಾಗೂ ಕ್ರೈಂ ಸಿಬ್ಬಂದಿಗಳು ಭಾಗವಹಿಸಿದ್ದರು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಮದುವೆ ಸಭಾಂಗಣದಲ್ಲಿ ಬಾಲಕಿಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿದ ಕಳ್ಳಿಯನ್ನು 24 ಗಂಟೆಯೊಳಗೆ ಬಂಧಿಸಿದ ಮಂಗಳೂರು ಪೊಲೀಸರು Rating: 5 Reviewed By: karavali Times
Scroll to Top