ಉಪ್ಪಿನಂಗಡಿ, ಅಕ್ಟೋಬರ್ 19, 2026 (ಕರಾವಳಿ ಟೈಮ್ಸ್) : ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಶೆಣೈ ರಸ್ತೆ ಬಾರ್ ಸಮೀಪದಲ್ಲಿ ತಲವಾರು ಹಿಡಿದು ಗಲಾಟೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದು ಇನ್ನೊಬ್ಬಾತನ ಬಂಧನ ಆಗಬೇಕಿದೆ.
ಬಂಧಿತರನ್ನು ಪುತ್ತೂರು ಚಿಕ್ಕಮುಡ್ನೂರು ನಿವಾಸಿ ಮಂಜುನಾಥ (32), ಪುತ್ತೂರು ನೆಕ್ಕಿಲಾಡಿ ನಿವಾಸಿ ವಿಶ್ವನಾಥ (30) ಎಂದು ಹೆಸರಿಸಲಾಗಿದ್ದು, ಮುನ್ನ ಅಲಿಯಾಸ್ ಗೋಪಾಲ ಶೆಟ್ಟಿ ಎಂಬಾತನ ಬಂಧನ ಬಾಕಿ ಇದೆ. ಆರೋಪಿಗಳ ವಿಚಾರಣೆ ವೇಳೆ ಕುಡಿದ ಮತ್ತಿನಲ್ಲಿ ಮುನ್ನ ಎಂಬಾತನು ಮಂಜುನಾಥ್ ಎಂಬಾತನ ಮನೆಯವರಿಗೆ ಅವ್ಯಾಚವಾಗಿ ಬೈದ ಹಿನ್ನೆಲೆಯಲ್ಲಿ ಮಾತಿನ ಚಕಮಕಿ ನಡೆದು ಗಲಾಟೆಯಾಗಿರುವುದಾಗಿ ತಿಳಿದು ಬಂದಿದ್ದು, ಬಂಧಿತರ ವಿಚಾರಣೆ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳದ ಸಮೀಪದ ಬಾರ್ ಮ್ಯಾನೇಜರ್ ಲೋಕೇಶ್ ಎಂಬವರು ನೀಡಿದ ದೂರಿನ ಮೇರೆಗೆ ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪೈಕಿ ಮಂಜುನಾಥ್ ಎಂಬಾತನ ವಿರುದ್ಧ ಈ ಹಿಂದೆ ಉಪ್ಪಿನಂಗಡಿ ಪೆÇಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.















0 comments:
Post a Comment