ನರಿಕೊಂಬು : ಅಡಿಕೆ ತೋಟದಿಂದ 15 ಸಾವಿರ ಮೌಲ್ಯದ ಅಡಿಕೆ ಕಳವು - Karavali Times ನರಿಕೊಂಬು : ಅಡಿಕೆ ತೋಟದಿಂದ 15 ಸಾವಿರ ಮೌಲ್ಯದ ಅಡಿಕೆ ಕಳವು - Karavali Times

728x90

19 October 2026

ನರಿಕೊಂಬು : ಅಡಿಕೆ ತೋಟದಿಂದ 15 ಸಾವಿರ ಮೌಲ್ಯದ ಅಡಿಕೆ ಕಳವು

ಬಂಟ್ವಾಳ, ಅಕ್ಟೋಬರ್ 19, 2026 (ಕರಾವಳಿ ಟೈಮ್ಸ್) : ನರಿಕೊಂಬು ಗ್ರಾಮದ ತಾರಿಪಡ್ಪು ಎಂಬಲ್ಲಿನ ತೋಟದಿಂದ ಅಡಿಕೆ ಕಳವುಗೈದ ಘಟನೆ ಅ 18 ರಂದು ಮಧ್ಯಾಹ್ನ ವೇಳೆ ಸಂಭವಿಸಿದ್ದು, ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮಂಗಳೂರು-ಫಳ್ನೀರ್ ಎಂಬಲ್ಲಿ ವಾಸವಾಗಿರುವ ನಮಿತಾ ರಾವ್ ಕೋಂ ಗುರುದತ್ತ ರಾವ್ (60) ಎಂಬವರಿಗೆ ಸೇರಿದ ನರಿಕೊಂಬು ಗ್ರಾಮದ ತಾರಿಪಡ್ಪು ಎಂಬಲ್ಲಿರುವ 8 ಎಕ್ರೆ ಅಡಿಕೆ ತೋಟದಲ್ಲಿ ಈ ಕಳವು ಕೃತ್ಯ ನಡೆದಿದೆ. ಇವರ ತೋಟವನ್ನು ಲಕ್ಕಪ್ಪ ಮತ್ತು ಗಣಪತಿ ಎಂಬವರು ನೋಡಿಕೊಳ್ಳುತ್ತಿದ್ದು, ಇವರು ವಾರಕ್ಕೊಮ್ಮೆ ನರಿಕೊಂಬುಗೆ ಬಂದು ಹೋಗುವುದಾಗಿದೆ. 

ಅ 18 ರಂದು ಗಣಪತಿ ಅವರು ಕರೆ ಮಾಡಿ ತೋಟದಲ್ಲಿ ಅಡಿಕೆ ಕಳವು ಆಗಿರುವ ಬಗ್ಗೆ ತಿಳಿಸಿದ ಹಿನ್ನಲೆಯಲ್ಲಿ ನಮಿತಾ ಅವರು ಬಂದು ನೋಡಿದಾಗ ಅಡಿಕೆ ಕಳವು ಆಗಿರುವುದು ಕಂಡು ಬಂದಿದೆ. ಅಡಿಕೆ ತೋಟದಿಂದ ಅ 18 ರಂದು ಮದ್ಯಾಹ್ನ 1 ಗಂಟೆಯಿಂದ 3 ಗಂಟೆಯ ಮದ್ಯೆ ಸುಮಾರು 15 ಸಾವಿರ ರೂಪಾಯಿ ಮೌಲ್ಯದ 2 ಗೋಣಿ ಅಡಿಕೆ ಕಳವುಗೈಯಲಾಗಿದೆ ಎಂದು ನೀಡಿರುವ ದೂರಿನಂತೆ ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ನರಿಕೊಂಬು : ಅಡಿಕೆ ತೋಟದಿಂದ 15 ಸಾವಿರ ಮೌಲ್ಯದ ಅಡಿಕೆ ಕಳವು Rating: 5 Reviewed By: karavali Times
Scroll to Top