ಬಂಟ್ವಾಳ, ಅಕ್ಟೋಬರ್ 03, 2026 (ಕರಾವಳಿ ಟೈಮ್ಸ್) : ಸಜಿಪಮೂಡ ಗ್ರಾಮದ ಕಂದೂರು ಎಂಬಲ್ಲಿ ಟೆಂಪೋ ಡಿಕ್ಕಿ ಹೊಡೆದು ಸ್ಕೂಟರ್ ಸವಾರರಿಬ್ಬರು ಗಾಯಗೊಂಡ ಘಟನೆ ಅ 1 ರಂದು ಸಂಭವಿಸಿದೆ.
ಗಾಯಗೊಂಡ ಸ್ಕೂಟರ್ ಸವಾರರನ್ನು ಸಜಿಪಮೂಡ ಗ್ರಾಮದ ಕೋಮಾಲಿ ನಿವಾಸಿ ಜಯರಾಮ (55) ಹಾಗೂ ದೇವಕಿ ಎಂದು ಹೆಸರಿಸಲಾಗಿದೆ. ಇವರು ಸೆ 1 ರಂದು ಮಧ್ಯಾಹ್ನ 2.45ರ ವೇಳೆಗೆ ನಂದಾವರದಿಂದ ಹೊರಟು ಹೋಗುತ್ತಿದ್ದಾಗ ಕಂದೂರು ತಲುಪಿದಾಗ ಹಿಂದಿನಿಂದ ಅಂದರೆ ಮೆಲ್ಕಾರ್ ಕಡೆಯಿಂದ ಮೊಹಮ್ಮದ್ ನವಾಜ್ ಎಂಬವರು ಚಲಾಯಿಸಿಕೊಂಡು ಬಂದ ಟೆಂಪೋ ಓವರ್ ಟೇಕ್ ಮಾಡುವ ಭರದಲ್ಲಿ ಸ್ಕೂಟರಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ಸ್ಕೂಟರ್ ಸವಾರರಿಬ್ಬರು ಗಾಯಗೊಂಡಿದ್ದು, ಅವರನ್ನು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













0 comments:
Post a Comment