ಸುಜೀರ್-ಕಾನ : ಅಕ್ರಮ ಮರಳು ಸಾಗಾಟದ ಪಿಕಪ್ ಬಂಟ್ವಾಳ ಗ್ರಾಮಾಂತರ ಪೊಲೀಸರ ವಶಕ್ಕೆ - Karavali Times ಸುಜೀರ್-ಕಾನ : ಅಕ್ರಮ ಮರಳು ಸಾಗಾಟದ ಪಿಕಪ್ ಬಂಟ್ವಾಳ ಗ್ರಾಮಾಂತರ ಪೊಲೀಸರ ವಶಕ್ಕೆ - Karavali Times

728x90

3 October 2026

ಸುಜೀರ್-ಕಾನ : ಅಕ್ರಮ ಮರಳು ಸಾಗಾಟದ ಪಿಕಪ್ ಬಂಟ್ವಾಳ ಗ್ರಾಮಾಂತರ ಪೊಲೀಸರ ವಶಕ್ಕೆ

ಬಂಟ್ವಾಳ, ಅಕ್ಟೋಬರ್ 03, 2026 (ಕರಾವಳಿ ಟೈಮ್ಸ್) : ಪಿಕಪ್ ವಾಹನದಲ್ಲಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಪ್ರಕರಣ ಬೇಧಿಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು ಮರಳು ಸಹಿತ ಪಿಕಪ್ ವಾಹನ ವಶಕ್ಕೆ ಪಡೆದುಕೊಂಡ ಘಟನೆ ಪುದು ಗ್ರಾಮದ ಸುಜೀರ್-ಕಾನ ಎಂಬಲ್ಲಿ ಅ 3 ರಂದು ಮುಂಜಾನೆ ವೇಳೆ ನಡೆದಿದೆ. 

ಪೊಲೀಸರ ಕಾರ್ಯಾಚರಣೆ ವೇಳೆ ಪಿಕಪ್ ಚಾಲಕ ಜಿಗಿದು ಪರಾರಿಯಾಗಿದ್ದಾನೆ. ಸುಮಾರು 3 ಸಾವಿರ ರೂಪಾಯಿ ಮೌಲ್ಯದ ಮರಳು ಹಾಗೂ ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ಪಿಕಪ್ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಸುಜೀರ್-ಕಾನ : ಅಕ್ರಮ ಮರಳು ಸಾಗಾಟದ ಪಿಕಪ್ ಬಂಟ್ವಾಳ ಗ್ರಾಮಾಂತರ ಪೊಲೀಸರ ವಶಕ್ಕೆ Rating: 5 Reviewed By: karavali Times
Scroll to Top